ಮಾಲ್ಡೀವ್ಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾ ಪರ ಒಲವಿರುವ ಮೊಹಮ್ಮದ್ ಮುಯಿಜ್ಜುಗೆ ಗೆಲುವು

ಮಾಲ್ಡೀವ್ಸ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧ ಪಕ್ಷದ ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ಅಭ್ಯರ್ಥಿ ಡಾ.ಮಹಮ್ಮದ್ ಮುಯಿಝು ಗೆಲುವು ಸಾಧಿಸಿದ್ದಾರೆ. ಕಠಿಣ ಸ್ಪರ್ಧೆಯಲ್ಲಿ ಹಾಲಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರನ್ನು ಮುಯಿಝು ಸೋಲಿಸಿದ್ದಾರೆ.
Mohamed Muiz
Mohamed Muiz

ಮಾಲೆ: ಮಾಲ್ಡೀವ್ಸ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧ ಪಕ್ಷದ ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ಅಭ್ಯರ್ಥಿ ಡಾ.ಮಹಮ್ಮದ್ ಮುಯಿಝು ಗೆಲುವು ಸಾಧಿಸಿದ್ದಾರೆ. ಕಠಿಣ ಸ್ಪರ್ಧೆಯಲ್ಲಿ ಹಾಲಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರನ್ನು ಮುಯಿಝು ಸೋಲಿಸಿದ್ದಾರೆ. 

ಪ್ರಾಥಮಿಕ ಚುನಾವಣಾ ಫಲಿತಾಂಶದಲ್ಲಿ ಮುಯಿಝು ಶೇ.53 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಅದೇ ಸಮಯದಲ್ಲಿ, ಹಾಲಿ ಅಧ್ಯಕ್ಷ ಮತ್ತು ಆಡಳಿತಾರೂಢ ಮಾಲ್ಡೀವ್ಸ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ನಾಯಕ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರು 46 ಶೇಕಡಾ ಮತಗಳನ್ನು ಪಡೆದಿದ್ದಾರೆ. ಮಾಲ್ಡೀವ್ಸ್ ಸಂವಿಧಾನದ ಪ್ರಕಾರ, ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಲು, ಅಭ್ಯರ್ಥಿಯು ಒಟ್ಟು ಮತಗಳ ಶೇಕಡಾ 50ಕ್ಕಿಂತ ಹೆಚ್ಚು ಗಳಿಸಬೇಕು. ಸೆಪ್ಟೆಂಬರ್ 9ರಂದು ನಡೆದ ಮೊದಲ ಸುತ್ತಿನ ಮತದಾನದಲ್ಲೂ ಮುಯಿಜ್ಜು ಶೇ.46ರಷ್ಟು ಮತಗಳನ್ನು ಪಡೆಯುವ ಮೂಲಕ ಮುಂಚೂಣಿಯಲ್ಲಿದ್ದರು.

ಮಾಲ್ಡೀವ್ಸ್‌ನಲ್ಲಿ ಮುಯಿಝು ಬೆಂಬಲಿಗರಿಂದ ಸಂಭ್ರಮಾಚರಣೆ
ಮಾಲ್ಡೀವ್ಸ್‌ನ ರಾಜಧಾನಿ ಮಾಲೆಯಲ್ಲಿ ಮುಯಿಜ್ಜು ಬೆಂಬಲಿಗರು ಈಗಾಗಲೇ ಸಂಭ್ರಮಾಚರಣೆ ಆರಂಭಿಸಿದ್ದಾರೆ. ಮುಯಿಝು ಅವರ ಸ್ಪಷ್ಟ ವಿಜಯವನ್ನು ಆಚರಿಸಲು ಮಾಲೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯ ಮುಂದೆ ಜಮಾಯಿಸಿರುವ ನೂರಾರು ಪಿಪಿಎಂ ಬೆಂಬಲಿಗರು, ಜೈಲಿನಲ್ಲಿರುವ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಬಿಡುಗಡೆಗೆ ಒತ್ತಾಯಿಸುತ್ತಿದ್ದಾರೆ. 

ಯಮೀನ್ ತನ್ನ ಅನರ್ಹತೆಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಇದರಲ್ಲಿ ಅವರು ಸೋತಿದ್ದರು. ವಿರೋಧ ಪಕ್ಷದ PPM-PNC ಜಂಟಿ ಸೆನೆಟ್ ನಂತರ ರಹಸ್ಯ ಮತದಾನವನ್ನು ನಡೆಸಿತು. ಇದರಲ್ಲಿ ಮುಯಿಝು ಕಡಿಮೆ ಅಂತರದಿಂದ ಗೆದ್ದರು. ಅವರ ಪ್ರತಿಸ್ಪರ್ಧಿ PNC ಉಪನಾಯಕ ಮತ್ತು ಉನ್ನತ ಶಾಸಕರಾದ ಆಡಮ್ ಷರೀಫ್ ಒಮರ್ ಅವರನ್ನು ಕೇವಲ ಎರಡು ಮತಗಳಿಂದ ಸೋಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com