ಪ್ಯಾಲೇಸ್ಟಿನಿಯರಿಗೆ ಆಶ್ರಯ ನೀಡಿದ್ದ ಗಾಜಾ ಚರ್ಚ್ ಮೇಲೆ ಇಸ್ರೇಲ್ ದಾಳಿ; ನೂರಾರು ಮಂದಿ ಸಾವು: ಹಮಾಸ್ ಆರೋಪ

ಸುಮಾರು 500 ಪ್ಯಾಲೆಸ್ತೀನಿಯರು ವಾಸಿಸುತ್ತಿದ್ದ ಗಾಜಾದಲ್ಲಿರುವ ಆರ್ಥೊಡಾಕ್ಸ್ ಗ್ರೀಕ್ ಚರ್ಚ್‌ ಮೇಲೆ ಇಸ್ರೇಲಿ ವೈಮಾನಿಕ ದಾಳಿ ನಡೆಸಿದೆ ಎಂದು ಹಮಾಸ್ ನಿಯಂತ್ರಿತ ಆಂತರಿಕ ಸಚಿವಾಲಯ ತಿಳಿಸಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧ ಪ್ರಾರಂಭವಾದ ನಂತರ...
ಗಾಜಾ ಚರ್ಚ್ ಮೇಲೆ ದಾಳಿ
ಗಾಜಾ ಚರ್ಚ್ ಮೇಲೆ ದಾಳಿ

ಗಾಜಾ: ಸುಮಾರು 500 ಪ್ಯಾಲೆಸ್ತೀನಿಯರು ವಾಸಿಸುತ್ತಿದ್ದ ಗಾಜಾದಲ್ಲಿರುವ ಆರ್ಥೊಡಾಕ್ಸ್ ಗ್ರೀಕ್ ಚರ್ಚ್‌ ಮೇಲೆ ಇಸ್ರೇಲಿ ವೈಮಾನಿಕ ದಾಳಿ ನಡೆಸಿದೆ ಎಂದು ಹಮಾಸ್ ನಿಯಂತ್ರಿತ ಆಂತರಿಕ ಸಚಿವಾಲಯ ತಿಳಿಸಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧ ಪ್ರಾರಂಭವಾದ ನಂತರ, ಪ್ಯಾಲೇಸ್ಟಿನಿಯರು ಮನೆಗಳನ್ನು ತೊರೆದು ಇಲ್ಲಿ ಆಶ್ರಯ ಪಡೆದ್ದರು. ಈ ವಿನಾಶಕ್ಕೆ ಚರ್ಚ್ ಅಧಿಕಾರಿಗಳು ಇಸ್ರೇಲ್ ಅನ್ನು ದೂಷಿಸಿದ್ದಾರೆ.

ಗ್ರೀಕ್ ಆರ್ಥೊಡಾಕ್ಸ್ ಸೇಂಟ್ ಪೋರ್ಫಿರಿಯಸ್ ಚರ್ಚ್ ಗಾಜಾದ ಅತ್ಯಂತ ಹಳೆಯ ಚರ್ಚ್ ಆಗಿದೆ. ಅಲ್ ಜಜೀರಾ ಪ್ರಕಾರ, ಚರ್ಚ್‌ನ ಪಾದ್ರಿಯೊಬ್ಬರು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಅಲ್ಲಿ ಆಶ್ರಯ ಪಡೆದಿರುವ ಕಾರಣ ಅದನ್ನು ಗುರಿಯಾಗಿಸಲಾಗಿದೆ. ಚರ್ಚ್ ಮೇಲೆ ಯಾವುದೇ ದಾಳಿ ನಡೆದರೆ ಅದು ಕೇವಲ ಧರ್ಮದ ಮೇಲಿನ ದಾಳಿಯಾಗದೆ ಮಾನವೀಯತೆಯ ಮೇಲಿನ ದಾಳಿಯಾಗಲಿದೆ. ಇದು ಹೇಯ ಕೃತ್ಯ ಎಂದು ಫಾದರ್ ಇಲಿಯಾಸ್ ಹೇಳಿದ್ದರು.

ದಾಳಿಯಲ್ಲಿ ಆರ್ಚ್‌ಬಿಷಪ್ ಅಲೆಕ್ಸಿಯೊಸ್ ಪತ್ತೆಯಾಗಿದ್ದು ಜೀವಂತವಾಗಿದ್ದಾರೆ ಎಂದು ತೋರುತ್ತದೆ. ಆದರೆ ಅವರು ಗಾಯಗೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನಮಗೆ ತಿಳಿದಿಲ್ಲ ಎಂದು ಹೇಳಿಕೆ ತಿಳಿಸಿದೆ. ಚರ್ಚ್ ನಲ್ಲಿ ವಾಸವಿದ್ದ 500ಕ್ಕೂ ಹೆಚ್ಚು ಜನರ ಸ್ಥಿತಿಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ.

ಮಕ್ಕಳು ಮತ್ತು ಶಿಶುಗಳು ಸೇರಿದಂತೆ ನಿರಾಶ್ರಿತರು ಮಲಗಿದ್ದ ಎರಡು ಚರ್ಚ್ ಹಾಲ್‌ಗಳ ಮೇಲೆ ಬಾಂಬ್‌ ದಾಳಿಯಾಗಿದೆ ಎಂದು ಹಮಾಸ್ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ, ಬದುಕುಳಿದವರು ಅವಶೇಷಗಳಲ್ಲಿ ಇತರ ಬದುಕಿರುವವರಿಗಾಗಿ ಹುಡುಕುತ್ತಿದ್ದಾರೆ. ದಾಳಿಯಲ್ಲಿ 150-200 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ.

ಗಾಜಾದ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7ರಿಂದ 3,000 ಜನರು ಸಾವನ್ನಪ್ಪಿದ್ದು 12,500 ಜನರು ಗಾಯಗೊಂಡಿದ್ದಾರೆ. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಹಠಾತ್ ದಾಳಿಯ ನಂತರ ಇಸ್ರೇಲ್‌ನಲ್ಲಿ 1,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com