ಕೋವಿಡ್-19 ಇನ್ನು ಮುಂದೆ ಆರೋಗ್ಯ ತುರ್ತು ಪರಿಸ್ಥಿತಿಯಲ್ಲ: ಡಬ್ಲ್ಯುಹೆಚ್ ಒ

ಕೋವಿಡ್-19 ಸಾಂಕ್ರಮಿಕ ಇನ್ನು ಮುಂದೆ 'ಜಾಗತಿಕ ಆರೋಗ್ಯ ತುರ್ತುಸ್ಥಿತಿ'ಯನ್ನು ಹೊಂದಿರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಘೋಷಿಸಿದೆ.
WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್
WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್

ನವದೆಹಲಿ: ಕೋವಿಡ್-19 ಸಾಂಕ್ರಮಿಕ ಇನ್ನು ಮುಂದೆ 'ಜಾಗತಿಕ ಆರೋಗ್ಯ ತುರ್ತುಸ್ಥಿತಿ'ಯನ್ನು ಹೊಂದಿರುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಘೋಷಿಸಿದೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಜಾಗತಿಕವಾಗಿ ಲಕ್ಷಾಂತರ ಜನರನ್ನು ಸೋಂಕಿಗೆ ಬಲಿಯಾಗಿಸಿದ, ಜನರ ಜೀವನದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಉಂಟುಮಾಡಿದ, ವಿಶ್ವಾದ್ಯಂತ ಲಾಕ್ ಡೌನ್ ಗೆ ಕಾರಣವಾದ ಕೋವಿಡ್ ಬಗ್ಗೆ ಡಬ್ಲ್ಯುಎಚ್ಒದ ಮೊದಲ ಪ್ರಕಟಣೆ ಬಂದಿದೆ. 

ಉತ್ತಮ ದೊಡ್ಡ ಭರವಸೆಯೊಂದಿಗೆ ಕೋವಿಡ್-19 ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಇರುವುದಿಲ್ಲ ಘೋಷಿಸುತ್ತೇನೆ ಎಂದು WHO ಡೈರೆಕ್ಟರ್ ಜನರಲ್ ಡಾ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಒಂದು ವರ್ಷಕ್ಕೂ ಹೆಚ್ಚು ಕಾಲ, ಸಾಂಕ್ರಾಮಿಕ ರೋಗವು ವ್ಯಾಕ್ಸಿನೇಷನ್‌ನಿಂದ ಜನಸಂಖ್ಯೆಯ ಪ್ರತಿರಕ್ಷೆಯನ್ನು ಹೆಚ್ಚಿಸುವುದರೊಂದಿಗೆ ಇಳಿಮುಖವಾಗಿದೆ. ಸೋಂಕಿನಿಂದ ಮರಣ ಪ್ರಮಾಣ ಕಡಿಮೆಯಾಗುತ್ತಿದೆ. ಆರೋಗ್ಯ ವ್ಯವಸ್ಥೆಗಳ ಮೇಲಿನ ಒತ್ತಡವು ಸರಾಗವಾಗುತ್ತಿದೆ ಎಂದು ಹೇಳಿದರು.

ಹೆಚ್ಚಿನ ದೇಶಗಳಲ್ಲಿ ಜನರು ಈಗ ಮೊದಲಿನ ಜೀವನ ಪರಿಸ್ಥಿತಿಗೆ ಮರಳುತ್ತಿದ್ದಾರೆ ಎಂದು ಟೆಡ್ರೊಸ್ ಹೇಳಿದರು. ಕೋವಿಡ್ -19 ತುರ್ತು ಸಮಿತಿಯು 15 ನೇ ಬಾರಿಗೆ ಭೇಟಿಯಾದ ನಂತರ ಮತ್ತು ಟೆಡ್ರೊಸ್ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗೆ ಅಂತ್ಯ ಎಂದು ಘೋಷಿಸಲು ಶಿಫಾರಸು ಮಾಡಿದ ನಂತರ ಈ ಪ್ರಕಟಣೆ ಬಂದಿದೆ.

ಆದಾಗ್ಯೂ, ಈ ನಿರ್ಧಾರವು ಕೋವಿಡ್ -19ನ ಅಪಾಯ ಮುಗಿದಿದೆ ಎಂದು ಅರ್ಥವಲ್ಲ. ಪರಿಸ್ಥಿತಿ ಬದಲಾದರೆ ಮತ್ತೆ ಕೋವಿಡ್ ಸೋಂಕು ಉಲ್ಭಣವಾದರೆ ತುರ್ತು ಸ್ಥಿತಿಯನ್ನು ಮರುಸ್ಥಾಪಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಡಬ್ಲ್ಯುಹೆಚ್ ಒ ಆರಂಭದಲ್ಲಿ ಜನವರಿ 30, 2020 ರಂದು ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗಿನಿಂದ ಜಾಗತಿಕವಾಗಿ ಸುಮಾರು ಏಳು ಮಿಲಿಯನ್ ಜನರು ಇದುವರೆಗೆ ಕೋವಿಡ್ -19 ನಿಂದ ಮೃತಪಟ್ಟಿದ್ದಾರೆ. ಕನಿಷ್ಠ 20 ಮಿಲಿಯನ್ ಜನರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ಟೆಡ್ರೊಸ್ ಹೇಳಿದ್ದಾರೆ. HIV ಯಂತೆಯೇ ವೈರಸ್ ಸಾಂಕ್ರಾಮಿಕ ಸ್ಥಿತಿಯನ್ನು ಮುಂದುವರೆಸುತ್ತದೆ ಎಂದು WHO ಹೇಳಿದೆ.

WHO ಪ್ರಕಾರ, ಮೊನ್ನೆ ಮೇ 3 ರ ಹೊತ್ತಿಗೆ ಕೋವಿಡ್-19 ನಿಂದ ಇದುವರೆಗೆ ಜಾಗತಿಕ ಮಟ್ಟದಲ್ಲಿ 69,21,614 ಸಾವುಗಳು ಸೇರಿದಂತೆ 76,52,22,932 ಕೋವಿಡ್ -19 ಪ್ರಕರಣಗಳು ದೃಢಪಟ್ಟಿವೆ, ಏಪ್ರಿಲ್ 29 ರವರೆಗೆ 13,34,46,70,055 ಲಸಿಕೆ ಡೋಸ್‌ಗಳನ್ನು ಸೋಂಕಿನ ವಿರುದ್ಧ ನಾಗರಿಕರಿಗೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com