ಭಾರತ-ಪಾಕಿಸ್ತಾನ, ಭಾರತ-ಚೀನಾ ನಡುವೆ ಸಶಸ್ತ್ರ ಸಂಘರ್ಷ; ಯುಎಸ್ ಇಂಟೆಲ್ ಆತಂಕ: ವರದಿ

ಭಾರತ - ಪಾಕಿಸ್ತಾನ ಮತ್ತು ಭಾರತ - ಚೀನಾ ನಡುವಿನ ಸಂಭಾವ್ಯ ಸಂಘರ್ಘದೊಂದಿಗೆ  ಉದ್ವೀಗ್ನತೆ ಹೆಚ್ಚುವ ಆತಂಕವಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಇಂಟೆಲ್ ಬುಧವಾರ ತನ್ನ ಜನಪ್ರತಿನಿಧಿಗಳಿಗೆ ಹೇಳಿದೆ. 
ಗಡಿಯಲ್ಲಿನ ಸೈನಿಕರ ಸಾಂದರ್ಭಿಕ ಚಿತ್ರ
ಗಡಿಯಲ್ಲಿನ ಸೈನಿಕರ ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಭಾರತ-ಪಾಕಿಸ್ತಾನ ಮತ್ತು ಭಾರತ-ಚೀನಾ ನಡುವಿನ ಸಂಭಾವ್ಯ ಸಂಘರ್ಘದೊಂದಿಗೆ ಉದ್ವೀಗ್ನತೆ ಹೆಚ್ಚುವ ಆತಂಕವಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಇಂಟೆಲ್ ಬುಧವಾರ ತನ್ನ ಜನಪ್ರತಿನಿಧಿಗಳಿಗೆ ಹೇಳಿದೆ. 

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಪಾಕಿಸ್ತಾನದ ಪ್ರಚೋದನೆಗಳಿಗೆ ಮಿಲಿಟರಿ ಬಲದೊಂದಿಗೆ ಪ್ರತ್ಯುತ್ತರ ನೀಡುವ ಸಾಧ್ಯತೆ ಹೆಚ್ಚು ಎಂಬುದನ್ನು ಪರಿಗಣಿಸಿದೆ. ಇದು ಅಮೆರಿಕ ಗುಪ್ತಚರ ಸಮುದಾಯದ ವಾರ್ಷಿಕ ಬೆದರಿಕೆ ಮೌಲ್ಯಮಾಪನದ ಭಾಗವಾಗಿದ್ದು, ಅಮೆರಿದ ಉಭಯದ ಸದನಗಳ ಜನಪ್ರತಿನಿಧಿಗಳು ರಾಜಕೀಯ ಮತ್ತು ವಿವಿಧ ಆಸಕ್ತಿಯ ವಿಷಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಮತ್ತು ವಿಶ್ಲೇಷಿಸುವ ಸಮಯದಲ್ಲಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿಯು ಯುಎಸ್ ಕಾಂಗ್ರೆಸ್ ಗೆ ಸಲ್ಲಿಸಿದೆ.

ಭಾರತ ಮತ್ತು ಚೀನಾ ದ್ವಿಪಕ್ಷೀಯ ಗಡಿ ಮಾತುಕತೆಯಲ್ಲಿ ತೊಡಗಿವೆ ಮತ್ತು ಗಡಿ ಪಾಯಿಂಟ್ ಗಳನ್ನು ಬಗೆಹರಿಸಿಕೊಂಡಿವೆ. 2020ರಲ್ಲಿ ನಡೆದ ಉಭಯ ರಾಷ್ಟ್ರಗಳ ಸೇನಾಪಡೆಗಳ ನಡುವಿನ ಸಂಘರ್ಷದಲ್ಲಿ ಹದಗೆಟ್ಟಿರುವ ಸಂಬಂಧ ಇನ್ನೂ ಪೂರ್ಣ ಪ್ರಮಾಣದಲ್ಲಿ ಸುಧಾರಿಸಿಲ್ಲ. ಇದು ದಶಕಗಳಲ್ಲಿ ಅತ್ಯಂತ ಗಂಭೀರವಾಗಿದೆ ಎಂದು ವರದಿ ಹೇಳಿದೆ.

ವಿವಾದಿತ ಗಡಿಯಲ್ಲಿ ಭಾರತ ಮತ್ತು ಚೀನಾ ಮಿಲಿಟರಿ ಪಡೆಯ್ನು ಹೆಚ್ಚಿಸಿದ್ದು, ಎರಡು ಪರಮಾಣು ರಾಷ್ಟ್ರಗಳ ನಡುವೆ ಸಶಸ್ತ್ರ ಸಂಘರ್ಷದ ಅಪಾಯವನ್ನು ಹೆಚ್ಚಿಸಿದೆ. ಅದು ಅಮೆರಿಕದ ವ್ಯಕ್ತಿಗಳು ಮತ್ತು ಹಿತಾಸಕ್ತಿಗಳಿಗೆ ನೇರ ಬೆದರಿಕೆಗಳನ್ನು ಒಳಗೊಂಡಿದ್ದು, ಮಧ್ಯಸ್ಥಿಕೆಗೆ ಅಮೆರಿಕಕ್ಕೆ ಕರೆ ನೀಡುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಬಿಕ್ಕಟ್ಟುಗಳು ಪರಮಾಣು-ಶಸ್ತ್ರಸಜ್ಜಿತ ರಾಜ್ಯಗಳ ನಡುವೆ ಉಲ್ಬಣಗೊಳ್ಳುವ ಅಪಾಯದ ಕಾಳಜಿ ಹೊಂದಿವೆ. 2021 ರ ಆರಂಭದಲ್ಲಿ ನಿಯಂತ್ರಣ ರೇಖೆಯ ಉದ್ದಕ್ಕೂ ಎರಡು ಕಡೆಯವರು ಕದನ ವಿರಾಮ ಪರಿಷ್ಕರಿಸಿದ ನಂತರ ಹೊಸ ದೆಹಲಿ ಮತ್ತು ಇಸ್ಲಾಮಾಬಾದ್ ಸಂಬಂಧದಲ್ಲಿ ಶಾಂತಿ ಮೂಡಿಸುವ ನಿಟ್ಟಿನಲ್ಲಿ ಒತ್ತು ನೀಡಲಾಗಿದೆ ಎಂದು ವರದಿ ತಿಳಿಸಿದೆ. 

ಆದಾಗ್ಯೂ, ಪಾಕಿಸ್ತಾನ  ತನ್ನ ಇತಿಹಾಸದುದ್ದಕ್ಕೂ ಭಾರತ ವಿರೋಧಿ ಉಗ್ರಗಾಮಿ ಗುಂಪುಗಳನ್ನು ಬೆಂಬಲಿಸಿದೆ  ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತ ಪಾಕ್ ಪ್ರಚೋದನೆಗಳಿಗೆ ಮಿಲಿಟರಿ ಶಕ್ತಿಯೊಂದಿಗೆ ಪ್ರತಿಕ್ರಿಯಿಸುವ ಸಾಧ್ಯತೆಯಿದೆ. ಇದರಿಂದ ಉದ್ವಿಗ್ನತೆ ಉಂಟಾಗಿ ಸಂಘರ್ಷದ ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್, ಈ ಸವಾಲುಗಳನ್ನು ಎದುರಿಸಲು ಅಮೆರಿಕ ಪಾಲುದಾರಿಕೆ ವಿಸ್ತರಿಸಲು ಪ್ರಯತ್ನಿಸುತ್ತದೆ. ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಗೆ ಬೆದರಿಕೆ ಹಾಕುವ ಯಾವುದೇ ಗುಂಪು ಸಹಜವಾಗಿ  ಕಳವಳಕಾರಿಯಾಗಿದೆ ಎಂದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com