ಮಕ್ಕಳನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದ ಪಾಕ್ ನಲ್ಲಿರುವ ಭಾರತದ ಮಹಿಳೆ!

ಫರ್ಜಾನಾ ಬೇಗಂ ಎಂಬ ಮುಂಬೈ ಮೂಲದ ಮಹಿಳೆ ಈಗ ಪಾಕಿಸ್ತಾನದಲ್ಲಿದ್ದಾರೆ. ಆಕೆ ತನ್ನ ಮಕ್ಕಳನ್ನು ವಶಕ್ಕೆ ಪಡೆಯುವುದಕ್ಕೆ ಹೋರಾಟ ನಡೆಸುತ್ತಿದ್ದು, ಭಾರತಕ್ಕೆ ಮರಳಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ತನ್ನ ಮಕ್ಕಳ ಜೀವ ಅಪಾಯದಲ್ಲಿದೆ ಎಂದೂ ಆರೋಪಿಸಿದ್ದಾರೆ.
ಫರ್ಜಾನಾ ಬೇಗಂ
ಫರ್ಜಾನಾ ಬೇಗಂ online desk

ಇಸ್ಲಾಮಾಬಾದ್: ಫರ್ಜಾನಾ ಬೇಗಂ ಎಂಬ ಮುಂಬೈ ಮೂಲದ ಮಹಿಳೆ ಈಗ ಪಾಕಿಸ್ತಾನದಲ್ಲಿದ್ದಾರೆ. ಆಕೆ ತನ್ನ ಮಕ್ಕಳನ್ನು ವಶಕ್ಕೆ ಪಡೆಯುವುದಕ್ಕೆ ಹೋರಾಟ ನಡೆಸುತ್ತಿದ್ದು, ಭಾರತಕ್ಕೆ ಮರಳಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ತನ್ನ ಮಕ್ಕಳ ಜೀವ ಅಪಾಯದಲ್ಲಿದೆ ಎಂದೂ ಆರೋಪಿಸಿದ್ದಾರೆ.

ಫರ್ಜಾನ ಬೇಗಮ್ ಎಂಬುವವರು 2015 ರಲ್ಲಿ ಪಾಕಿಸ್ತಾನದ ಪ್ರಜೆ ಮಿರ್ಜಾ ಮುಬಿನ್ ಇಲಾಹಿ ಅವರನ್ನು ಅಬು ಧಾಬಿಯಲ್ಲಿ ವಿವಾಹವಾಗಿದ್ದರು. ನಂತರ ಪಾಕಿಸ್ತಾನಕ್ಕೆ ಬಂದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಫರ್ಜಾನಾ ಬೇಗಂ
'ಫೇಸ್ ಬುಕ್' ಸ್ನೇಹಿತನ ಭೇಟಿಗಾಗಿ ಭಾರತದ ವಿವಾಹಿತ ಮಹಿಳೆ ಪಾಕಿಸ್ತಾನಕ್ಕೆ ಪ್ರಯಾಣ!

ಫರ್ಜಾನಾ ತನ್ನ ಮಕ್ಕಳನ್ನು ವಶಕ್ಕೆ ಪಡೆಯುವ ವಿಷಯವಾಗಿಹಾಗೂ ಮಕ್ಕಳ ಹೆಸರಿನಲ್ಲಿದ್ದ ಆಸ್ತಿಗೆ ಸಂಬಂಧಿಸಿದ ವಿಷಯವಾಗಿ ಪತಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.

ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದೇನೆ ಎಂದು ಹೇಳಿರುವ ಮಿರ್ಜಾ ಮುಬಿನ್ ಹೇಳಿಕೆಯನ್ನು ಫರ್ಜಾನಾ ನಿರಾಕರಿಸಿದ್ದು ಪ್ರಮಾಣ ಪತ್ರ ತೋರಿಸುವಂತೆ ಕೇಳಿದ್ದಾರೆ.

"ಪಾಕಿಸ್ತಾನದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನನ್ನ ಮತ್ತು ನನ್ನ ಮಕ್ಕಳ ಜೀವಕ್ಕೆ ಅಪಾಯವಿದೆ. ನಾನು ಲಾಹೋರ್‌ನ ರೆಹಮಾನ್ ಗಾರ್ಡನ್ಸ್‌ನಲ್ಲಿರುವ ನನ್ನ ಮನೆಗೆ ಸೀಮಿತವಾಗಿದ್ದೇನೆ ಮತ್ತು ನನ್ನ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆ, ನನ್ನ ಮಕ್ಕಳು ಇಲ್ಲದೆ ನಾನು ಭಾರತಕ್ಕೆ ಹಿಂತಿರುಗುವುದಿಲ್ಲ ಎಂದು ಫರ್ಜಾನಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com