ಗಾಜಾದಲ್ಲಿ ತೀವ್ರ ಬಾಂಬ್ ದಾಳಿಯ ನಡುವೆ ಕಾರ್ಯಾಚರಣೆ ವಿಸ್ತರಿಸುತ್ತಿರುವ ಇಸ್ರೇಲಿ ಪಡೆಗಳು!

ಮುತ್ತಿಗೆ ಹಾಕಿದ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದಂತೆ, ಶುಕ್ರವಾರ ರಾತ್ರಿ ತೀವ್ರವಾದ ಬಾಂಬ್ ದಾಳಿಯಡಿ ಗಾಜಾ ಪಟ್ಟಿಯಲ್ಲಿ ಇಂಟರ್ನೆಟ್ ಮತ್ತು ಫೋನ್ ಸೇವೆಗಳು ರದ್ದಾಗಿ ಅದರ 2.3 ಮಿಲಿಯನ್ ಜನರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಂತಾಯಿತು. 
ಇಸ್ರೇಲ್ ವಾಯುದಾಳಿ
ಇಸ್ರೇಲ್ ವಾಯುದಾಳಿ

ದೇರ್ ಅಲ್-ಬಾಲಾ: ಮುತ್ತಿಗೆ ಹಾಕಿದ ಪ್ರದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದಂತೆ, ಶುಕ್ರವಾರ ರಾತ್ರಿ ತೀವ್ರವಾದ ಬಾಂಬ್ ದಾಳಿಯಡಿ ಗಾಜಾ ಪಟ್ಟಿಯಲ್ಲಿ ಇಂಟರ್ನೆಟ್ ಮತ್ತು ಫೋನ್ ಸೇವೆಗಳು ರದ್ದಾಗಿ ಅದರ 2.3 ಮಿಲಿಯನ್ ಜನರು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡಂತಾಯಿತು. 

ಮೂರು ವಾರಗಳ ಹಿಂದೆ ದಕ್ಷಿಣ ಇಸ್ರೇಲ್‌ನಲ್ಲಿ ಆಕ್ರಮಣದ ನಂತರ ಹಮಾಸ್ ಬಂಡುಕೋರರ ಗುಂಪನ್ನು ಹತ್ತಿಕ್ಕಲು ಪ್ರತಿಜ್ಞೆ ಮಾಡಿದ್ದಂತೆ ಗಾಜಾ ಸಂಪೂರ್ಣವಾಗಿ ಆಕ್ರಮಣಕ್ಕೆ ಹತ್ತಿರವಾಗುತ್ತಿರುವುದನ್ನು ಮಿಲಿಟರಿ ಹೇಳಿಕೆ ಸೂಚಿಸುತ್ತಿದೆ. ಶುಕ್ರವಾರ ರಾತ್ರಿಯ ನಂತರ ವೈಮಾನಿಕ ದಾಳಿಯಿಂದ ಗಾಜಾ ನಗರದಲ್ಲಿ  ಆಗಾಗ ಸ್ಫೋಟಗಳು ಆಗುತ್ತಿದ್ದಂತೆಯೇ, ಇಂಟರ್ನೆಟ್, ಸೆಲ್ಯುಲಾರ್ ಮತ್ತು ಲ್ಯಾಂಡ್‌ಲೈನ್ ಸೇವೆಗಳು ಸ್ಥಗಿತಗೊಂಡಿವೆ.

ವೈದ್ಯಕೀಯ ತಂಡ ಮತ್ತು ಕಾರ್ಯಾಚರಣೆಯ ಕೊಠಡಿಯೊಂದಿಗೆ ಎಲ್ಲಾ ಸಂಪರ್ಕವನ್ನು ಕಳೆದುಕೊಂಡಿದ್ದು, ಜನರು ಇನ್ನು ಮುಂದೆ ಆಂಬ್ಯುಲೆನ್ಸ್ ಸೇವೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಭಯವಾಗುತ್ತಿದೆ ಎಂದು ರೆಡ್ ಕ್ರೆಸೆಂಟ್ ಹೇಳಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು  ಇತರ ಸಹಾಯ ಗುಂಪುಗಳು ಹೇಳಿವೆ. 

ಬಾಂಬ್ ಸ್ಫೋಟದಿಂದಾಗಿ "ಎಲ್ಲಾ ಸಂವಹನ ಮತ್ತು ಇಂಟರ್ನೆಟ್ ಸೇವೆಗಳಿಗೆ ಸಂಪೂರ್ಣ ಅಡ್ಡಿಯಾಗಿದೆ ಎಂದು ಪ್ಯಾಲೆಸ್ತೀನ್ ಟೆಲಿಕಮ್ಯುನಿಕೇಶನ್ಸ್ ಕಂಪನಿ ಪಾಲ್ಟೆಲ್ ಘೋಷಿಸಿದೆ. ಯುದ್ಧದ ಗುರಿ ಸಾಧನೆ ನಿಟ್ಟಿನಲ್ಲಿ  ಗಾಜಾದಲ್ಲಿನ ಇಸ್ರೇಲ್ ಪಡೆಗಳು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿವೆ ಎಂದು ಇಸ್ರೇಲಿ ಮಿಲಿಟರಿ ವಕ್ತಾರ, ರಿಯರ್ ಅಡ್ಮ್. ಡೇನಿಯಲ್ ಹಗರಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com