
ವಿಮಾನದ ತುರ್ತು ನಿರ್ಗಮನ ಬಾಗಿಲು
ಸಿಯೋಲ್: ವಿಮಾನ ಹಾರಾಟದ ಮಾರ್ಗ ಮಧ್ಯದಲ್ಲಿ ಪ್ರಯಾಣಿಕನೊಬ್ಬ ತುರ್ತು ಬಾಗಿಲು ನಿರ್ಗಮನದ ಬಾಗಿಲನ್ನು ತೆರೆದಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ.
ಸಿಯೋಲ್ ನಿಂದ ಡಾಯಿಗು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಹೊರಟಿದ್ದ ಏಷಿಯನ್ ಏರ್ ಲೈನ್ಸ್ ನ ಎ 321 ವಿಮಾನದಲ್ಲಿ ಈ ಘಟನೆ ನಡೆದಿದ್ದು, ತುರ್ತು ನಿರ್ಗಮನ ಬಾಗಿಲು ಬಳಿ ಕುತಿಳಿದ್ದ ಪ್ರಯಾಣಿಕ ಆ ಬಾಗಿಲು ಎಳೆದ ತಕ್ಷಣ ಕ್ಯಾಬಿನ್ ಒಳಗೆ ಗಾಳಿ ತುಂಬಿ 12 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ವಿಮಾನ ಹಾರಾಟದ ಮಾರ್ಗ ಮಧ್ಯ ಯೋಧನಿಗೆ ಹೃದಯಾಘಾತ: ಪ್ರಾಣ ಉಳಿಸಿದ ಕೇರಳದ 'ಫ್ಲಾರೆನ್ಸ್ ನೈಟಿಂಗೇಲ್' ಪಿ.ಗೀತಾ!
Asiana Airlines A321 lands safely at Daegu Airport in South Korea after the emergency exit door was opened by a passenger on approach. 9 people taken to hospital with breathing difficulties. pic.twitter.com/Jzed4PMDvc
— Breaking Aviation News & Videos (@aviationbrk) May 26, 2023
ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದ ಪ್ರಯಾಣಿಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಅಪರಾಧ ಮಾಡಿದವರಿಗೆ ದಕ್ಷಿಣ ಕೊರಿಯಾದಲ್ಲಿ ಕನಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
— Breaking Aviation News & Videos (@aviationbrk) May 26, 2023