ಥಾಯ್ ಪ್ರಜೆಗಳು
ಥಾಯ್ ಪ್ರಜೆಗಳು

ಇಸ್ರೇಲ್- ಹಮಾಸ್ ಯುದ್ಧ: ಗಾಜಾದಲ್ಲಿ ಇನ್ನೂ ಒತ್ತೆಯಾಳಾಗಿರುವ 18 ಥಾಯ್ ಪ್ರಜೆಗಳು

ಕದನವಿರಾಮ ಒಪ್ಪಂದದಂತೆ 2ನೇ ಹಂತದಲ್ಲಿ  ಒಟ್ಟು 17  ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದ್ದರೂ ಇನ್ನೂ 18 ಥಾಯ್ ಪ್ರಜೆಗಳು ಗಾಜಾದಲ್ಲಿ ಒತ್ತೆಯಾಳಾಗಿ ಇರುವುದಾಗಿ ಥಾಯ್ಲೆಂಡ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಗಾಜಾ: ಕದನವಿರಾಮ ಒಪ್ಪಂದದಂತೆ 2ನೇ ಹಂತದಲ್ಲಿ  ಒಟ್ಟು 17  ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದ್ದರೂ ಇನ್ನೂ 18 ಥಾಯ್ ಪ್ರಜೆಗಳು ಗಾಜಾದಲ್ಲಿ ಒತ್ತೆಯಾಳಾಗಿ ಇರುವುದಾಗಿ ಥಾಯ್ಲೆಂಡ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಈ ಮಧ್ಯೆ ಶನಿವಾರ ರಾತ್ರಿ ಬಿಡುಗಡೆಯಾದ ನಾಲ್ವರು ಥಾಯ್ ಪ್ರಜೆಗಳ ಹೆಸರನ್ನು ಥಾಯ್ ಪ್ರಧಾನಿ ಶ್ರೆತ್ತಾ ಥಾವಿಸಿನ್ ಬಹಿರಂಗಗೊಳಿಸಿದ್ದಾರೆ. ಈ ನಾಲ್ವರನ್ನು ಬೀರ್ ಯಾಕೋವ್‌ನಲ್ಲಿರುವ ಅಸ್ಸಾಫ್ ಹರೋಫೆ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. 

ಹಮಾಸ್ ಹಾಗೂ ಇಸ್ರೇಲ್‌ ನಡುವಿನ ಒಪ್ಪಂದದನ್ವಯ 3 ಹಾಗೂ 1ರ ಅನುಪಾತದಲ್ಲಿ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ನಡೆಯುತ್ತಿದೆ. ಅಂದರೆ ಹಂತ, ಹಂತವಾಗಿ ಹಮಾಸ್‌ ಬಂಡುಕೋರರಿಂದ 50 ಒತ್ತೆಯಾಳುಗಳ ಬಿಡುಗಡೆ ಹಾಗೂ ಪ್ರತಿಯಾಗಿ ಇಸ್ರೇಲ್‌ನಿಂದ 150 ಪ್ಯಾಲೆಸ್ಟೀನ್‌ ಕೈದಿಗಳ ಬಿಡುಗಡೆ ಕುರಿತಂತೆ ಒಪ್ಪಂದ ಆಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com