23 ಉಕ್ರೇನಿಯನ್ನರ ಹತ್ಯೆಗೆ ಪ್ರತೀಕಾರ; ಕ್ರೈಮಿಯಾ ತೈಲ ಡಿಪೋ ಮೇಲೆ ಉಕ್ರೇನ್ ಡ್ರೋನ್ ದಾಳಿ

ಕ್ರೈಮಿಯಾ ತೈಲ ಡಿಪೋ ಮೇಲೆ ಉಕ್ರೇನ್ ನ 2 ಡ್ರೋನ್ ಗಳು ದಾಳಿ ಮಾಡಿದ್ದು, ಬೃಹತ್ ಪ್ರಮಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ರಷ್ಯಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ತೈಲ ಡಿಪೋ ಮೇಲೆ ದಾಳಿ
ತೈಲ ಡಿಪೋ ಮೇಲೆ ದಾಳಿ

ಕೀವ್: ಕ್ರೈಮಿಯಾ ತೈಲ ಡಿಪೋ ಮೇಲೆ ಉಕ್ರೇನ್ ನ 2 ಡ್ರೋನ್ ಗಳು ದಾಳಿ ಮಾಡಿದ್ದು, ಬೃಹತ್ ಪ್ರಮಾಣದಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ರಷ್ಯಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕ್ರೈಮಿಯಾದ ಬಂದರು ನಗರವಾದ ಸೆವಾಸ್ಟೊಪೋಲ್‌ನ ಮಾಸ್ಕೋದ ಗವರ್ನರ್ ಮಿಖಾಯಿಲ್ ರಜ್ವೊಜಾಯೆವ್ ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಬೆಂಕಿಯ ವೀಡಿಯೊಗಳು ಮತ್ತು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಶತ್ರುಪಡೆಯ ಎರಡು ಡ್ರೋನ್ ಗಳು ತೈಲ ಡಿಪೋ ಮೇಲೆ ದಾಳಿ ನಡೆಸಿವೆ. ಈ ದಾಳಿಯಲ್ಲಿ 4 ತೈಲ ಟ್ಯಾಂಕ್ ಗಳು ಸುಟ್ಟುಹೋಗಿದೆ. ಕ್ರೈಮಿಯಾದ ಗವರ್ನರ್ ಸೆರ್ಗೆಯ್ ಆಕ್ಸಿಯೊನೊವ್ ಪ್ರಕಾರ, ಮೂರನೇ ಡ್ರೋನ್ ಅನ್ನು ಆಕಾಶದಿಂದ ಹೊಡೆದುರುಳಿಸಲಾಗಿದ್ದರೆ, ರೇಡಿಯೊ-ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಇನ್ನೊಂದನ್ನು ನಿಷ್ಕ್ರಿಯಗೊಳಿಸಲಾಗಿದೆ.

ರಷ್ಯಾ ಉಕ್ರೇನ್‌ನಲ್ಲಿ 20 ಕ್ಕೂ ಹೆಚ್ಚು ಕ್ರೂಸ್ ಕ್ಷಿಪಣಿಗಳು ಮತ್ತು ಎರಡು ಡ್ರೋನ್‌ಗಳನ್ನು ಹಾರಿಸಿ ಕನಿಷ್ಠ 23 ಜನರನ್ನು ಹತ್ಯೆ ಮಾಡಿದ ಮರುದಿನ ಕ್ರೈಮಿಯಾದಲ್ಲಿ ಈ ಘಟನೆ ನಡೆದಿದೆ. ಉಕ್ರೇನ್ ನಲ್ಲಿ ಮೃತಪಟ್ಟವರ ಪೈಕಿ ಐವರು ಮಕ್ಕಳೂ ಇದ್ದಾರೆ ಎಂದು ಉಕ್ರೇನಿಯನ್ ಆಂತರಿಕ ಸಚಿವ ಇಹೋರ್ ಕ್ಲೈಮೆಂಕೊ ಹೇಳಿದ್ದಾರೆ. 23 ರಲ್ಲಿ 22 ದೇಹಗಳನ್ನು ಗುರುತಿಸಲಾಗಿದೆ. ಒಬ್ಬ ಮಹಿಳೆ ಕಾಣೆಯಾಗಿದ್ದಾರೆ ಎಂದು ಕ್ಲೈಮೆಂಕೊ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com