ರಾಡಾರ್ ಅಸಂಗತತೆ ಪತ್ತೆ, ಮೊಂಟಾನಾ ವಾಯುಪ್ರದೇಶದಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ: ಅಮೆರಿಕ ಮಿಲಿಟರಿ ಸ್ಪಷ್ಟನೆ

ಅಮೆರಿಕಾದ ಮೊಂಟಾನಾ ರಾಜ್ಯದ ಭಾಗದಲ್ಲಿ ವಾಯುಪ್ರದೇಶವನ್ನು ಮುಚ್ಚಲಾಗಿದ್ದು ಆಗಸದಲ್ಲಿ ಕಂಡುಬಂದ ಅಸಹಜ ವಸ್ತುವಿನ ಬಗ್ಗೆ ತನಿಖೆ ನಡೆಸಲು ಯುದ್ಧ ವಿಮಾನವನ್ನು ಕಳುಹಿಸಲಾಗಿದೆ ಆದರೆ ವಿಮಾನವು ಆಕಾಶದಲ್ಲಿ ಅಸಾಮಾನ್ಯವಾದದ್ದನ್ನು ಏನೂ ಗುರುತಿಸಿಲ್ಲ ಎಂದು ಅಮೆರಿಕ ಮಿಲಿಟರಿ ಹೇಳಿದೆ. 
ಅಮೆರಿಕಾ ಮಿಲಿಟರಿ ಡ್ರೋನ್
ಅಮೆರಿಕಾ ಮಿಲಿಟರಿ ಡ್ರೋನ್

ವಾಷಿಂಗ್ಟನ್: ಅಮೆರಿಕಾದ ಮೊಂಟಾನಾ ರಾಜ್ಯದ ಭಾಗದಲ್ಲಿ ವಾಯುಪ್ರದೇಶವನ್ನು ಮುಚ್ಚಲಾಗಿದ್ದು ಆಗಸದಲ್ಲಿ ಕಂಡುಬಂದ ಅಸಹಜ ವಸ್ತುವಿನ ಬಗ್ಗೆ ತನಿಖೆ ನಡೆಸಲು ಯುದ್ಧ ವಿಮಾನವನ್ನು ಕಳುಹಿಸಲಾಗಿದೆ ಆದರೆ ವಿಮಾನವು ಆಕಾಶದಲ್ಲಿ ಅಸಾಮಾನ್ಯವಾದದ್ದನ್ನು ಏನೂ ಗುರುತಿಸಿಲ್ಲ ಎಂದು ಅಮೆರಿಕ ಮಿಲಿಟರಿ ಹೇಳಿದೆ. 

ಉತ್ತರ ಅಮೆರಿಕಾದ ವಾಯು ರಕ್ಷಣಾ ಪಡೆ, ರೇಡಾರ್ ವೈಪರೀತ್ಯವನ್ನು ಪತ್ತೆಹಚ್ಚಿದೆ. ತನಿಖೆಗಾಗಿ ಯುದ್ಧ ವಿಮಾನವನ್ನು ಕಳುಹಿಸಿದೆ. ಆ ವಿಮಾನಗಳು ರಾಡಾರ್ ಗಳಿಗೆ ಪರಸ್ಪರ ಸಂಬಂಧ ಹೊಂದಲು ಯಾವುದೇ ವಸ್ತುವನ್ನು ಗುರುತಿಸಲಿಲ್ಲ ಎಂದು ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಮತ್ತು ಯುಎಸ್ ನಾರ್ದರ್ನ್ ಕಮಾಂಡ್‌ನ ಹೇಳಿಕೆ ತಿಳಿಸಿದೆ.

ಅಧಿಕಾರಿಗಳು ಪರಿಸ್ಥಿತಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಯುಎಸ್-ಕೆನಡಾದ ಜಂಟಿ ಕಾರ್ಯಾಚರಣೆಯು ಕೆನಡಾದ ಯುಕಾನ್ ಪ್ರದೇಶದ ಮೇಲೆ ವಸ್ತುವನ್ನು ಹೊಡೆದುರುಳಿಸಿದ ಕೆಲವೇ ಗಂಟೆಗಳ ನಂತರ ಅಮೆರಿಕ ಸರ್ಕಾರ ಈ ಕ್ರಮ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com