ಭೂಕಂಪ ಪೀಡಿತ ಟರ್ಕಿಯಲ್ಲಿ 6 ವರ್ಷದ ಬಾಲಕಿಯನ್ನು ರಕ್ಷಿಸಿದ ಎನ್ ಡಿಆರ್ ಎಫ್ ತಂಡ

ಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ತಂಡ ಗುರುವಾರ ಗಾಜಿಯಾಂಟೆಪ್‌ನಲ್ಲಿ ಅವಶೇಷಗಳಡಿ ಸಿಲುಕಿದ್ದ...
ಎನ್ ಡಿಆರ್ ಎಫ್ ತಂಡ
ಎನ್ ಡಿಆರ್ ಎಫ್ ತಂಡ

ನವದೆಹಲಿ: ಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ತಂಡ ಗುರುವಾರ ಗಾಜಿಯಾಂಟೆಪ್‌ನಲ್ಲಿ ಅವಶೇಷಗಳಡಿ ಸಿಲುಕಿದ್ದ ಆರು ವರ್ಷದ ಬಾಲಕಿಯನ್ನು ಯಶಸ್ವಿಯಾಗಿ ರಕ್ಷಿಸಿದೆ.

ರಕ್ಷಣಾ ಕಾರ್ಯಾಚರಣೆಗಾಗಿ ಎನ್ ಡಿಆರ್ ಎಫ್ ಮೂರು ತಂಡಗಳನ್ನು ಟರ್ಕಿಗೆ ಕಳುಹಿಸಿದೆ.

"ಈ ನೈಸರ್ಗಿಕ ವಿಕೋಪದಲ್ಲಿ ಟರ್ಕಿಯೆಯೊಂದಿಗೆ ಭಾರತ ನಿಂತಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. IND-11 ತಂಡ ಇಂದು ಗಾಜಿಯಾಂಟೆಪ್‌ನ ನೂರ್ಡಗಿಯಿಂದ 6 ವರ್ಷದ ಬಾಲಕಿಯನ್ನು ಯಶಸ್ವಿಯಾಗಿ ಹೊರತೆಗೆದಿದೆ" ಎಂದು ಗೃಹ ಸಚಿವಾಲಯದ ವಕ್ತಾರರು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, "ನಮ್ಮ NDRF ಬಗ್ಗೆ ಹೆಮ್ಮೆ ಇದೆ. ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ IND-11 ತಂಡ ಗಾಜಿಯಾಂಟೆಪ್ ನಗರದಲ್ಲಿ ಆರು ವರ್ಷದ ಬಾಲಕಿ ಬೆರೆನ್‌ನ ಜೀವ ಉಳಿಸಿದೆ. ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ NDRFHQ ಅನ್ನು ವಿಶ್ವದ ಪ್ರಮುಖ ವಿಪತ್ತು ನಿರ್ವಹಣಾ ಪಡೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಟರ್ಕಿ ಮತ್ತು ಸಿರಿಯಾ ಎರಡು ದೇಶಗಳಲ್ಲಿ ಸೋಮವಾರದ ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಇದುವರೆಗೆ 19,300 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಟರ್ಕಿ ಮತ್ತು ಸಿರಿಯಾಗೆ ನೆರವು ನೀಡಲು ಭಾರತ "ಆಪರೇಷನ್ ದೋಸ್ತ್" ಅನ್ನು ಪ್ರಾರಂಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com