ವಿವಾಹೇತರ ಸಂಬಂಧ: ಭಾರತೀಯ ಮೂಲದ ಸಿಂಗಾಪುರದ ವಿರೋಧ ಪಕ್ಷದ ಸಂಸದ ರಾಜಿನಾಮೆ!
ಸಹ ಸಂಸದೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಸಿಂಗಾಪುರದ ಅತಿದೊಡ್ಡ ವಿರೋಧ ಪಕ್ಷದ ಭಾರತೀಯ ಮೂಲದ ಸಂಸದ ಲಿಯಾನ್ ಪೆರೆರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Published: 19th July 2023 03:18 PM | Last Updated: 19th July 2023 09:03 PM | A+A A-

ಲಿಯಾನ್ ಪೆರೆರಾ-ನಿಕೋಲ್ ಸೀಹ್
ಸಿಂಗಾಪುರ: ಸಹ ಸಂಸದೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಸಿಂಗಾಪುರದ ಅತಿದೊಡ್ಡ ವಿರೋಧ ಪಕ್ಷದ ಭಾರತೀಯ ಮೂಲದ ಸಂಸದ ಲಿಯಾನ್ ಪೆರೆರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವರ್ಕರ್ಸ್ ಪಕ್ಷ(ಡಬ್ಲ್ಯುಪಿ)ದ 53 ವರ್ಷದ ಲಿಯಾನ್ ಪೆರೆರಾ ಮತ್ತು 36 ವರ್ಷದ ನಿಕೋಲ್ ಸೀಹ್ ವಿವಾಹೇತರ ಸಂಬಂಧದ ನಂತರ ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಸತ್ತಿನ ಸ್ಪೀಕರ್ ತಾನ್ ಚುವಾನ್-ಜಿನ್ ಮತ್ತು ಸಹ ಪೀಪಲ್ಸ್ ಆಕ್ಷನ್ ಪಾರ್ಟಿ(ಪಿಎಪಿ) ಸಂಸದೆ ಚೆಂಗ್ ಲಿ ಹುಯಿ ಅವರು ಸಂಬಂಧ ಹೊಂದಿದ್ದಕ್ಕಾಗಿ ಸೋಮವಾರ ರಾಜೀನಾಮೆ ನೀಡಿದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.
ಇದನ್ನೂ ಓದಿ: ಪ್ರಾಂಕ್ ಮಾಡಿದ್ದಕ್ಕೆ 3 ಯುವಕರ ಹತ್ಯೆ: ಅಮೇರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಬಂಧನ
ತಾನ್ ಮತ್ತು ಚೆಂಗ್ ಇಬ್ಬರೂ ತಮ್ಮ ಸಂಸದೀಯ ಸ್ಥಾನವನ್ನು ತೊರೆದರು ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದರು. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪೆರೇರಾ ಅವರು ಸಂಸತ್ತಿನ ಹಂಗಾಮಿ ಸ್ಪೀಕರ್‌ಗೆ ತಿಳಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿಂಗ್ ಹೇಳಿದ್ದಾರೆ.
ಪೆರೇರಾ ಮತ್ತು ಸೀಹ್ ಇಬ್ಬರೂ ಮದುವೆಯಾಗಿದ್ದು ಮಕ್ಕಳನ್ನು ಹೊಂದಿದ್ದಾರೆ. ಅವರಿಬ್ಬರೂ 2020ರ ಸಾರ್ವತ್ರಿಕ ಚುನಾವಣೆಯ ನಂತರ ಸಂಬಂಧ ಹೊಂದಿದ್ದರು.