
ಎಲಾನ್ ಮಸ್ಕ್, ಪತ್ನಿ ಜೊತೆ ಗೂಗಲ್ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್
ನ್ಯೂಯಾರ್ಕ್: ಗೂಗಲ್ ನ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್ ತಮ್ಮ ಪತ್ನಿ ನಿಕೋಲ್ ಶಾನಹನ್ ಗೆ ಸದ್ದಿಲ್ಲದೇ ವಿಚ್ಛೇದನ ನೀಡಿದ್ದಾರೆ.
ನಿಕೋಲ್ ಶಾನಹನ್ ವಕೀಲೆ ಹಾಗೂ ವಾಣಿಜ್ಯೋದ್ಯಮಿಯಾಗಿದ್ದು, ಆಕೆ ವಿರುದ್ಧ ಎಲಾನ್ ಮಸ್ಕ್ ಜೊತೆ ಸಂಬಂಧ ಹೊಂದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸೆರ್ಗೆ ಬ್ರಿನ್ ಪತ್ನಿಗೆ ವಿಚ್ಛೇದನ ನೀಡಿದ್ದಾರೆ.
ಮೇ ತಿಂಗಳಲ್ಲೇ ವಿಚ್ಛೇದನ ದೊರೆತಿದ್ದು, ಈಗ ಈ ಮಾಹಿತಿ ಬಹಿರಂಗವಾಗಿದೆ. ಶಾನಹನ್ ವಿಚ್ಛೇದನಕ್ಕೆ ಒಪ್ಪಿಗೆ ನೀಡಿರಲಿಲ್ಲ. ಕೋರ್ಟ್ ಗೆ ಸಂಗಾತಿಯ ಬೆಂಬಲ ಕೊಡಿಸುವಂತೆ ಶಾನಹನ್ ಪ್ರಾರ್ಥಿಸಿದ್ದರು ಅವರು ಗೌಪ್ಯ ಮಧ್ಯಸ್ಥಿಕೆಯಲ್ಲಿ ವಕೀಲರ ಶುಲ್ಕಗಳು ಮತ್ತು ಆಸ್ತಿಗಳ ವಿಭಜನೆ ಸೇರಿದಂತೆ ಇತರ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ ಎಂದು ಕೋರ್ಟ್ ದಾಖಲೆಗಳ ಮೂಲಕ ತಿಳಿದುಬಂದಿದೆ.
ಇದನ್ನೂ ಓದಿ: ಟ್ವಿಟರ್ ನಲ್ಲಿ ಶೀಘ್ರ ವಿಡಿಯೊ-ಆಡಿಯೊ ಕರೆ ಸೇವೆ: ಎಲಾನ್ ಮಸ್ಕ್ ಘೋಷಣೆ
ಸೆರ್ಗೆ ಬ್ರಿನ್ ನಿಕೋಲ್ ಶಾನಹನ್, ಇಬ್ಬರೂ ಮೊದಲ ಬಾರಿಗೆ 2015 ರಲ್ಲಿ ಡೇಟಿಂಗ್ ಪ್ರಾರಂಭಿಸಿದ್ದರು. ಅದೇ ವರ್ಷ ಬ್ರಿನ್ ತನ್ನ ಮೊದಲ ಪತ್ನಿ ಆನ್ನೆ ವೊಜ್ಸಿಕಿಯಿಂದ ವಿಚ್ಛೇದನ ಪಡೆದು ಅಂತಿಮವಾಗಿ 2018 ರಲ್ಲಿ ನಿಕೋಲ್ ಶಾನಹಾನ್ ಅವರನ್ನು ವಿವಾಹವಾದರು ಎಂದು ಬ್ಯುಸಿನೆಸ್ ಇನ್ಸೈಡರ್ ವರದಿ ಮಾಡಿದೆ.
ಆದರೆ, ಅವರು 2021 ರಲ್ಲಿ ಬೇರ್ಪಟ್ಟರು ಮತ್ತು ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು, ನಂತರ ಬ್ರಿನ್ "ಸರಿಪಡಿಸಲಾಗದ ವ್ಯತ್ಯಾಸದ ಕಾರಣವನ್ನು ನೀಡಿ 2022 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು, ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ವರ್ಷಗಳ ಕಾಲ ಸ್ನೇಹಿತರಾಗಿದ್ದ ಎಲೋನ್ ಮಸ್ಕ್ ಅವರೊಂದಿಗೆ ತಮ್ಮ ಪತ್ನಿ ಸಂಬಂಧವನ್ನು ಹೊಂದಿದ್ದರು ಎಂದು ಆರೋಪಿಸಿದ್ದರು. ಆದಾಗ್ಯೂ ಮಸ್ಕ್ ಮತ್ತು ಶಾನಹಾನ್ ಇಬ್ಬರೂ ತಮ್ಮ ಆಪಾದಿತ ಸಂಬಂಧವನ್ನು ನಿರಾಕರಿಸಿದ್ದರು.