ಬಜೆಟ್ ಅಂದಾಜಿನಲ್ಲಿ 2 ಟ್ರಿಲಿಯನ್ ರೂಪಾಯಿ ವ್ಯತ್ಯಾಸ: ಸಾಲದ ಮಹತ್ವದ ಮಾತುಕತೆಗೂ ಮುನ್ನ ಪಾಕ್ ಗೆ ಐಎಂಫ್

ಈಗಾಗಲೇ ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಐಎಂಎಫ್ ಮಹತ್ವದ ಮಾತುಕತೆಗೂ ಮುನ್ನ ಆತಂಕಕಾರಿ ಹೇಳಿಕೆ ನೀಡಿದ್ದು, ಪಾಕಿಸ್ತಾನದ ಬಜೆಟ್ ಕೊರತೆ ಹಾಗೂ ಹಿಂದಿನ ಸಾಲಗಳ ಬಡ್ಡಿ ಪಾವತಿ ಟಾರ್ಗೆಟ್ ನಡುವಿನ ಅಂತರ ವಿಪರೀತವಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಐಎಂಎಫ್
ಐಎಂಎಫ್

ಇಸ್ಲಾಮಾಬಾದ್: ಈಗಾಗಲೇ ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಐಎಂಎಫ್ ಮಹತ್ವದ ಮಾತುಕತೆಗೂ ಮುನ್ನ ಆತಂಕಕಾರಿ ಹೇಳಿಕೆ ನೀಡಿದ್ದು, ಪಾಕಿಸ್ತಾನದ ಬಜೆಟ್ ಕೊರತೆ ಹಾಗೂ ಹಿಂದಿನ ಸಾಲಗಳ ಬಡ್ಡಿ ಪಾವತಿ ಟಾರ್ಗೆಟ್ ನಡುವಿನ ಅಂತರ ವಿಪರೀತವಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
 
ಪಾಕ್ ನ ಬಜೆಟ್ ಅಂದಾಜಿನಲ್ಲಿ 2,000 ಬಿಲಿಯನ್ ನಷ್ಟು ವಿರೋಧಾಭಾಸ ಕಂಡುಬರುತ್ತಿದೆ ಎಂದು ಐಎಂಎಫ್ ಪಾಕ್ ಸರ್ಕಾರದೊಂದಿಗೆ ಸಾಲಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆಗೂ ಮುನ್ನ ತಿಳಿಸಿದೆ. ಪಾಕಿಸ್ತಾನಕ್ಕೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ವಿಸ್ತರಿತ ಆರ್ಥಿಕ ಸೌಲಭ್ಯದ ಅಡಿಯಲ್ಲಿ 9 ಪರಿಶೀಲನೆಯ ಭಾಗವಾಗಿ ಐಎಂಎಫ್ ಜೊತೆಗೆ ಈ ಸಮಾಲೋಚನೆ ನಡೆಯಲಿದ್ದು, ಈ ಸಭೆಯಲ್ಲಿ  ಹಣಕಾಸಿನ ಕುಸಿತ ಮತ್ತು ಅಂಕಿ ಅಂಶಗಳ ಸಮನ್ವಯ ಚರ್ಚೆಯ ಪ್ರಮುಖ ವಿಷಯವಾಗಿರಲಿದೆ. 

ಸೆಪ್ಟೆಂಬರ್ ನಿಂದ ಬಾಕಿ ಇರುವ ಆರ್ಥಿಕ ನೆರವಿನ ಮುಂದಿನ ಭಾಗದ ಬಿಡುಗಡೆಯ ಮೇಲೆ ಈ ಪರಿಶೀಲನೆಯ ವರದಿ ಪರಿಣಾಮ ಹೊಂದಿರುತ್ತದೆ. 2022-23 ನೇ ಸಾಲಿನ ಬಜೆಟ್ ಘೋಷಣೆಗೂ ಮುನ್ನ ಪಾಕ್ ಸರ್ಕಾರ ಬಜೆಟ್ ಕೊರತೆಯನ್ನು ಜಿಡಿಪಿಯ ಶೇ.4.9 ರಷ್ಟು ಅಂದಾಜಿಸಿತ್ತು. ಹಾಗೂ ಸಾಲದ ಮೇಲಿನ ಬಡ್ಡಿ ಮೊತ್ತ- ವಿತ್ತೀಯ ಕೊರತೆಗಳಿಗೂ ಇರುವ ವ್ಯತ್ಯಾಸವನ್ನು (ಪ್ರೈಮರಿ ಡಿಫಿಸಿಟ್) ಜಿಡಿಪಿಯ ಶೇ.0.2 ರಷ್ಟು ಇರುವಂತೆ ನೋಡಿಕೊಳ್ಳುವ ಟಾರ್ಗೆಟ್ ಹೊಂದಿರುವುದಾಗಿ ಹೇಳಿತ್ತು.
 
ಮತ್ತೆ ಸಾಲ ನೀಡುವುದು ಸುಗಮವಾಗಬೇಕಿದ್ದಲ್ಲಿ ಪಾಕಿಸ್ತಾನ ಮತ್ತೊಂದು ಮಿನಿ ಬಜೆಟ್ ಮೂಲಕ 600 ಬಿಲಿಯನ್ ಮೌಲ್ಯದ  ಹೆಚ್ಚುವರಿ ತೆರಿಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಪಾಕ್ ಅಧಿಕಾರಿಗಳಿಗೆ ಐಎಂಎಫ್ ಸಲಹೆ ನೀಡಿತ್ತು. ಆದರೆ ಈ ಸಲಹೆಯನ್ನು ಪಾಕಿಸ್ತಾನಿ ಅಧಿಕಾರಿಗಳು ಒಪ್ಪಿಲ್ಲ. ಬದಲಾಗಿ ಪ್ರೈಮರಿ ಡಿಫಿಸಿಟ್ ಐಎಂಎಫ್ ಅಂದಾಜಿಸುವಷ್ಟು ಏರಿಕೆಯಾಗುವುದಿಲ್ಲ ಎಂದು ವಾದ ಮಾಡಿದ್ದಾರಂತೆ. 

ಅಷ್ಟೇ ಅಲ್ಲದೇ ಪಾಕಿಸ್ತಾನ ಪ್ರವಾಹ ಖರ್ಚುಗಳಿಂದಾಗಿ ಬಜೆಟ್ ಡೆಫಸಿಟ್ ನ್ನು, ಪ್ರಸಕ್ತ ಸಾಲಿನಲ್ಲಿ ಪ್ರಮುಖವಾಗಿ ಪ್ರೈಮರಿ ಡೆಫಸಿಟ್ ನ್ನು ಲೆಕ್ಕ ಹಾಕಬೇಕಾದರೆ 500 ಬಿಲಿಯನ್ ನಷ್ಟು ವಿನಾಯ್ತಿ ನೀಡಬೇಕು ಎಂದು ಮನವಿಯನ್ನೂ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com