
ಪ್ರಧಾನಿ ಮೋದಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರಧಾನ
ಫೋರ್ಟ್ ಮೊರೆಸ್ಬಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪಪುವಾ ನ್ಯೂ ಗಿನಿ ಮತ್ತು ಫಿಜಿ ದೇಶಗಳ ಅತ್ಯುನ್ನತ ನಾಗರಿಕ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಪಪುವಾ ನ್ಯೂ ಗಿನಿ ಗವರ್ನರ್ ಜನರಲ್ ಸರ್ ಬಾಬ್ ದಾಡೇ ಅವರು ನರೇಂದ್ರ ಮೋದಿ ಅವರಿಗೆ ಗ್ರಾಂಡ್ ಚಾಂಪಿಯನ್ ಆಫ್ ದಿ ಆರ್ಡರ್ ಆಫ್ ಲೆಗೊಹು ಪುರಸ್ಕಾರ ನೀಡಿ ಗೌರವಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಇದು ಇಲ್ಲಿನ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
An honour emblematic of depth of relationship.
Governor-General Sir Bob Dadae of Papua New Guinea conferred PM @narendramodi with country's highest civilian award, Grand Companion of the Order of Logohu (GCL). pic.twitter.com/CZGnfcd44e— Arindam Bagchi (@MEAIndia) May 22, 2023
ಇದನ್ನೂ ಓದಿ: 'ವಿಶ್ವ ಗುರು ಭಾರತ': ಪ್ರಧಾನಿ ಮೋದಿ ಪಾದ ಮುಟ್ಟಿದ ಪಪುವಾ ನ್ಯೂಗಿನಿ ಪ್ರಧಾನಿ ಮರಾಪೆ; ವಿಡಿಯೋ!
ಪ್ರಧಾನಿ ಮೋದಿಯವರಿಗೆ ಹಲವಾರು ರಾಷ್ಟ್ರಗಳು ಅತ್ಯುನ್ನತ ನಾಗರಿಕ ಗೌರವಗಳನ್ನು ನೀಡಿ ಗೌರವಿಸಿವೆ. ಈ ಮನ್ನಣೆಗಳು ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ದೂರದೃಷ್ಟಿಯ ಪ್ರತಿಬಿಂಬವಾಗಿದ್ದು, ಜಾಗತಿಕ ವೇದಿಕೆಯಲ್ಲಿ ಭಾರತದ ಶಕ್ತಿಯಾಗಿದೆ. ಇದು ವಿಶ್ವದಾದ್ಯಂತ ಭಾರತದ ಬಾಂಧವ್ಯ ಬೆಳೆಯುತ್ತಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.