ಆಪರೇಷನ್ ಅಜಯ್: ಇಸ್ರೇಲ್‌ನಿಂದ 18 ನೇಪಾಳಿಗರು, 286 ಭಾರತೀಯರನ್ನು ಹೊತ್ತ 5ನೇ ವಿಮಾನ ದೆಹಲಿಯತ್ತ!

ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಇಸ್ರೇಲ್ ತೊರೆಯುವ ಇಚ್ಛೆ ವ್ಯಕ್ತಪಡಿಸಿದ ಭಾರತೀಯ ನಾಗರಿಕರು ಮತ್ತು 18 ನೇಪಾಳಿ ಪ್ರಜೆಗಳನ್ನು ಹೊತ್ತ ವಿಶೇಷ ವಿಮಾನ 'ಆಪರೇಷನ್ ಅಜಯ್' ಅಡಿಯಲ್ಲಿ ಭಾರತಕ್ಕೆ ತೆರಳಿದೆ.
ಭಾರತೀಯರು
ಭಾರತೀಯರು
Updated on

ಟೆಲ್ ಅವೀವ್: ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಇಸ್ರೇಲ್ ತೊರೆಯುವ ಇಚ್ಛೆ ವ್ಯಕ್ತಪಡಿಸಿದ ಭಾರತೀಯ ನಾಗರಿಕರು ಮತ್ತು 18 ನೇಪಾಳಿ ಪ್ರಜೆಗಳನ್ನು ಹೊತ್ತ ವಿಶೇಷ ವಿಮಾನ 'ಆಪರೇಷನ್ ಅಜಯ್' ಅಡಿಯಲ್ಲಿ ಭಾರತಕ್ಕೆ ತೆರಳಿದೆ. 

ವಿದೇಶಾಂಗ ಸಚಿವ ಎಸ್ ಜೈಶಂಕರ್ ಸಾಮಾಜಿಕ ಮಾಧ್ಯಮ ವೇದಿಕೆ 'ಎಕ್ಸ್' ನಲ್ಲಿ, 'ಆಪರೇಷನ್ ಅಜಯ್ ಪ್ರಗತಿಯಲ್ಲಿದೆ. ಇನ್ನೂ 286 ಪ್ರಯಾಣಿಕರು ಭಾರತಕ್ಕೆ ಮರಳುತ್ತಿದ್ದು ವಿಮಾನದಲ್ಲಿ 18 ನೇಪಾಳಿ ಪ್ರಜೆಗಳು ಇದ್ದಾರೆ ಎಂದರು.

ಆಪರೇಷನ್ ಅಜಯ್ ಮುಂದುವರಿದಿದ್ದು, ಇದರ ಅಡಿಯಲ್ಲಿ ಟೆಲ್ ಅವಿವ್‌ನಿಂದ ಐದನೇ ವಿಮಾನ ದೆಹಲಿಗೆ ತೆರಳಿದೆ ಎಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಇಸ್ರೇಲ್‌ ನಲ್ಲಿನ ನೇಪಾಳದ ರಾಯಭಾರಿ ಕಾಂತಾ ರಿಜಾಲ್ ಅವರು 18 ನೇಪಾಳಿಗರಲ್ಲದೆ ಇನ್ನು ಹಲವು ಸಂಘರ್ಷದ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇತರರು ಸ್ವದೇಶಕ್ಕೆ ಮರಳಲು ಬಯಸಿದ್ದಾರೆ ಎಂದು ಹೇಳಿದರು.

ಅದರಲ್ಲಿ 'ನಾವು ಅಕ್ಟೋಬರ್ 12ರಂದು ನೇಪಾಳಿ ಏರ್‌ಲೈನ್ಸ್ ಮೂಲಕ 254 ನೇಪಾಳಿ ನಾಗರಿಕರನ್ನು ಕಳುಹಿಸಿದ್ದೇವೆ ಮತ್ತು ಉಳಿದವರನ್ನು ಸ್ಥಳಾಂತರಿಸಲು ಹೆಚ್ಚಿನ ವಿಮಾನಗಳನ್ನು ವ್ಯವಸ್ಥೆಗೊಳಿಸುವುದನ್ನು ಪರಿಗಣಿಸಬಹುದು' ಎಂದು ಅವರು ಹೇಳಿದರು.

ಇಸ್ರೇಲ್‌ನಲ್ಲಿ ನೇಪಾಳಿ ಮಿಷನ್‌ನ ಉಪ ಮುಖ್ಯಸ್ಥ ಅರ್ಜುನ್ ಧಿಮಿರೆ, 'ಎರಡೂ ರಾಯಭಾರ ಕಚೇರಿಗಳು (ಭಾರತೀಯ ಮತ್ತು ನೇಪಾಳಿ) ಸಂಪರ್ಕದಲ್ಲಿವೆ. ಯಾವಾಗಲೂ ಪರಸ್ಪರ ಸಹಾಯ ಮಾಡುತ್ತವೆ. ಈ ಬಾರಿಯೂ, ಸೀಮಿತ ವಿಮಾನಗಳ ದೃಷ್ಟಿಯಿಂದ, ನೇಪಾಳಿ ರಾಯಭಾರ ಕಚೇರಿಯು ತನ್ನ 18 ನಾಗರಿಕರನ್ನು ಸಾಗಿಸಲು ಕೇಳಿಕೊಂಡಿತ್ತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com