ಸಹ ಆಟಗಾರನ ಗರ್ಲ್ ಫ್ರೆಂಡ್ ಜೊತೆ ಪಾಕ್ ನಾಯಕ ಚಾಟಿಂಗ್: ಹನಿಟ್ರ್ಯಾಪ್‍ಗೆ ಸಿಲುಕಿದ್ರಾ ಬಾಬರ್ ಅಜಮ್? ವಿಡಿಯೋ ಲೀಕ್!

ಪಾಕ್ ಕ್ರಿಕೆಟಿಗ ಬಾಬರ್ ಆಜಮ್ ಮತ್ತೊಂದು ದೊಡ್ಡ ಸಮಸ್ಯೆಗೆ ಸಿಲುಕಿ ಹಾಕಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಅವರ ಕೆಲವು ಖಾಸಗಿ ವಿಡಿಯೋಗಳು ಮತ್ತು ಫೋಟೋಗಳು ಹರಿದಾಡುತ್ತಿದ್ದು, ಪಾಕ್ ನಾಯಕ ಹನಿ ಟ್ರ್ಯಾಪ್‌ ಬಲೆಗೆ ಬಿದ್ದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಬಾಬರ್ ಅಜಮ್
ಬಾಬರ್ ಅಜಮ್

ಪಾಕ್ ಕ್ರಿಕೆಟಿಗ ಬಾಬರ್ ಆಜಮ್ ಮತ್ತೊಂದು ದೊಡ್ಡ ಸಮಸ್ಯೆಗೆ ಸಿಲುಕಿ ಹಾಕಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪಾಕ್ ನಾಯಕ ಬಾಬರ್ ಅಜಮ್ ಅವರ ಕೆಲವು ಖಾಸಗಿ ವಿಡಿಯೋಗಳು ಮತ್ತು ಫೋಟೋಗಳು ಹರಿದಾಡುತ್ತಿದ್ದು, ಪಾಕ್ ನಾಯಕ ಹನಿ ಟ್ರ್ಯಾಪ್‌ ಬಲೆಗೆ ಬಿದ್ದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಪಾಕಿಸ್ತಾನ  ತಂಡದ ನಾಯಕ ಬಾಬರ್ ಅಜಮ್  ಸಹ ಆಟಗಾರನ ಗೆಳತಿಯೊಂದಿಗೆ ಚಾಟ್ ಮಾಡಿಕೊಂಡು, ಹನಿಟ್ರ್ಯಾಪ್‍ಗೆ ಸಿಲುಕಿರುವ ವೀಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇದು ಬಾಬರ್ ಅಜಮ್ ಅವರದ್ದೇ ಎನ್ನಲಾದ ಕೆಲವು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ಪಾಕ್ ನಾಯಕನನ್ನೇ ಹೊಲುವ ವ್ಯಕ್ತಿಯೊಬ್ಬ ಹುಡುಗಿಯೊಬ್ಬಳೊಂದಿಗೆ ವಿಡಿಯೋ ಚಾಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ತಂಡದ ನಾಯಕತ್ವದಿಂದ ಕೆಳಗಿಳಿಯಬೇಕಾದ ಭೀತಿಯಲ್ಲಿದ್ದ ಬಾಬರ್​ಗೆ ಖಾಸಗಿ ವಿಡಿಯೋ ವೈರಲ್ ಆಗಿರುವುದು ಮತ್ತಷ್ಟು ಸಂಕಷ್ಟ ತಂದ್ದೊಡ್ಡಿದೆ.

ಈ ವೀಡಿಯೋದಲ್ಲಿರುವ ಯುವತಿ ಇನ್ನೊಬ್ಬ ಪಾಕಿಸ್ತಾನಿ ಕ್ರಿಕೆಟಿಗನ ಗೆಳತಿ ಎಂದು ಹೇಳಲಾಗುತ್ತಿದೆ. ಆಕೆಯೊಂದಿಗೆ ಬಾಬರ್‌ರಂತೆ ಕಾಣಿಸಿಕೊಂಡಿರುವ ವ್ಯಕ್ತಿ ಚಾಟ್ ಮಾಡುತ್ತಿರುವ ಮತ್ತು ವೀಡಿಯೋ ಕಾಲ್‌ನಲ್ಲಿರುವ ವೀಡಿಯೋ ವೈರಲ್ ಆಗುತ್ತಿದೆ.

@niiravmodi ಖಾತೆಯಿಂದ ಟ್ವಿಟರ್‌ನಲ್ಲಿ ವೀಡಿಯೊ ಮತ್ತು ಫೋಟೋವನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಬಾಬರ್ ಆಜಮ್ ಎಂದು ಹೇಳಲಾಗಿದೆ. ಈ ವಿಡಿಯೋ ಇನ್ನೊಬ್ಬ ಪಾಕಿಸ್ತಾನಿ ಕ್ರಿಕೆಟಿಗನ ಗೆಳತಿಯೊಂದಿಗೆ ಚಾಟ್ ಮಾಡುತ್ತಿದ್ದಾನೆ. ಈ ವಿಡಿಯೋಗೆ “ನೀವು ಮಾಡಿದ್ದನ್ನು ಮರಳಿ ಪಡೆಯುತ್ತೀರಿ” ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿಯಂತೆ ಹರಡಿವೆ. ಆದರೆ, ಬಾಬರ್ ಆಜಂ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com