ಪಾಕಿಸ್ತಾನ: ಪೊಲೀಸ್ ಠಾಣೆಗೆ ತೆರಳಿ ಆರಕ್ಷಕರನ್ನು ಥಳಿಸಿದ ಸೈನಿಕರು: ವೀಡಿಯೋ ವೈರಲ್

ಪಾಕಿಸ್ತಾನದ ಸೇನೆಯ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ತೆರಳಿ ಆರಕ್ಷಕರನ್ನು ಥಳಿಸಿರುವ ಘಟನೆ ಅಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಪಾಕಿಸ್ತಾನ: ಪೊಲೀಸ್ ಠಾಣೆಗೆ ತೆರಳಿ ಆರಕ್ಷಕರನ್ನು ಥಳಿಸಿದ ಸೈನಿಕರು
ಪಾಕಿಸ್ತಾನ: ಪೊಲೀಸ್ ಠಾಣೆಗೆ ತೆರಳಿ ಆರಕ್ಷಕರನ್ನು ಥಳಿಸಿದ ಸೈನಿಕರುonline desk

ಪಾಕಿಸ್ತಾನದ ಸೇನೆಯ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ತೆರಳಿ ಆರಕ್ಷಕರನ್ನು ಥಳಿಸಿರುವ ಘಟನೆ ಅಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಆರಕ್ಷಕರನ್ನು ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಆದರೆ ಪೊಲೀಸ್ ಅಧಿಕಾರಿಗಳು ಈ ಘಟನೆ ನಡೆದಿರುವುದನ್ನು ಅಲ್ಲಗಳೆದಿದ್ದಾರೆ.

ಸೇನಾ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದಂತೆ ರೇಡ್ ನಡೆದ ಹಿನ್ನೆಲೆಯಲ್ಲಿ ಸೇನೆಯ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ತೆರಳಿ ಈ ದಾಳಿ ನಡೆಸಿದ್ದಾರೆ.

ಮತ್ತೊಂದು ಕ್ಲಿಪ್ ನಲ್ಲಿ ಯುವ ಅಧಿಕಾರಿಗಳು ಸೇನಾ ಸಿಬ್ಬಂದಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿರುವುದು ದಾಖಲಾಗಿದೆ. ಮೂಲಗಳ ಪ್ರಕಾರ, "ಮೂವರು ನಾಗರಿಕರನ್ನು ಅಕ್ರಮವಾಗಿ ಬಂಧಿಸಲಾಗಿದೆ ಮತ್ತು ಪಂಜಾಬ್ ಪೊಲೀಸ್ ಸಿಬ್ಬಂದಿ ಅವರ ಬಿಡುಗಡೆಗೆ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದರು, ಅಷ್ಟೇ ಅಲ್ಲದೇ ಮೂವರ ಸಹಚರನನ್ನು ಬಂಧಿಸಲು ಪೊಲೀಸರು ಸೇನಾ ಅಧಿಕಾರಿಯ ನಿವಾಸದ ಮೇಲೆ ದಾಳಿ ನಡೆಸಿದರು.

ಪಾಕಿಸ್ತಾನ: ಪೊಲೀಸ್ ಠಾಣೆಗೆ ತೆರಳಿ ಆರಕ್ಷಕರನ್ನು ಥಳಿಸಿದ ಸೈನಿಕರು
ದಿನೇಶ್ ಗುಂಡೂರಾವ್​ ಮನೆಯಲ್ಲಿ ಅರ್ಧ ಪಾಕಿಸ್ತಾನ ಹೇಳಿಕೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ FIR

ಈ ಘಟನೆಯಲ್ಲಿ ತೊಡಗಿದ್ದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ. ಸಮವಸ್ತ್ರದಲ್ಲಿರುವ ಪೊಲೀಸರನ್ನು ಮಂಡಿಯೂರುವಂತೆ ಮಾಡಿರುವುದು ವೀಡಿಯೋ ಕ್ಲಿಪ್ ನಲ್ಲಿ ಕಂಡುಬಂಡಿದೆ. ಅಷ್ಟೇ ಅಲ್ಲದೇ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಹಿಂಸೆ ನೀಡುತ್ತಿದ್ದು, ಪೊಲೀಸ್ ಅಧಿಕಾರಿಗಳು ತಮ್ಮನ್ನು ಬಿಟ್ಟುಬಿಡುವಂತೆ ಮನವಿ ಮಾಡಿಕೊಳ್ಳುತ್ತಿರುವುದು ದಾಖಲಾಗಿದೆ.

ಇದು ಕೆಲವು ಸೇನಾ ಸಿಬ್ಬಂದಿಯನ್ನು ಕೆರಳಿಸಿತು ಮತ್ತು ನಂತರ ಅವರು ಆ ಮೂವರನ್ನು ಬಿಡುಗಡೆ ಮಾಡಲು ಬಹವಾಲ್‌ನಗರದ ಮದ್ರಸಾ ಪೊಲೀಸ್ ಠಾಣೆಗೆ ದಾಳಿ ನಡೆಸಿದರು. ಆ ದಾಳಿಯ ವೇಳೆ ಪೊಲೀಸರಿಗೆ ಚಿತ್ರಹಿಂಸೆ ನೀಡಲಾಯಿತು' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ಪಿಟಿಐಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com