ಇಸ್ರೇಲ್-ಹಮಾಸ್ ಯುದ್ಧ: ವೆಸ್ಟ್ ಬ್ಯಾಂಕ್ ನಲ್ಲಿನ ಹಮಾಸ್ ಉಪ ನಾಯಕನ ಮನೆ ಧ್ವಂಸಗೊಳಿಸಿದ ಇಸ್ರೇಲ್ ಸೇನೆ

ಗಾಜಾದಲ್ಲಿ ಇಸ್ಲಾಮಿಕ್ ಗುಂಪು ಹಮಾಸ್ ವಿರುದ್ಧ ಯುದ್ಧ ನಡೆಯುತ್ತಿರುವ ಇಸ್ರೇಲಿ ಸೇನೆ ಇದೀಗ ಗಡಿಪಾರು ಮಾಡಲಾಗಿರುವ ಹಮಾಸ್ ನಂಬರ್ 2 ಉಗ್ರ ಸಲೇಹ್ ಅಲ್-ಅರುರಿಯ ವೆಸ್ಟ್ ಬ್ಯಾಂಕ್ ಮನೆಯನ್ನು ಧ್ವಂಸಗೊಳಿಸಿದೆ.
ಗಾಜಾ ಮೇಲೆ ಇಸ್ರೇಲ್ ದಾಳಿ
ಗಾಜಾ ಮೇಲೆ ಇಸ್ರೇಲ್ ದಾಳಿ

ವೆಸ್ಟ್ ಬ್ಯಾಂಕ್: ಗಾಜಾದಲ್ಲಿ ಇಸ್ಲಾಮಿಕ್ ಗುಂಪು ಹಮಾಸ್ ವಿರುದ್ಧ ಯುದ್ಧ ನಡೆಯುತ್ತಿರುವ ಇಸ್ರೇಲಿ ಸೇನೆ ಇದೀಗ ಗಡಿಪಾರು ಮಾಡಲಾಗಿರುವ ಹಮಾಸ್ ನಂಬರ್ 2 ಉಗ್ರ ಸಲೇಹ್ ಅಲ್-ಅರುರಿಯ ವೆಸ್ಟ್ ಬ್ಯಾಂಕ್ ಮನೆಯನ್ನು ಧ್ವಂಸಗೊಳಿಸಿದೆ.

ಇಸ್ರೇಲ್ ಸೇನೆ ರಾಮಲ್ಲಾಹ್ ಬಳಿಯ ಅರೂರಾ ಗ್ರಾಮಕ್ಕೆ ಪ್ರವೇಶಿಸಿದೆ. ಅಲ್ಲಿ ಮನೆಯನ್ನು ಧ್ವಂಸಗೊಳಿಸುವ ಸಮಯದಲ್ಲಿ ತಮ್ಮ ಮೇಲೆ ಸ್ಥಳೀಯರು ಕಲ್ಲುಗಳನ್ನು ಎಸೆದಿದ್ದು ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಅರೂರಿ ಹಲವಾರು ದಾಳಿಗಳ ಮಾಸ್ಟರ್ ಮೈಂಡ್ ಎಂದು ಇಸ್ರೇಲ್ ಆರೋಪಿಸಿದೆ. ಅರೂರಿ 2017ರಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್‌ಗೆ ಉಪನಾಯಕರಾಗಿ ಆಯ್ಕೆಯಾಗಿದ್ದನು. ಅಧಿಕೃತವಾಗಿ ಗುಂಪಿನ ಎರಡನೇ ಮುಖಂಡ ಎಂದು ಹೆಸರಿಸಲಾಯಿತು.

ಅಕ್ಟೋಬರ್ 21ರಂದು ಅರುರಿಯ ಸಹೋದರ ಮತ್ತು ಅವರ ಒಂಬತ್ತು ಸೋದರಳಿಯರು ಸೇರಿದಂತೆ ಸುಮಾರು 20 ಜನರನ್ನು ಇಸ್ರೇಲಿ ಮಿಲಿಟರಿ ಬಂಧಿಸಿದೆ ಎಂದು ಗ್ರಾಮದ ಮೇಯರ್ ಅಲಿ ಅಲ್-ಖಾಸಿಬ್ ತಿಳಿಸಿದ್ದಾರೆ.

ಇಸ್ರೇಲಿ ಕಾರಾಗೃಹಗಳಲ್ಲಿ ಸುಮಾರು ಎರಡು ದಶಕಗಳನ್ನು ಕಳೆದ ನಂತರ, ಅರೂರಿ ದೇಶಭ್ರಷ್ಟನಾಗಿ 2010ರಲ್ಲಿ ಬಿಡುಗಡೆಯಾಗಿದ್ದನು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com