ಟರ್ಕಿ-ಸಿರಿಯಾ ಭೂಕಂಪ: ಸಾವಿನ ಸಂಖ್ಯೆ 5 ಸಾವಿರಕ್ಕೆ ಏರಿಕೆ: ಸಾವಿರಾರು ಕಟ್ಟಡ ನೆಲಸಮ, ರಕ್ಷಣಾ ಕಾರ್ಯಕ್ಕೆ ಅಡಚಣೆ

ಟರ್ಕಿ ಮತ್ತು ಸಿರಿಯಾದಲ್ಲಿ ನಿನ್ನೆ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರಕ್ಷಕರು ಬದುಕುಳಿದವರಿಗಾಗಿ ಬರಿ ಕೈಗಳಿಂದ ನೆಲವನ್ನು ಅಗೆಯುತ್ತಿರುವಾಗಲೇ ಕಣ್ಣೆದುರೇ ಸಾವಿರಾರು ಕಟ್ಟಡಗಳು ಧರೆಗುರುಳಿವೆ. 
ಭೂಕಂಪದ ನಂತರ ಕುಸಿದ ಕಟ್ಟಡಗಳ ಅವಶೇಷಗಳ ನಡುವೆ ನಿವಾಸಿಗಳು ಮತ್ತು ರಕ್ಷಕರು ತಮ್ಮವರಿಗಾಗಿ ಹುಡುಕಾಡುತ್ತಿರುವುದು
ಭೂಕಂಪದ ನಂತರ ಕುಸಿದ ಕಟ್ಟಡಗಳ ಅವಶೇಷಗಳ ನಡುವೆ ನಿವಾಸಿಗಳು ಮತ್ತು ರಕ್ಷಕರು ತಮ್ಮವರಿಗಾಗಿ ಹುಡುಕಾಡುತ್ತಿರುವುದು
Updated on

ಅನ್ಲಿಯುರ್ಫಾ (ಟರ್ಕಿ): ಟರ್ಕಿ ಮತ್ತು ಸಿರಿಯಾದಲ್ಲಿ ನಿನ್ನೆ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 5 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ರಕ್ಷಕರು ಬದುಕುಳಿದವರಿಗಾಗಿ ಬರಿ ಕೈಗಳಿಂದ ನೆಲವನ್ನು ಅಗೆಯುತ್ತಿರುವಾಗಲೇ ಕಣ್ಣೆದುರೇ ಸಾವಿರಾರು ಕಟ್ಟಡಗಳು ಧರೆಗುರುಳಿವೆ. 

ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪ ಟರ್ಕಿಯಲ್ಲಿ ಸಂಭವಿಸಿ ಅಪಾರ ಸಾವು-ನೋವುಗಳುಂಟಾದಾಗ ಡಜನ್‌ಗಟ್ಟಲೆ ರಾಷ್ಟ್ರಗಳು ಸಹಾಯವನ್ನು ವಾಗ್ದಾನ ಮಾಡಿದವು, ಟರ್ಕಿಯ ಸ್ಥಳೀಯ ಕಾಲಮಾನ ಪ್ರಕಾರ ನಸುಕಿನ ಜಾವ 4 ಗಂಟೆಯ ಸುಮಾರಿಗೆ ಮೊದಲ ಪ್ರಬಲ ಭೂಕಂಪ ಸಂಭವಿಸಿದ್ದು, ಜನರು ಇನ್ನೂ ಸವಿ ನಿದ್ರಿಸುತ್ತಿದ್ದರಿಂದ ಸಾವುನೋವಿನ ಸಂಖ್ಯೆ ಹೆಚ್ಚಾಗಿದೆ. ತೀವ್ರ ದಟ್ಟ ಮಂಜಿನ ಹವಾಮಾನ ತುರ್ತು ರಕ್ಷಣಾ ಕಾರ್ಯಗಳಿಗೆ ಅಡಚಣೆಯುಂಟುಮಾಡಿತು. 

ನಿವಾಸಿಗಳಿಂದ ತುಂಬಿರುವ 5,606 ಅಪಾರ್ಟ್ ಮೆಂಟ್ ಕಟ್ಟಡಗಳಲ್ಲಿ ಅನೇಕ ಧರೆಗುರುಳಿದ್ದರೆ ಇನ್ನು ಕೆಲವು ಶಿಥಿಲಗೊಂಡಿವೆ. ಸಿರಿಯಾದಲ್ಲಿ ಡಜನ್ಗಟ್ಟಲೆ ಕುಸಿತಗಳನ್ನು ಮತ್ತು ಅಲೆಪ್ಪೊದಲ್ಲಿನ ಪುರಾತತ್ತ್ವ ಶಾಸ್ತ್ರದ ಸ್ಥಳಗಳಿಗೆ ಹಾನಿಯನ್ನು ಉಂಟುಮಾಡಿವೆ. 

ಆಗ್ನೇಯ ಟರ್ಕಿಶ್ ನಗರವಾದ ಕಹ್ರಮನ್‌ಮರಸ್‌ನಲ್ಲಿ 23 ವರ್ಷದ ವರದಿಗಾರ್ತಿ ಮೆಲಿಸಾ ಸಲ್ಮಾನ್, ನಾವು ಇಂತಹ ಭೀಕರ ಭಯಾನಕ ಮಾರಣಾಂತಿಕ ಪರಿಸ್ಥಿತಿ ಎದುರಿಸುತ್ತಿರುವುದು ಇದೇ ಮೊದಲು ಎಂದು ಹೇಳುತ್ತಾರೆ. 

ಸಿರಿಯಾದ ರಾಷ್ಟ್ರೀಯ ಭೂಕಂಪ ಕೇಂದ್ರದ ಮುಖ್ಯಸ್ಥ ರೇದ್ ಅಹ್ಮದ್, ಇದನ್ನು, ಈ ಕೇಂದ್ರದ ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಭೂಕಂಪ ಎಂದು ಕರೆದಿದ್ದಾರೆ.

ಆರಂಭಿಕ ಭೂಕಂಪದ ನಂತರ ಡಜನ್‌ಗಟ್ಟಲೆ ಕಂಪನಗಳು ಸಂಭವಿಸಿದವು, 7.5 ತೀವ್ರತೆಯ ಕಂಪನವು ಶೋಧ ಮತ್ತು ರಕ್ಷಣಾ ಕಾರ್ಯದ ಮಧ್ಯದಲ್ಲಿ ಪ್ರದೇಶವನ್ನು ತಲ್ಲಣಗೊಳಿಸಿತು. "ನಾವು ಮೂವರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದೇವೆ, ಆದರೆ ಇಬ್ಬರು ಮೃತಪಟ್ಟರು" ಎಂದು ಟರ್ಕಿಯ ಆಗ್ನೇಯ ನಗರವಾದ ದಿಯಾರ್‌ಬಕಿರ್‌ನಲ್ಲಿ 35 ವರ್ಷದ ಹ್ಯಾಲಿಸ್ ಅಕ್ಟೆಮುರ್ ಹೇಳಿದರು, ಇದು ಗ್ರೀನ್‌ಲ್ಯಾಂಡ್‌ನಷ್ಟು ದೂರದಲ್ಲಿ ಸಂಭವಿಸಿದ ಭೂಕಂಪವಾಗಿದೆ. 

ಆಗ್ನೇಯ ಟರ್ಕಿಶ್ ನಗರವಾದ ಸ್ಯಾನ್ಲಿಯುರ್ಫಾದಲ್ಲಿ, ರಕ್ಷಕರು ಕುಸಿದು ಬಿದ್ದ ಏಳು ಅಂತಸ್ತಿನ ಕಟ್ಟಡದ ಅವಶೇಷಗಳಿಂದ ಬದುಕುಳಿದವರನ್ನು ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಅವಶೇಷಗಳ ಅಡಿಯಲ್ಲಿ ನನಗೆ ತಿಳಿದಿರುವ ಕುಟುಂಬವಿದೆ ಎಂದು 20 ವರ್ಷದ ಸಿರಿಯನ್ ವಿದ್ಯಾರ್ಥಿ ಓಮರ್ ಎಲ್ ಕ್ಯೂನೈಡ್ ಹೇಳಿದರು.

ಬೆಳಗಿನ ಬೆಳಕು, ದಿನದ ಆರಂಭ ನೋಡುವ ಮೊದಲೇ ಹಲವರು ಮಸಣ ಸೇರಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com