ವಯಸ್ಸು ಕೇವಲ ಸಂಖ್ಯೆಯಷ್ಟೇ: 99ನೇ ವಯಸ್ಸಿನಲ್ಲಿ ಅಮೇರಿಕಾ ಪೌರತ್ವ ಪಡೆದ ಭಾರತೀಯ ಮಹಿಳೆ!

99 ನೇ ವಯಸ್ಸಿನಲ್ಲಿ ಭಾರತೀಯ ಮಹಿಳೆಯೊಬ್ಬರು ಅಮೇರಿಕಾ ಪೌರತ್ವ ಪಡೆದು ಸಾಧನೆ ಮಾಡಿದ್ದಾರೆ.
99ನೇ ವಯಸ್ಸಿನಲ್ಲಿ ಅಮೇರಿಕಾ ಪೌರತ್ವ ಪಡೆದ ಭಾರತೀಯ ಮಹಿಳೆ
99ನೇ ವಯಸ್ಸಿನಲ್ಲಿ ಅಮೇರಿಕಾ ಪೌರತ್ವ ಪಡೆದ ಭಾರತೀಯ ಮಹಿಳೆonline desk

ವಾಷಿಂಗ್ ಟನ್: 99 ನೇ ವಯಸ್ಸಿನಲ್ಲಿ ಭಾರತೀಯ ಮಹಿಳೆಯೊಬ್ಬರು ಅಮೇರಿಕಾ ಪೌರತ್ವ ಪಡೆದು ಸಾಧನೆ ಮಾಡಿದ್ದಾರೆ. ದೈಬಾಯಿ ಎಂಬ ವೃದ್ಧೆ 99 ನೇ ವಯಸ್ಸಿನಲ್ಲಿ ಅಮೇರಿಕಾ ಪೌರತ್ವ ಪಡೆದಿರುವುದನ್ನು ಅಮೇರಿಕಾ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ ಘೋಷಣೆ ಮಾಡಿದ್ದು ವಯಸ್ಸೆಂಬುದು ಕೇವಲ ಸಂಖ್ಯೆಯಷ್ಟೇ ಎಂದು ಹೇಳಿದ್ದು, ನಮ್ಮ ಒರ್ಲ್ಯಾಂಡೊ ಕಚೇರಿಯಲ್ಲಿರುವ ಈ ಉತ್ಸಾಹಭರಿತ 99 ವರ್ಷದ ವ್ಯಕ್ತಿಯ ವಿಷಯದಲ್ಲಿ ಇದು ಅದು ನಿಜವೆಂದು ತೋರುತ್ತದೆ ಎಂದು ಹೇಳಿದೆ.

ದೈಬಾಯಿ ಅವರು ಭಾರತದವರಾಗಿದ್ದು, ನಿಷ್ಠೆಯ ಪ್ರಮಾಣವಚನ ಸ್ವೀಕರಿಸಲು ಉತ್ಸುಕರಾಗಿದ್ದರು. ದೈಬಾಯಿ ಅವರು ಪೌರತ್ವ ಪ್ರಮಾಣ ವಚನ ಸ್ವೀಕರಿಸಿ, ತಮ್ಮ ಮಗಳು ಮತ್ತು ನಮ್ಮ ಅಧಿಕಾರಿಯೊಂದಿಗೆ ಫೋಟೊಗೆ ಪೋಸ್ ನೀಡಿದ್ದಾರೆ. ದೈಬಾಯಿಗೆ ಅಭಿನಂದನೆಗಳು" ಎಂದು USCIS X (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದೆ.

99ನೇ ವಯಸ್ಸಿನಲ್ಲಿ ಅಮೇರಿಕಾ ಪೌರತ್ವ ಪಡೆದ ಭಾರತೀಯ ಮಹಿಳೆ
ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಹೆಚ್1-ಬಿ ವೀಸಾ ಮೇಲಿನ ನಿರ್ಬಂಧ ರದ್ದು: ಜೋ ಬಿಡೆನ್

ದೈಬಾಯಿ ಪೌರತ್ವ ಪಡೆದಿರುವುದನ್ನು ಹಲವರು ಸಂಭ್ರಮಿಸುತ್ತಿರುವಾಗ, ಕೆಲವು ಭಾರತೀಯ X ಬಳಕೆದಾರರು ನೈಸರ್ಗಿಕೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು US ಗೆ ಏಕೆ ಇಷ್ಟು ಸಮಯ ತೆಗೆದುಕೊಂಡಿತು ಎಂದು ಪ್ರಶ್ನಿಸುತ್ತಿದ್ದಾರೆ. 99 ವಯಸ್ಸಿನ ಭಾರತೀಯ ಮಹಿಳೆ ತಮ್ಮ ಮಗಳೊಂದಿಗೆ ವರ್ಷಗಳಿಂದ ಫ್ಲೋರಿಡಾದಲ್ಲಿ ನೆಲೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com