ಪತ್ನಿಯನ್ನು ಹತ್ಯೆ ಮಾಡಿ ಆಕೆಯ ವಿಮೆ ಹಣದಿಂದ ಸೆಕ್ಸ್ ಆಟಿಕೆ ಖರೀದಿಸಿದ ಪತಿ ಮಹಾಶಯ!

ಅಮೇರಿಕಾದಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಹತ್ಯೆ ಮಾಡಿ ಆಕೆಯ ವಿಮೆ ಹಣ ಪಡೆದು ಜೀವಂತ ವ್ಯಕ್ತಿಯ ಗಾತ್ರದ ಸೆಕ್ಸ್ ಆಟಿಕೆ ಖರೀದಿಸಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಪತ್ನಿಯೊಂದಿಗೆ ಕಾಲ್ಬಿ ಟ್ರಿಕಲ್
ಪತ್ನಿಯೊಂದಿಗೆ ಕಾಲ್ಬಿ ಟ್ರಿಕಲ್ online desk

ನ್ಯೂಯಾರ್ಕ್: ಅಮೇರಿಕಾದಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಹತ್ಯೆ ಮಾಡಿ ಆಕೆಯ ವಿಮೆ ಹಣ ಪಡೆದು ಜೀವಂತ ವ್ಯಕ್ತಿಯ ಗಾತ್ರದ ಸೆಕ್ಸ್ ಆಟಿಕೆ ಖರೀದಿಸಿದ್ದ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಈ ಘಟನೆ ಅಮೇರಿಕಾದಲ್ಲಿ ನಡೆದಿದೆ. ಕಾಲ್ಬಿ ಟ್ರಿಕಲ್ ಎಂಬ ವ್ಯಕ್ತಿ ತನ್ನ ಪತ್ನಿ ಕ್ರಿಸ್ಟನ್ ಟ್ರಿಕಲ್ ನ್ನು ಹತ್ಯೆ ಮಾಡಿದ್ದು, ಬಳಿಕ 911 ಗೆ ಕರೆ ಮಾಡಿ ಆಕೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದ.

ಪತ್ನಿಯ ಸಾವಿನಿಂದ ಲಭ್ಯವಾದ ವಿಮೆ ಹಣ ಬಳಸಿಕೊಂಡು ಕಾಲ್ಬಿ ಟ್ರಿಕಲ್ ಗೆ 2000 ಡಾಲರ್ ( 1,66,805 ರೂಪಾಯಿ) ಮೌಲ್ಯದ ವ್ಯಕ್ತಿ ಜೀವಂತ ವ್ಯಕ್ತಿಯ ಗಾತ್ರದಲ್ಲಿರುವ ಸೆಕ್ಸ್ ಆಟಿಕೆಯನ್ನು ಖರೀದಿಸಿದ್ದಾನೆ. ಹಣ ಪಡೆದ 2 ದಿನಗಳಲ್ಲಿ ಕಾಲ್ಬಿ ಟ್ರಿಕಲ್ ಸೆಕ್ಸ್ ಆಟಿಕೆ ಖರೀದಿಸಿದ್ದಾನೆ.

ಪತ್ನಿಯೊಂದಿಗೆ ಕಾಲ್ಬಿ ಟ್ರಿಕಲ್
'ಬೀಚ್‌ಗಳಲ್ಲಿ ಸೆಕ್ಸ್ ಮಾಡಬೇಡಿ'; ಪ್ರವಾಸಿಗರಿಗೆ ನೆದರ್ಲೆಂಡ್ ಆಕ್ಷೇಪ, ಏನಿದು ಸರ್ಕಾರದ ಹೊಸ 'ಪ್ರಾಜೆಕ್ಟ್ ಆರೆಂಜೋನ್' ಅಭಿಯಾನ

ಪೊಲೀಸ್ ಅಧಿಕಾರಿಗಳು ಈ ಘಟನೆಯಲ್ಲಿ ಮಹಿಳೆಯ ಸಾವಿನ ಹಿಂದೆ ಪತಿಯ ಕೈವಾಡವಿರುವ ಶಂಕೆ ವ್ಯಕ್ತಪಡಿಸಿದ್ದರು. ಅಧಿಕಾರಿಗಳ ಪ್ರಕಾರ ಟ್ರಿಕಲ್ ಸುಮಾರು 8 ತಿಂಗಳಲ್ಲಿ $120,000 ವಿಮಾ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದಾನೆ.

ಜೀವಂತ ವ್ಯಕ್ತಿಯ ಗಾತ್ರದ ಲೈಂಗಿಕ ಗೊಂಬೆಯನ್ನು ಖರೀದಿಸುವುದರ ಹೊರತಾಗಿ, ಟ್ರಿಕಲ್ ವೀಡಿಯೋ ಗೇಮ್‌ಗಳಿಗಾಗಿ ಸಾವಿರಾರು ಡಾಲರ್‌ಗಳನ್ನು ಖರ್ಚು ಮಾಡಿದ್ದು ಸಾಲಗಳನ್ನು ಮರು ಪಾವತಿಸಿದ್ದಾನೆ.

ಜುಲೈ 2021 ರಲ್ಲಿ ಕ್ರಿಸ್ಟನ್ ಟ್ರಿಕಲ್ ಮರಣದ ಸುಮಾರು 21 ತಿಂಗಳ ನಂತರ, ಟ್ರಿಕಲ್ ನ್ನು ಮೊದಲ ಹಂತದಲ್ಲಿ ಕೊಲೆ ಮತ್ತು ಕಾನೂನು ಜಾರಿಯಲ್ಲಿ ಮಧ್ಯಪ್ರವೇಶಿಸಿದ ಆರೋಪ ಹೊರಿಸಲಾಯಿತು. ಸೆಪ್ಟೆಂಬರ್ 2023 ರಲ್ಲಿ ಅವರ ವಿಚಾರಣೆಯ ಸಮಯದಲ್ಲಿ, ಪ್ರಾಸಿಕ್ಯೂಟರ್‌ಗಳು ಟ್ರಿಕಲ್ ಲೈಂಗಿಕ ಗೊಂಬೆ ಖರೀದಿಸಿದ್ದರ ಬಗ್ಗೆ ನ್ಯಾಯಾಧೀಶರಿಗೆ ತಿಳಿಸಿದರು. ಕ್ರಿಸ್ಟನ್ ಟ್ರಿಕಲ್ ಮರಣದ 4 ವರ್ಷಗಳ ನಂತರ, ಟ್ರಿಕಲ್ ಕೊಲೆಗೆ ತಪ್ಪಿತಸ್ಥರೆಂದು ತೀರ್ಪು ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com