ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಬಿಜೆಪಿ ಮಾಡುತ್ತಿರುವುದಕ್ಕೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ: ರಾಹುಲ್ ಗಾಂಧಿ

ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಗುರಿಯಾಗಿಸಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆಡಳಿತ ಪಕ್ಷವು ಯಾವುದೇ ಬೆಲೆ ತೆತ್ತಾದರೂ ಅಧಿಕಾರವನ್ನು ಪಡೆಯಲು ಹೊರಟಿದೆ. ಅವರ ಕಾರ್ಯಗಳಲ್ಲಿ 'ಹಿಂದೂ ಅನ್ನುವುದು ಏನೂ ಇಲ್ಲ' ಎಂದು ಹೇಳಿದ್ದಾರೆ.
Published on

ಲಂಡನ್: ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಗುರಿಯಾಗಿಸಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆಡಳಿತ ಪಕ್ಷವು ಯಾವುದೇ ಬೆಲೆ ತೆತ್ತಾದರೂ ಅಧಿಕಾರವನ್ನು ಪಡೆಯಲು ಹೊರಟಿದೆ. ಅವರ ಕಾರ್ಯಗಳಲ್ಲಿ 'ಹಿಂದೂ ಅನ್ನುವುದು ಏನೂ ಇಲ್ಲ' ಎಂದು ಹೇಳಿದ್ದಾರೆ.

ಫ್ರಾನ್ಸ್‌ನ ಪ್ರಮುಖ ಸಾಮಾಜಿಕ ವಿಜ್ಞಾನ ಸಂಸ್ಥೆ ಪ್ಯಾರಿಸ್‌ನ ಸೈನ್ಸಸ್ ಪೊ. ವಿಶ್ವವಿದ್ಯಾಲಯದಲ್ಲಿ ಇಂದು ಮಾತನಾಡಿದ ರಾಹುಲ್ ಗಾಂಧಿ, ತಮ್ಮ 'ಭಾರತ್ ಜೋಡೋ ಯಾತ್ರೆ', ವಿರೋಧ ಪಕ್ಷಗಳ ಮೈತ್ರಿಯಿಂದ ಭಾರತದ ಪ್ರಜಾಪ್ರಭುತ್ವ ರಚನೆಗಳನ್ನು ಉಳಿಸುವ ಹೋರಾಟ, ಬದಲಾಗುತ್ತಿರುವ ಜಾಗತಿಕ ಕ್ರಮ ಮತ್ತು ಇತರ ಚರ್ಚೆಗಳ ಕುರಿತು ಮಾತನಾಡಿದರು. 

'ಭಾರತದ ಆತ್ಮ' ಕ್ಕಾಗಿ ಹೋರಾಡಲು ಪ್ರತಿಪಕ್ಷಗಳು ಬದ್ಧವಾಗಿವೆ. ಪ್ರಸ್ತುತ 'ಪ್ರಕ್ಷುಬ್ಧತೆ'ಯಿಂದ ದೇಶವು 'ಅಪಾಯಕಾರಿಯಾಗಿ ಹೊರಬರುತ್ತದೆ'. ದೇಶದಲ್ಲಿ 'ಹಿಂದೂ ರಾಷ್ಟ್ರೀಯತೆಯ' ಉದಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ನಾನು ಗೀತಾ, ಅನೇಕ ಉಪನಿಷತ್ತುಗಳನ್ನು ಓದಿದ್ದೇನೆ. ನಾನು ಅನೇಕ ಹಿಂದೂ(ಧರ್ಮಕ್ಕೆ ಸಂಬಂಧಿಸಿದ) ಪುಸ್ತಕಗಳನ್ನು ಓದಿದ್ದೇನೆ. ಬಿಜೆಪಿ ಮಾಡುವುದರಲ್ಲಿ ಹಿಂದೂ(ಧರ್ಮದಂತೆಯೇ) ಏನೂ ಇಲ್ಲ, ಇಲ್ಲವೇ ಇಲ್ಲ ಎಂದು ಹೇಳಿದರು.

'ನಾನು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಪುಸ್ತಕದಲ್ಲಿ ದುರ್ಬಲರನ್ನು ಭಯಭೀತಗೊಳಿಸಬೇಕು. ಅವರಿಗೆ ಹಾನಿ ಮಾಡಬೇಕೆಂದು ಎಲ್ಲೂ ಓದಿಲ್ಲ. ಆದ್ದರಿಂದ, ಈ ಕಲ್ಪನೆ, ಈ ಪದ, ಹಿಂದೂ ರಾಷ್ಟ್ರೀಯತೆ, ಇದು ತಪ್ಪು ಪದ ಎಂದು ಹೇಳಿದ್ದಾರೆ.

ಬಿಜೆಪಿ ಹಿಂದೂ ರಾಷ್ಟ್ರೀಯವಾದಿ ಅಲ್ಲ. ಅವರಿಗೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲ. ಅವರು ಯಾವುದೇ ಬೆಲೆ ತೆತ್ತಾದರೂ ಅಧಿಕಾರವನ್ನು ಪಡೆಯಲು ಬಯಸುತ್ತಾರೆ. ಅಧಿಕಾರವನ್ನು ಪಡೆಯಲು ಏನು ಬೇಕಾದರೂ ಮಾಡುತ್ತಾರೆ. ಅವರು ಕೆಲವೇ ಜನರ ಪ್ರಾಬಲ್ಯವನ್ನು ಬಯಸುತ್ತಾರೆ. ಅವರು ಹಿಂದೂ ಧರ್ಮದಂತೆ ಎಲ್ಲೂ ನಡೆದಿಲ್ಲ ಎಂದು ಹೇಳಿದರು. 

ದೇಶದಲ್ಲಿ ದಲಿತರು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ಹಿಂಸಾಚಾರದ ಪ್ರಕರಣಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, ಈ ಸಮಸ್ಯೆಯನ್ನು ನಿಭಾಯಿಸಲು "ರಾಜಕೀಯ ಕಲ್ಪನೆಯ" ಅಗತ್ಯವಿದೆ ಮತ್ತು ವಿರೋಧ ಪಕ್ಷಗಳು ಆ ಹೋರಾಟಕ್ಕೆ ಬದ್ಧವಾಗಿವೆ ಎಂದು ಹೇಳಿದರು.

ಬಿಜೆಪಿ ಮತ್ತು ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಮಾಡಲು ಪ್ರಯತ್ನಿಸುತ್ತಿರುವ ಮೂಲಭೂತ ಉದ್ದೇಶವು ಕೆಳ ಜಾತಿಗಳು, ಇತರ ಹಿಂದುಳಿದ ಜಾತಿಗಳು, ಬುಡಕಟ್ಟುಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭಿವ್ಯಕ್ತಿ, ಭಾಗವಹಿಸುವಿಕೆಯನ್ನು ನಿಲ್ಲಿಸುವುದಾಗಿದೆ. ನನ್ನ ಮಟ್ಟಿಗೆ, ದಲಿತ ವ್ಯಕ್ತಿ ಅಥವಾ ಮುಸ್ಲಿಂ ವ್ಯಕ್ತಿ, ಬುಡಕಟ್ಟು ವ್ಯಕ್ತಿ, ಮೇಲ್ಜಾತಿ ವ್ಯಕ್ತಿ, ಯಾರೇ ಆಗಲಿ ನಿಂದನೆಗೆ ಒಳಗಾಗುವ, ಹಲ್ಲೆಗೊಳಗಾಗುವ ಭಾರತ ನನಗೆ ಬೇಕಾದ ಭಾರತವಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com