ಪ್ರಧಾನಿ ಮೋದಿ-ಪ್ರಿಯಾಂಕಾ ವಾದ್ರಾ
ಪ್ರಧಾನಿ ಮೋದಿ-ಪ್ರಿಯಾಂಕಾ ವಾದ್ರಾ

ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗ ಮಾಡಿದ್ದಾರೆ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ವಾದ್ರಾ ವಾಗ್ದಾಳಿ

ಮಹಿಳೆಯರ ಮನಸಿನಲ್ಲಿರುವ ಸೇವಾಭಾವನೆ ಬಿಜೆಪಿಗೆ ಅರ್ಥವಾಗಲ್ಲ. ಪ್ರಧಾನಿ ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ. 'ದೇಶದ ದೊಡ್ಡ ನಾಯಕ ನೈತಿಕತೆಯನ್ನು ತೊರೆದಿದ್ದಾರೆ'. ಅವರು ಜನರ ಮುಂದೆ ನಾಟಕ ಮಾಡುತ್ತಿದ್ದಾರೆ. ಅವರು ಸತ್ಯದ ಮಾರ್ಗವನ್ನು ಅನುಸರಿಸುತ್ತಿಲ್ಲ.

ಚಿತ್ರದುರ್ಗ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳ ಮಾಂಗಲ್ಯವನ್ನು ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ವಾದ್ರಾ ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗಮಾಡಿದ್ದಾರೆ ಎಂದರು.

ಮಹಿಳೆಯರ ಮನಸಿನಲ್ಲಿರುವ ಸೇವಾಭಾವನೆ ಬಿಜೆಪಿಗೆ ಅರ್ಥವಾಗಲ್ಲ. ಪ್ರಧಾನಿ ಮೋದಿಗೆ ಮಾಂಗಲ್ಯದ ಬೆಲೆಯೇ ಗೊತ್ತಿಲ್ಲ. 'ದೇಶದ ದೊಡ್ಡ ನಾಯಕ ನೈತಿಕತೆಯನ್ನು ತೊರೆದಿದ್ದಾರೆ' ಎಂದು ಆರೋಪಿಸಿದ್ದಾರೆ. ಅವರು ಜನರ ಮುಂದೆ ನಾಟಕ ಮಾಡುತ್ತಿದ್ದಾರೆ. ಅವರು ಸತ್ಯದ ಮಾರ್ಗವನ್ನು ಅನುಸರಿಸುತ್ತಿಲ್ಲ ಎಂದು ಹೇಳಿದರು.

ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ, ಅವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕುವ ಹಾಗೂ ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಅಟ್ಟುವ ಪ್ರಯತ್ನಗಳು ನಡೆಯುತ್ತಿವೆ ಎಂದರು. ಕರ್ನಾಟಕದ ಮತದಾರರು ದ್ವೇಷದ ಭಾಷಣಗಳಿಂದ ಪ್ರಚೋದನೆಗೆ ಒಳಗಾಗಬಾರದು ಮತ್ತು ಮತದಾನ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರಧಾನಿ ಮೋದಿ-ಪ್ರಿಯಾಂಕಾ ವಾದ್ರಾ
ಮೋದಿ ಸತ್ಯದ ಹಾದಿಯಲ್ಲಿ ನಡೆಯುತ್ತಿಲ್ಲ, ನೂರಾರು ಕೋಟಿ ರೂ. ನೀಡಿ ಶಾಸಕರ ಖರೀದಿಸುತ್ತಾರೆ: ಪ್ರಿಯಾಂಕಾ ಗಾಂಧಿ

ಮಂಗಳವಾರ ಕರ್ನಾಟಕದ ಚಿತ್ರದುರ್ಗದ ಪ್ರಧಾನ ಕಚೇರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಒಬ್ಬ ನಾಯಕ ಎದ್ದು ನಿಂತಾಗ ನೀತಿಗಳನ್ನು ಅನುಸರಿಸುವ ವ್ಯಕ್ತಿಯಾಗುತ್ತಾನೆ ಎಂದು ಜನರು ನಿರೀಕ್ಷಿಸುವ ಸಮಯವಿತ್ತು. ದೇಶದ ಜನತೆ ಇವರಿಂದ ನೈತಿಕತೆಯನ್ನು ನಿರೀಕ್ಷಿಸಿದ್ದರು. ಆದರೆ ಇಂದು ದೇಶದ ದೊಡ್ಡ ನಾಯಕ ನೀತಿಗಳನ್ನು ಬಿಟ್ಟು ನಿಮ್ಮ ಮುಂದೆ ನಾಟಕವಾಡುತ್ತಿದ್ದಾರೆ. ರಾಜಕೀಯ ಮೌಲ್ಯಗಳನ್ನು ನೀಡುತ್ತಾ ಸೇವೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವ ಸಂದೇಶವನ್ನು ಹಿಂದೂ ಧರ್ಮ ನೀಡುತ್ತದೆ ಎಂದರು. ಭಗವಾನ್ ರಾಮನೂ ಇದೇ ಸಂದೇಶವನ್ನು ನೀಡಿದ್ದಾನೆ.

ಮಹಾತ್ಮಾ ಗಾಂಧಿ ಮತ್ತು ಎಲ್ಲಾ ಪಕ್ಷಗಳ ವಿವಿಧ ಪ್ರಧಾನಿಗಳು ಸಹ ಈ ತತ್ವಗಳನ್ನು ಅನುಸರಿಸಿದರು. ಆದರೆ ಈಗ ಎಲ್ಲೂ ಕಾಣುತ್ತಿಲ್ಲ. ಎಲೆಕ್ಟೋರಲ್ ಬಾಂಡ್ ಯೋಜನೆ ರದ್ದತಿಗೆ ಸಂಬಂಧಿಸಿದಂತೆ ಗಂಭೀರ ಆರೋಪ ಮಾಡಿದ ಅವರು, ದಾಳಿಗೊಳಗಾದ ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿವೆ ಎಂದು ಹೇಳಿದರು. ಆ ಬಳಿಕ ಅವರ ಮೇಲಿದ್ದ ಪ್ರಕರಣಗಳನ್ನು ಮುಚ್ಚಲಾಯಿತು. ನೋಟು ಅಮಾನ್ಯೀಕರಣದ ಸಮಯದಲ್ಲಿ ಕಪ್ಪು ಹಣವನ್ನು ಹೇಗೆ ಬಿಳಿಯಾಗಿ ಪರಿವರ್ತಿಸಲಾಯಿತು ಮತ್ತು ನಂತರ ಅದನ್ನು ಬಿಜೆಪಿ ಖಾತೆಗೆ ಹೇಗೆ ಜಮಾ ಮಾಡಲಾಯಿತು ಎಂಬುದು ಈಗ ಸ್ಪಷ್ಟವಾಗುತ್ತಿದೆ.

ಪ್ರಧಾನಿ ಮೋದಿ-ಪ್ರಿಯಾಂಕಾ ವಾದ್ರಾ
ಮುಸ್ಲಿಮರಿಗೆ ದೇಶದ ಸಂಪತ್ತು ಹಂಚಿಕೆ: ಮೋದಿ ಹೇಳಿಕೆ ವಿರೋಧಿಸಿ EC ಗೆ 17 ಸಾವಿರಕ್ಕೂ ಹೆಚ್ಚು ಭಾರತೀಯರು ಪತ್ರ!

ಕಾಂಗ್ರೆಸ್‌ನ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಾಗಿದೆ ಮತ್ತು ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ವಿರೋಧ ಪಕ್ಷಗಳನ್ನು ದುರ್ಬಲಗೊಳಿಸಲು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಿಜೆಪಿಗೆ 400 ಸ್ಥಾನ ಬಂದರೆ ಸಂವಿಧಾನವನ್ನೇ ಬದಲಿಸಲಿದೆ ಎಂದು ಹೇಳಲಾಗುತ್ತಿದೆ. ಅವರು ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುತ್ತಿದ್ದರೆ, ಅವರು ನಿಮ್ಮ ಜೀವನವನ್ನು ಬದಲಾಯಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com