ಭಾರತ ಸೇರಿದಂತೆ ವಿದೇಶಿ ನಾಯಕರಿಂದ ಪಡೆದ 250 ಸಾವಿರ ಡಾಲರ್ ಮೌಲ್ಯದ ಗಿಫ್ಟ್ ಬಹಿರಂಗಪಡಿಸುವಲ್ಲಿ ಟ್ರಂಪ್ ವಿಫಲ!

ಭಾರತೀಯ ನಾಯಕರಿಂದ ಪಡೆದ  47,000 ಅಮೆರಿಕನ್ ಡಾಲರ್ ಮೌಲ್ಯದ ಗಿಫ್ಟ್ ಸೇರಿದಂತೆ ವಿದೇಶಿ  ನಾಯಕರಿಂದ  ಜಗತ್ತಿನ ಮೊದಲ ಕುಟುಂಬಕ್ಕೆ ನೀಡಿದ 250,000 ಡಾಲರ್ ಮೌಲ್ಯದ ಉಡುಗೊರೆಗಳನ್ನು ಬಹಿರಂಗಪಡಿಸುವಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಫಲರಾಗಿದ್ದಾರೆ
ಪ್ರಧಾನಿ ಮೋದಿ,ಡೊನಾಲ್ಡ್ ಟ್ರಂಪ್ ಸಾಂದರ್ಭಿಕ ಚಿತ್ರ
ಪ್ರಧಾನಿ ಮೋದಿ,ಡೊನಾಲ್ಡ್ ಟ್ರಂಪ್ ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ, ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಉತ್ತರ ಪ್ರದೇಶ ಮುಖ್ಯಸ್ಥರು ಸೇರಿದಂತೆ ಭಾರತೀಯ ನಾಯಕರಿಂದ ಪಡೆದ  47,000 ಅಮೆರಿಕನ್ ಡಾಲರ್ ಮೌಲ್ಯದ ಗಿಫ್ಟ್ ಸೇರಿದಂತೆ ವಿದೇಶಿ  ನಾಯಕರಿಂದ  ಜಗತ್ತಿನ ಮೊದಲ ಕುಟುಂಬಕ್ಕೆ ನೀಡಿದ 250,000 ಡಾಲರ್ ಮೌಲ್ಯದ ಉಡುಗೊರೆಗಳನ್ನು ಬಹಿರಂಗಪಡಿಸುವಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಫಲರಾಗಿದ್ದಾರೆ ಎಂದು ಪ್ರಜಾಸತ್ತಾತ್ಮಕ ಕಾಂಗ್ರೆಸ್ ಸಮಿತಿ ವರದಿಯಲ್ಲಿ ಆರೋಪಿಸಿದೆ.

"ಸೌದಿ ಕತ್ತಿಗಳು, ಭಾರತೀಯ ಆಭರಣಗಳು ಮತ್ತು ಡೊನಾಲ್ಡ್ ಟ್ರಂಪ್ ಅವರ ಜೀವನಕ್ಕಿಂತ ದೊಡ್ಡದಾದ ಸಾಲ್ವಡಾರ್ ಭಾವಚಿತ್ರ: ಪ್ರಮುಖ ವಿದೇಶಿ ಉಡುಗೊರೆ ಬಹಿರಂಗಪಡಿಸಲು ಟ್ರಂಪ್ ಆಡಳಿತದ ವಿಫಲತೆ" ಎಂದು ವರದಿಯಲ್ಲಿ ಶೀರ್ಷಿಕೆ ನೀಡಲಾಗಿದೆ. ವಿದೇಶಿ ಉಡುಗೊರೆಗಳು ಮತ್ತು ಅಲಂಕಾರಗಳ ಕಾಯ್ದೆ ಪ್ರಕಾರ, ಕಚೇರಿಯಲ್ಲಿದ್ದಾಗ ವಿದೇಶಿ ಸರ್ಕಾರಿ ಅಧಿಕಾರಿಗಳಿಂದ ಪಡೆದ ಗಿಫ್ಟ್  ಬಹಿರಂಗಪಡಿಸುವಲ್ಲಿ ಮಾಜಿ ಅಧ್ಯಕ್ಷ ಟ್ರಂಪ್ ವಿಫಲವಾದ ಬಗ್ಗೆ ಸಮಿತಿ ನಡೆಸುತ್ತಿರುವ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.  ರಿಪಬ್ಲಿಕನ್ ಪಕ್ಷದ ಟ್ರಂಪ್, 2017 ರಿಂದ 2021 ರವರೆಗೆ ಅಮೆರಿಕದ  45 ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 

"ಗಾಲ್ಫ್ ಕ್ಲಬ್‌ಗಳು, ಡೊನಾಲ್ಡ್ ಟ್ರಂಪ್‌ರ ಸಾಲ್ವಡಾರ್ ಫೋಟೋ ಮತ್ತು ಇತರ ಸಂಭಾವ್ಯ ವರದಿ ಮಾಡದ ಗಿಫ್ಟ್ ಗಳು ಎಲ್ಲಿವೆ ಎಂಬುದನ್ನು ನಿರ್ಧರಿಸಲು ಪ್ರಜಾಸತಾತ್ಮಕ ಸಮಿತಿ ಬದ್ಧರಾಗಿದ್ದಾರೆ. ಯುಎಸ್ ವಿದೇಶಾಂಗ ನೀತಿಯ ನಡವಳಿಕೆಯಲ್ಲಿ ಅಧ್ಯಕ್ಷರ ಮೇಲೆ ಪ್ರಭಾವ ಬೀರಲು ಬಳಸಲಾಗುತ್ತದೆ ಎಂದು ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಸಮಿತಿಯ ಶ್ರೇಯಾಂಕದ ಸದಸ್ಯರು ಆಗಿರುವ ಕಾಂಗ್ರೆಸ್‌ ಸದಸ್ಯ ಜಾಮೀ ರಾಸ್ಕಿನ್ ಹೇಳಿದ್ದಾರೆ. 

76 ವರ್ಷದ ಟ್ರಂಪ್  ಮತ್ತು ಮೊದಲ ಕುಟುಂಬ 100 ಕ್ಕೂ ಹೆಚ್ಚು ವಿದೇಶಿ ಉಡುಗೊರೆ ವರದಿ ಮಾಡುವಲ್ಲಿ  ವಿಫಲವಾಗಿದೆ ಎಂದು ವರದಿಯು ಆರೋಪಿಸಿದೆ, ಇದರ ಒಟ್ಟು ಮೌಲ್ಯವು ಕಾಲು ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು. ಟ್ರಂಪ್ ಕುಟುಂಬವು ಭಾರತದಿಂದ 17 ವರದಿ ಮಾಡದ ಗಿಫ್ಟ್  ಸ್ವೀಕರಿಸಿದೆ ಎಂದು ದಾಖಲೆಗಳು ಬಹಿರಂಗಪಡಿಸಿವೆ, ಇದರ ಒಟ್ಟು ಮೌಲ್ಯ  47,000 ಅಮೆರಿಕನ್ ಡಾಲರ್ ಗಿಂತ ಕ್ಕಿಂತ ಹೆಚ್ಚಾಗಿದೆ.

ಈ ಗಿಫ್ಟ್ ನಲ್ಲಿ ಯೋಗಿ ಆದಿತ್ಯನಾಥ್ ಅವರಿಂದ 8,500 ಡಾಲರ್ ಮೌಲ್ಯದ ಹೂದಾನಿ, 4,600 ಡಾಲರ್ ಮೌಲ್ಯದ ತಾಜ್ ಮಹಲ್ ಮಾದರಿ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ 6,600 ಡಾಲರ್ ಮೌಲ್ಯದ ಭಾರತೀಯ ಕಂಬಳಿ,  ಪ್ರಧಾನಿ ಮೋದಿ ಅವರಿಂದ  1,900 ಡಾಲರ್ ಮೌಲ್ಯದ  ಕಫ್‌ಲಿಂಕ್‌ಗಳು ಸೇರಿವೆ.  ಟ್ರಂಪ್ ಆಡಳಿತಾವಧಿಯಲ್ಲಿ ಗಮನಾರ್ಹ ಮೌಲ್ಯದ ನಾಪತ್ತೆಯಾದ ವಸ್ತುಗಳು ಸೇರಿದಂತೆ ಗಮನಾರ್ಹ ಸಮಸ್ಯೆ ಕುರಿತು 2021ರ ನವೆಂಬರ್ ನಲ್ಲಿ  ಸ್ಟೇಟ್ ಡಿಪಾರ್ಟ್ಮೆಂಟ್ ಆಫ್ ಇನ್ಸ್‌ಪೆಕ್ಟರ್ ಜನರಲ್ ಕಚೇರಿ ವರದಿಯಲ್ಲಿ ಹೇಳಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com