ಸಿಂಗಾಪುರದ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಷಣ್ಮುಗರತ್ನಂ ಆಯ್ಕೆ

ಭಾರತೀಯ ಮೂಲದ ಸಿಂಗಾಪುರದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಅವರು ಶುಕ್ರವಾರ ಸಿಂಗಾಪುರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಥರ್ಮನ್ ಷಣ್ಮುಗರತ್ನಂ
ಥರ್ಮನ್ ಷಣ್ಮುಗರತ್ನಂ

ಸಿಂಗಾಪುರ: ಭಾರತೀಯ ಮೂಲದ ಸಿಂಗಾಪುರದ ಅರ್ಥಶಾಸ್ತ್ರಜ್ಞ ಥರ್ಮನ್ ಷಣ್ಮುಗರತ್ನಂ ಅವರು ಶುಕ್ರವಾರ ಸಿಂಗಾಪುರದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇಂದು ನಡೆದ ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಷಣ್ಮುಗರತ್ನಂ ಅವರು, ಚೀನಾ ಮೂಲದ ಇಬ್ಬರು ಪ್ರತಿಸ್ಪರ್ಧಿಗಳನ್ನು ಸೋಲಿಸಿ, ಸಿಂಗಾಪುರದ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

2011 ರಿಂದ 2019 ರವರೆಗೆ ಸಿಂಗಾಪುರದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ 66 ವರ್ಷದ ಷಣ್ಮುಗರತ್ನಂ ಅವರು ಶೇ. 70.4 ರಷ್ಟು ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿಗಳಾದ ಎನ್‌ಜಿ ಕೊಕ್ ಸಾಂಗ್ ಮತ್ತು ತಾನ್ ಕಿನ್ ಲಿಯಾನ್ ಅವರು ಕ್ರಮವಾಗಿ ಶೇಕಡಾ 15.7 ಮತ್ತು 13.88 ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ಥರ್ಮನ್ ಅವರನ್ನು ಪ್ರಧಾನಿ ಲೀ ಸೀನ್ ಲೂಂಗ್ ಅವರು ಅಭಿನಂದಿಸಿದ್ದಾರೆ.

"ಸಿಂಗಾಪುರದ ಜನ ಥರ್ಮನ್ ಷಣ್ಮುಗರತ್ನಂ ಅವರನ್ನು ನಿರ್ಣಾಯಕ ಅಂತರದಿಂದ ನಮ್ಮ ಮುಂದಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ರಾಷ್ಟ್ರದ ಮುಖ್ಯಸ್ಥರಾಗಿ, ಅವರು ದೇಶ ಮತ್ತು ವಿದೇಶಗಳಲ್ಲಿ ನಮ್ಮನ್ನು ಪ್ರತಿನಿಧಿಸುತ್ತಾರೆ. ಮೀಸಲು ಮತ್ತು ಪ್ರಮುಖ ನೇಮಕಾತಿಗಳನ್ನು ಒಳಗೊಂಡಂತೆ ಕಸ್ಟಡಿಯಲ್ ಅಧಿಕಾರಗಳನ್ನು ಅವರು ಚಲಾಯಿಸುತ್ತಾರೆ" ಎಂದು ಲೀ ಸೀನ್ ಲೂಂಗ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com