ಅಧ್ಯಕ್ಷೀಯ ಚುನಾವಣೆ: ದೋಷಾರೋಪಣೆಗೆ ಗುರಿಯಾಗಿದ್ದರೂ 24 ಗಂಟೆಗಳಲ್ಲಿ 4 ಮಿಲಿಯನ್ ಡಾಲರ್ ಸಂಗ್ರಹಿಸಿದ ಟ್ರಂಪ್
2024 ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿರುವ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 24 ಗಂಟೆಗಳಲ್ಲಿ, ಚುನಾವಣೆಗಾಗಿ 4 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದ್ದಾರೆ.
Published: 01st April 2023 03:53 PM | Last Updated: 01st April 2023 05:50 PM | A+A A-

ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: 2024 ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿರುವ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 24 ಗಂಟೆಗಳಲ್ಲಿ, ಚುನಾವಣೆಗಾಗಿ 4 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿದ್ದಾರೆ.
2016ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಲಿಚಿತ್ರ ತಾರೆಯೋರ್ವಳಿಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿರುವ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯಾಯಾಲಯದಿಂದ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ.
ಮ್ಯಾನ್‌ಹಾಟನ್‌ನ ಗ್ರ್ಯಾಂಡ್ ಜ್ಯೂರಿ ಟ್ರಂಪ್ ವಿರುದ್ಧ ದೋಷಾರೋಪಣೆ ಸಲ್ಲಿಸಿದೆ. ಪರಿಣಾಮವಾಗಿ ತೀವ್ರ ಮುಜುಗರಕ್ಕೊಳಗಾಗಿದ್ದ ಟ್ರಂಪ್ ಇವೆಲ್ಲವನ್ನೂ ಮೀರಿ 24 ಗಂಟೆಗಳಲ್ಲಿ 4 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಜಿ ಅಧ್ಯಕ್ಷರ ಚುನಾವಣಾ ಸ್ಪರ್ಧೆ ಅಭಿಯಾನಕ್ಕೆ ಬಂದಿರುವ ದೇಣಿಗೆಯ ಪೈಕಿ ಶೇ.25 ರಷ್ಟು ದೇಣಿಗೆ ಮೊದಲ ಬಾರಿಗೆ ದೇಣಿಗೆ ನೀಡುತ್ತಿರುವವರಿಂದ ಬಂದಿದ್ದು, ಈ ಪ್ರಮಾಣದ ದೇಣಿಗೆ ಬಂದಿರುವುದು ಟ್ರಂಪ್ ಅಧ್ಯಕ್ಷೀಯ ಸ್ಪರ್ಧೆಯ ಹಾದಿ ಸುಗಮಗೊಳಿಸುವ ಸೂಚನೆಗಳನ್ನು ನೀಡುತ್ತಿದೆ.