ಪ್ರಧಾನಿ ಮೋದಿಗೆ ಅವರದ್ದೇ "AI ಉಲ್ಲೇಖ" ಮುದ್ರಿಸಿದ ವಿಶೇಷ ಟೀ ಶರ್ಟ್ ಉಡುಗೊರೆ ನೀಡಿದ ಅಮೇರಿಕಾ ಅಧ್ಯಕ್ಷ ಬೈಡನ್!

ಅಮೇರಿಕಾಗೆ ಪ್ರಧಾನಿ ಮೋದಿ ಅವರ ಈ ಬಾರಿಯ ಸ್ಟೇಟ್ ವಿಸಿಟ್ ಅಮೇರಿಕಾ- ಭಾರತದ ಸಹಕಾರ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.
ಪ್ರಧಾನಿ ಮೋದಿಗೆ ವಿಶೇಷ ಟೀ ಶರ್ಟ್ ಉಡುಗೊರೆ ನೀಡಿದ ಅಮೇರಿಕಾ ಅಧ್ಯಕ್ಷ ಬೈಡನ್
ಪ್ರಧಾನಿ ಮೋದಿಗೆ ವಿಶೇಷ ಟೀ ಶರ್ಟ್ ಉಡುಗೊರೆ ನೀಡಿದ ಅಮೇರಿಕಾ ಅಧ್ಯಕ್ಷ ಬೈಡನ್

ವಾಷಿಂಗ್ ಟನ್: ಅಮೇರಿಕಾಗೆ ಪ್ರಧಾನಿ ಮೋದಿ ಅವರ ಈ ಬಾರಿಯ ಸ್ಟೇಟ್ ವಿಸಿಟ್ ಅಮೇರಿಕಾ- ಭಾರತದ ಸಹಕಾರ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.

ಉಭಯ ನಾಯಕರೂ ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡಿದ್ದು, ಮೊನ್ನೆ ಪ್ರಧಾನಿ ಮೋದಿ ಜೋ ಬೈಡನ್ ದಂಪತಿಗೆ ದಶ ದಾನ ಪೆಟ್ಟಿಗೆ ಹಾಗೂ ಉಪನಿಷತ್ ಪುಸ್ತಕವನ್ನು ಉಡುಗೊರೆಯನ್ನಾಗಿ ನೀಡಿದ್ದರು. ಈಗ ಪ್ರಧಾನಿ ಮೋದಿ ಅವರಿಗೆ ಅಮೇರಿಕಾ ಅಧ್ಯಕ್ಷ ಜೋ ಬೈಡನ್, ಭವಿಷ್ಯವು AI- ಅಮೇರಿಕಾ- ಭಾರತ (The future is AI-America and India") ಎಂಬ ಉಲ್ಲೇಖವನ್ನು ಮುದ್ರಿಸಿರುವ ಟೀ ಶರ್ಟ್ ನೀಡಿದ್ದಾರೆ. 

ಪ್ರಧಾನಿ ಮೋದಿ ಅಮೇರಿಕನ್ ಕಾಂಗ್ರೆಸ್ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಾ, ಭವಿಷ್ಯ ಎಂದರೆ ಅದು ಎಐ-  (AI-America and India) ಎಂದು ಹೇಳಿಕೆ ನೀಡಿದ್ದರು. ಪ್ರಧಾನಿ ಮೋದಿ ಅವರ ಈ ಹೇಳಿಕೆಗೆ ಅಮೇರಿಕಾದ ಸಂಸದರು ಎದ್ದು ನಿಂತು ಕರತಾಡನ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದರು.

7 ವರ್ಷಗಳ ಹಿಂದೆ ನಾನು ಇಲ್ಲಿಗೆ ಬಂದಾಗಿನದ್ದಕ್ಕೂ ಈಗಿನದ್ದಕ್ಕೂ ಹಲವಾರು ಬದಲಾವಣೆಗಳಾಗಿವೆ. ಅಂತೆಯೇ ಹಲವು ಸಂಗತಿಗಳು- ಭಾರತ- ಅಮೇರಿಕಾ ಸ್ನೇಹವನ್ನು ಗಾಢವಾಗಿಸುವ ಬದ್ಧತೆ ಹಾಗೆಯೇ ಮುಂದುವರೆದಿದೆ. ಕಳೆದ ಕೆಲವು ವರ್ಷಗಳಲ್ಲಿ ಎಐ- ಕೃತಕ ಬುದ್ಧಿಮತ್ತೆಯಲ್ಲಿ ಹಲವು ಮುನ್ನಡೆಗಳಾಗಿವೆ, ಅಂತೆಯೇ ಮತ್ತೊಂದು ಎಐ-AI- America and India ನಲ್ಲಿಯೂ ಹೆಚ್ಚು ಮಹತ್ವದ ಬೆಳವಣಿಗೆಗಳಾಗಿವೆ ಎಂದು ಮೋದಿ ಹೇಳಿದ್ದರು.

ಬೈಡನ್ ಮೋದಿಗೆ ಟೀ ಶರ್ಟ್ ನೀಡಿದ ಸಂದರ್ಭದಲ್ಲಿ ಮೈಕ್ರೋ ಸಾಫ್ಟ್ ಸಿಇಒ ಸತ್ಯ ನಾದೆಳ್ಲ, ಮಹೀಂದ್ರ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರ, ಆಪಲ್ ಸಿಇಒ ಟಿಮ್ ಕುಕ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮುಂತಾದ ಗಣ್ಯರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com