ಅಮೆರಿಕಾದ ಮಿಡ್ ವೆಸ್ಟ್, ಸೌತ್ ನಲ್ಲಿ ತೀವ್ರ ಸುಂಟರಗಾಳಿ: ಕನಿಷ್ಠ 21 ಮಂದಿ ಸಾವು
ತೀವ್ರ ಸುಂಟರಗಾಳಿ ಸಹಿತ ಬೀಸಿದ ಬಿರುಗಾಳಿಯಿಂದ ದಕ್ಷಿಣ ಮತ್ತು ಮಿಡ್‌ವೆಸ್ಟ್ ನ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 21 ಮಂದಿ ಮೃತಪಟ್ಟಿದ್ದಾರೆ. ಅರ್ಕಾನ್ಸಾಸ್ ರಾಜಧಾನಿಯ ಅನೇಕ ಪ್ರದೇಶಗಳು ಹಾನಿಗೀಡಾದ ದುರ್ಘಟನೆ ನಡೆದಿದೆ.
Published: 02nd April 2023 09:04 AM | Last Updated: 02nd April 2023 09:04 AM | A+A A-

ಅಮೆರಿಕಾದ ಸುಲ್ಲಿವನ್ ನಲ್ಲಿ ಸುಂಟರಗಾಳಿಗೆ ಆದ ಹಾನಿ
ವಾಷಿಂಗ್ಟನ್: ತೀವ್ರ ಸುಂಟರಗಾಳಿ ಸಹಿತ ಬೀಸಿದ ಬಿರುಗಾಳಿಯಿಂದ ದಕ್ಷಿಣ ಮತ್ತು ಮಿಡ್‌ವೆಸ್ಟ್ ನ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 21 ಮಂದಿ ಮೃತಪಟ್ಟಿದ್ದಾರೆ. ಅರ್ಕಾನ್ಸಾಸ್ ರಾಜಧಾನಿಯ ಅನೇಕ ಪ್ರದೇಶಗಳು ಹಾನಿಗೀಡಾದ ದುರ್ಘಟನೆ ನಡೆದಿದೆ.
ಈ ದುರ್ಘಟನೆ ನಡೆಯುವ ಸಂದರ್ಭದಲ್ಲಿ ಇಲಿನಾಯ್ಸ್‌ನಲ್ಲಿ ತುಂಬಿದ ಸಂಗೀತ ಕಚೇರಿ ನಡೆಯುತ್ತಿತ್ತು. ಆಗ ಕಟ್ಟಡದ ಮೇಲ್ಛಾವಣಿಯು ಕುಸಿದುಬಿದ್ದಿದೆ, ಜನರು ಭಯಭೀತರಾದರು.
ಕನಿಷ್ಠ ಎಂಟು ರಾಜ್ಯಗಳಲ್ಲಿ ಸುಂಟರಗಾಳಿ ಬೀಸಿದ್ದು ಮನೆಗಳು ಮತ್ತು ಅನೇಕ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಹಾನಿಗೀಡಾಗಿವೆ. ಮೃತಪಟ್ಟವರಲ್ಲಿ ಟೆನ್ನೆಸ್ಸೀ ಕೌಂಟಿಯ ಏಳು ಮಂದಿ ಸೇರಿದ್ದಾರೆ. ಅರ್ಕಾನ್ಸಾಸ್‌ನ ಸಣ್ಣ ಪಟ್ಟಣವಾದ ವೈನೆಯಲ್ಲಿ ನಾಲ್ವರು, ಇಂಡಿಯಾನಾದ ಸುಲ್ಲಿವಾನ್‌ನಲ್ಲಿ ಮೂವರು ಮತ್ತು ಇಲಿನಾಯ್ಸ್‌ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿಯಿಂದ ಶನಿವಾರದವರೆಗೆ ಅಪ್ಪಳಿಸಿದ ಬಿರುಗಾಳಿಗಳಿಂದ ಅಲಬಾಮಾ ಮತ್ತು ಮಿಸ್ಸಿಸ್ಸಿಪ್ಪಿಯಲ್ಲಿ ಕೂಡ ಜನರು ಸಾವಿಗೀಡಾಗಿದ್ದಾರೆ. ಅರ್ಕಾನ್ಸಾಸ್‌ನ ಲಿಟಲ್ ರಾಕ್ ಬಳಿ ಸೇರಿದಂತೆ 2,600 ಕ್ಕೂ ಹೆಚ್ಚು ಕಟ್ಟಡಗಳು ಹಾನಿಗೀಡಾಗಿವೆ.
ಮೆಂಫಿಸ್‌ನ ಪಶ್ಚಿಮಕ್ಕೆ 50 ಮೈಲುಗಳು ದೂರದಲ್ಲಿ 8,000 ಜನರ ಸಮುದಾಯವಾದ ಟೆನ್ನೆಸ್ಸೀಯ ವೈನ್‌ನ ನಿವಾಸಿಗಳು, ಹೈಸ್ಕೂಲ್‌ನ ಮೇಲ್ಛಾವಣಿ ಚೂರುಚೂರು ಆಗಿವೆ, ಕಟ್ಟಡದ ಕಿಟಕಿಗಳು ಹಾರಿಹೋಗಿವೆ. ಬೃಹತ್ ಮರಗಳು ಧರೆಗುರುಳಿವೆ. ಮುರಿದು ಬಿದ್ದ ಗೋಡೆಗಳು, ಕಿಟಕಿಗಳು ಮತ್ತು ಛಾವಣಿಗಳು ಮನೆಗಳ ಅವಶೇಷಗಳನ್ನು ನೋಡಬಹುದಾಗಿದೆ.