ನೇಪಾಳ ನೂತನ ಅಧ್ಯಕ್ಷರಾಗಿ ರಾಮಚಂದ್ರ ಪೌಡೆಲ್ ಆಯ್ಕೆ

ನೇಪಾಳಿ ಕಾಂಗ್ರೆಸ್‌ನ ರಾಮಚಂದ್ರ ಪೌಡೆಲ್ ಅವರು ನೇಪಾಳದ ಮೂರನೇ ಅಧ್ಯಕ್ಷರಾಗಿ ಗುರುವಾರ ಆಯ್ಕೆಯಾಗಿದ್ದಾರೆ.
ರಾಮಚಂದ್ರ ಪೌಡೆಲ್
ರಾಮಚಂದ್ರ ಪೌಡೆಲ್

ಕಠ್ಮಂಡು: ನೇಪಾಳಿ ಕಾಂಗ್ರೆಸ್‌ನ ರಾಮಚಂದ್ರ ಪೌಡೆಲ್ ಅವರು ನೇಪಾಳದ ಮೂರನೇ ಅಧ್ಯಕ್ಷರಾಗಿ ಗುರುವಾರ ಆಯ್ಕೆಯಾಗಿದ್ದಾರೆ.

ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್-ಮಾವೋವಾದಿ ಸೆಂಟರ್ ಒಳಗೊಂಡ ಎಂಟು ಪಕ್ಷಗಳ ಮೈತ್ರಿಕೂಟದ ಸಾಮಾನ್ಯ ಅಭ್ಯರ್ಥಿಯಾಗಿದ್ದ ಪೌಡೆಲ್ ಅವರು ಯುಎಂಎಲ್ ನ ಉಪಾಧ್ಯಕ್ಷ ಸುಭಾಷ್ ಚಂದ್ರ ನೆಂಬಾಂಗ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಪೌಡೆಲ್ ಅವರು 214 ಸಂಸತ್ ಸದಸ್ಯರ ಮತಗಳು ಮತ್ತು 352 ಪ್ರಾಂತೀಯ ಅಸೆಂಬ್ಲಿ ಸದಸ್ಯರ ಮತವನ್ನು ಪಡೆದಿದ್ದಾರೆ.

"ನೇಪಾಳ ಅಧ್ಯಕ್ಷರಾಗಿ ಆಯ್ಕೆಯಾದ ನನ್ನ ಸ್ನೇಹಿತ ರಾಮಚಂದ್ರ ಪೌಡೆಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ನೇಪಾಳಿ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹದ್ದೂರ್ ದೇವುಬಾ ಅವರು ಟ್ವೀಟ್ ಮಾಡಿದ್ದಾರೆ.

ಸಂಸತ್ತಿನ 332 ಸದಸ್ಯರು ಮತ್ತು ಏಳು ಪ್ರಾಂತೀಯ ಅಸೆಂಬ್ಲಿಗಳಲ್ಲಿ ೫೫೦ ಸದಸ್ಯರು ಸೇರಿದಂತೆ ಒಟ್ಟು 882 ಸದಸ್ಯರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾವಣೆ ಮಾಡುವ ಅರ್ಹತೆ ಪಡೆದಿದ್ದಾರೆ.

ಆ ಪೈಕಿ 518 ಪ್ರಾಂತೀಯ ಅಸೆಂಬ್ಲಿ ಸದಸ್ಯರು ಮತ್ತು ಸಂಸತ್ತಿನ 313 ಸದಸ್ಯರು ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗದ ವಕ್ತಾರ ಶಾಲಿಗ್ರಾಮ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com