ಇಸ್ರೇಲ್ ಬಾಂಬ್ ದಾಳಿ: ಮೂವರು ವಿದೇಶಿಗರು ಸೇರಿ ಏಳು ಒತ್ತೆಯಾಳುಗಳ ಸಾವು; ಹಮಾಸ್ ಹೇಳಿಕೆ

ಗಾಜಾದ ಅತಿದೊಡ್ಡ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಮೂವರು ವಿದೇಶಿಗರು ಸೇರಿದಂತೆ ಏಳು ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ.
ಪ್ಯಾಲೆಸ್ಟೀನಿಯರು
ಪ್ಯಾಲೆಸ್ಟೀನಿಯರು

ಗಾಜಾದ ಅತಿದೊಡ್ಡ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಮೂವರು ವಿದೇಶಿಗರು ಸೇರಿದಂತೆ ಏಳು ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ.

ಜಬಾಲಿಯಾ ಶಿಬಿರದ ಸುರಂಗ ಸಂಕೀರ್ಣದ ಮೇಲಿನ ದಾಳಿಯಲ್ಲಿ ಹಮಾಸ್ ಮಿಲಿಟರಿ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಹೇಳಿತ್ತು. ನಿನ್ನೆ ನಡೆದ ಜಬಾಲಿಯಾ ಹತ್ಯಾಕಾಂಡದಲ್ಲಿ ಮೂವರು ವಿದೇಶಿಗರು ಸೇರಿದಂತೆ ಏಳು ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಮಿಲಿಟರಿ ವಿಭಾಗವು ಹೇಳಿಕೆ ತಿಳಿಸಿದೆ.

ಅಕ್ಟೋಬರ್ 7ರಂದು ಭಯಾನಕ ದಾಳಿ ನಡೆಸಿದ್ದ ಹಮಾಸ್ ಉಗ್ರರು ಇಸ್ರೇಲ್ ಗಡಿಯನ್ನು ದಾಟಿ 1,400 ಜನರನ್ನು ಹತ್ಯೆ ಮಾಡಿದ್ದು 240ಕ್ಕೂ ಹೆಚ್ಚು ಮಂದಿಯನ್ನು ಅಪಹರಿಸಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಇಸ್ರೇಲ್ ಹೇಳುತ್ತಿದೆ.

ಇಸ್ರೇಲಿ ಮಿಲಿಟರಿ ವಾಯುದಾಳಿ ಮೂಲಕ 'ಹಮಾಸ್ ಭಯೋತ್ಪಾದಕ ಸಂಘಟನೆಯ ಜಬಾಲಿಯಾ ಬ್ರಿಗೇಡ್‌ನ ಕಮಾಂಡರ್ ಇಬ್ರಾಹಿಂ ಬಿಯಾರಿಯನ್ನು ಹತ್ಯೆ ಮಾಡಿದೆ. ಆತ ಅಕ್ಟೋಬರ್ 7ರಂದು ಭಯೋತ್ಪಾದಕ ಉಗ್ರ ದಾಳಿಯನ್ನು ನಿರ್ದೇಶಿಸಿದವರಲ್ಲಿ ಒಬ್ಬನಾಗಿದ್ದನು.

ಹಮಾಸ್ ಉಗ್ರ ಸಂಘಟನೆಯನ್ನು ಕಿತ್ತೊಗೆಯುವ ಶಪತ ಮಾಡಿರುವ ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಅದರಂತೆ ಗಾಜಾಪಟ್ಟಿಯೊಳಗೆ ನುಗ್ಗಿರುವ ಐಡಿಎಫ್ ಹಮಾಸ್ ಭಯೋತ್ಪಾದಕ ನಸೀಮ್ ಅಬು ಅಜಿನಾ ಹತ್ಯೆ ಮಾಡಿದೆ. ಗುಪ್ತಚರ ಆಧಾರದ ಮೇಲೆ, ಯುದ್ಧ ವಿಮಾನಗಳು ಉಗ್ರರ ಅಡಗುತಾಣದ ಮೇಲೆ ದಾಳಿ ಮಾಡುತ್ತಿದೆ. ಈ ದಾಳಿಯಲ್ಲಿ ಉತ್ತರ ವಿಭಾಗದ ಬೀಟ್ ಲಾಹಿಯಾ ಬೆಟಾಲಿಯನ್‌ನ ನಸೀಮ್ ಅಬು ಅಜಿನಾ ಹತ್ಯೆಯಾಗಿದ್ದಾನೆ ಎಂದು ಹೇಳಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com