ಎಲೋನ್ ಮಸ್ಕ್‌ಗೆ ಬಿಗ್ ಶಾಕ್: ಟ್ವಿಟರ್ ಕೇಂದ್ರ ಕಚೇರಿಯಿಂದ ಹೊಸ 'X' ಲೋಗೋ ತೆರವು!
ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್ ನಿರಂತರ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ, ಈ ಸಾಮಾಜಿಕ ಮಾಧ್ಯಮ ವೇದಿಕೆಯು ಅದರ ಹೊಸ ಲೋಗೋ ಕುರಿತು ಚರ್ಚೆಯ ವಿಷಯವಾಗಿದೆ.
Published: 01st August 2023 03:49 PM | Last Updated: 01st August 2023 04:05 PM | A+A A-

ಸ್ಯಾನ್ ಫ್ರಾನ್ಸಿಸ್ಕೋ: ಎಲೋನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ ಟ್ವಿಟರ್ ನಿರಂತರ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ, ಈ ಸಾಮಾಜಿಕ ಮಾಧ್ಯಮ ವೇದಿಕೆಯು ಅದರ ಹೊಸ ಲೋಗೋ ಕುರಿತು ಚರ್ಚೆಯ ವಿಷಯವಾಗಿದೆ.
ವಾಸ್ತವವಾಗಿ, ಮಸ್ಕ್ ಇತ್ತೀಚೆಗೆ ಟ್ವಿಟರ್‌ನ ಲೋಗೋವನ್ನು ಬದಲಾಯಿಸಿದ್ದಾರೆ. ಇದೀಗ ಟ್ವಿಟ್ಟರ್ ನಲ್ಲಿ ಕಾಣಿಸಿಕೊಂಡಿರುವ ಹಕ್ಕಿಗೆ ಬದಲಾಗಿ ಎಕ್ಸ್ ಚಿಹ್ನೆ ಬಂದಿದೆ. ಈ ಪ್ರಮುಖ ಬದಲಾವಣೆಯ ನಂತರ, ಮಸ್ಕ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್‌ನ ಪ್ರಧಾನ ಕಚೇರಿಯಲ್ಲಿ 'X' ಗುರುತು ಹಾಕಿದ್ದರು. ಇದೀಗ ಹಲವು ದೂರುಗಳು ಬಂದ ನಂತರ ಅದನ್ನು ತೆಗೆದುಹಾಕಲಾಗಿದೆ.
ಗಮನಾರ್ಹವಾಗಿ, ಇತ್ತೀಚೆಗೆ ಲೋಗೋವನ್ನು ಬದಲಾಯಿಸಿದ ನಂತರ, ಎಲೋನ್ ಮಸ್ಕ್ ಸ್ವತಃ ಅದರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಟ್ವಿಟರ್‌ನ ಸ್ಯಾನ್ ಫ್ರಾನ್ಸಿಸ್ಕೋ ಪ್ರಧಾನ ಕಛೇರಿಯಲ್ಲಿ ಬೃಹದಾಕಾರದ ಪ್ರಕಾಶಮಾನವಾಗಿ ಬೆಳಗಿದ 'X' ಚಿಹ್ನೆಯ ಲೋಗೋವನ್ನು ನೋಡಬಹುದಾಗಿದೆ. ಅದನ್ನು ಈಗ ತೆಗೆದುಹಾಕಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ನೆರೆಹೊರೆಯವರಿಂದ ದೂರಿನ ಮೇರೆಗೆ ಲೋಗೋವನ್ನು ತೆಗೆದುಹಾಕಲಾಗಿದೆ. ಆದಾಗ್ಯೂ, ಲೋಗೋವನ್ನು ತೆಗೆದುಹಾಕಲು ಕಾರಣಗಳ ಬಗ್ಗೆ ಮಸ್ಕ್ ಮತ್ತು ಅವರ ಕಂಪನಿ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಇದನ್ನೂ ಓದಿ: ಟ್ವಿಟರ್ ಲೋಗೋ ಬದಲಾವಣೆ, ನೀಲಿ ಹಕ್ಕಿ ಬದಲಾಗಿ ಬಂತು 'X' ಹೊಸ ಲೋಗೊ!
ಸ್ಥಳೀಯರಿಂದ ದೂರು
ರಾತ್ರಿ ಹೊತ್ತಿನಲ್ಲಿ ಪ್ರಕಾಶಮಾನವಾಗಿ ದೀಪ ಬೆಳಗುವುದರಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರುದಾರರು ದೂರಿದ್ದಾರೆ. ರಾಯಿಟರ್ಸ್ ವರದಿಯ ಪ್ರಕಾರ, ಕಟ್ಟಡದ ಮೇಲೆ ದೀಪದೊಂದಿಗೆ ಎಕ್ಸ್ ಲೋಗೋವನ್ನು ಅಳವಡಿಸಿದ ನಂತರ ನಗರ ಕಟ್ಟಡ ಇಲಾಖೆಗೆ ಸುಮಾರು 24 ದೂರುಗಳು ದಾಖಲಾಗಿವೆ. ಈ ಬೆಳಕಿನಿಂದ ತೊಂದರೆಯಾಗುತ್ತಿದ್ದು, ಕಟ್ಟಡದಿಂದ ತೆರವು ಮಾಡಬೇಕು ಎಂಬುದು ಬಹುತೇಕರ ದೂರು.
ಕಟ್ಟಡ ಮಾಲೀಕರಿಗೂ ದಂಡ
ಸ್ಥಳೀಯ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಲಾಂಛನ ತೆಗೆಸುವುದರ ಜತೆಗೆ ಕಟ್ಟಡ ಮಾಲೀಕರಿಗೂ ದಂಡ ವಿಧಿಸಲಾಗಿದೆ.
ವೀಡಿಯೊವನ್ನು ಹಂಚಿಕೊಂಡ ಎಲೋನ್ ಮಸ್ಕ್
ಇತ್ತೀಚೆಗೆ ಎಲೋನ್ ಮಸ್ಕ್ ಅವರು ಕಟ್ಟಡದ ಮೇಲಿನ ಹೊಸ ಲೋಗೋದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ವೈಮಾನಿಕ ನೋಟದಲ್ಲಿ ಟ್ವಿಟರ್ ಲೋಗೋವನ್ನು ತೋರಿಸಿದರು. ಈ ಲೋಗೋ ತುಂಬಾ ಹೊಳೆಯುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.
Our HQ in San Francisco tonight pic.twitter.com/VQO2NoX9Tz
— Elon Musk (@elonmusk) July 29, 2023