ಬಾಂಗ್ಲಾ ಹಿಂಸಾಚಾರ: ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಮನೆಯೆಂದು ಸುಟ್ಟ ಇಸ್ಲಾಮಿಸ್ಟ್‌ಗಳು ಕಕ್ಕಾಬಿಕ್ಕಿ, ವಿಡಿಯೋ ವೈರಲ್!

ಬಾಂಗ್ಲಾದೇಶ ಪ್ರತಿಭಟನಾಕಾರರ ದಂಗೆಯಿಂದಾಗಿ ಸರ್ಕಾರ ಪತನವಾಗಿದ್ದು, ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಬೇಕಾಯಿತು. ಇದಾದ ನಂತರ ದೇಶಾದ್ಯಂತ ಬೆಂಕಿ ಹಚ್ಚುವುದು ಮತ್ತು ವಿಧ್ವಂಸಕ ಕೃತ್ಯಗಳೂ ನಡೆದವು.
ಬಾಂಗ್ಲಾ ಹಿಂಸಾಚಾರ: ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಮನೆಯೆಂದು ಸುಟ್ಟ ಇಸ್ಲಾಮಿಸ್ಟ್‌ಗಳು ಕಕ್ಕಾಬಿಕ್ಕಿ, ವಿಡಿಯೋ ವೈರಲ್!
Updated on

ಬಾಂಗ್ಲಾದೇಶ ಪ್ರತಿಭಟನಾಕಾರರ ದಂಗೆಯಿಂದಾಗಿ ಸರ್ಕಾರ ಪತನವಾಗಿದ್ದು, ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಬೇಕಾಯಿತು. ಇದಾದ ನಂತರ ದೇಶಾದ್ಯಂತ ಬೆಂಕಿ ಹಚ್ಚುವುದು ಮತ್ತು ವಿಧ್ವಂಸಕ ಕೃತ್ಯಗಳೂ ನಡೆದವು. ಅನೇಕ ನಗರಗಳಲ್ಲಿ ಲೂಟಿಯ ಘಟನೆಗಳೂ ಬೆಳಕಿಗೆ ಬಂದಿವೆ. ಢಾಕಾದಲ್ಲಿ ಜನರ ಗುಂಪೊಂದು ಬೀದಿಗಿಳಿದು ಪ್ರಧಾನಿ ನಿವಾಸವನ್ನು ಧ್ವಂಸಗೊಳಿಸಿದ್ದು ಅದರ ಫೋಟೋಗಳು ಮತ್ತು ವೀಡಿಯೊಗಳು ಸಹ ವೈರಲ್ ಆಗಿವೆ.

ಅದೇ ಸಮಯದಲ್ಲಿ, ಅನೇಕ ವಿಷಯಗಳ ಬಗ್ಗೆ ವದಂತಿಗಳೂ ಹರಡಿದವು. ಬಾಂಗ್ಲಾದೇಶದ ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಯಾರೋ ಬರೆದಿದ್ದು ಕ್ರಿಕೆಟಿಗನ ಮನೆಯನ್ನು ದರೋಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಸತ್ಯವು ಬೇರೆಯೇ ಆಗಿದೆ.

ಬಾಂಗ್ಲಾದೇಶದಲ್ಲಿ ಪ್ರತಿಭಟನಾಕಾರರು ಕ್ರಿಕೆಟಿಗನ ಮನೆಗೆ ದಾಳಿ ಮಾಡಿ ಬೆಂಕಿ ಹಚ್ಚಿದ್ದು ನಿಜ, ಆದರೆ ಈ ಮನೆ ಲಿಟನ್ ದಾಸ್ ಅವರದ್ದಲ್ಲ. ಈ ಮನೆ ಪ್ರಸ್ತುತ ಶೇಖ್ ಹಸೀನಾ ಅವರ ಪಕ್ಷದ ಅವಾಮಿ ಲೀಗ್‌ನ ಸಂಸದರಾಗಿರುವ ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ಮಶ್ರಫೆ ಮೊರ್ತಾಜಾಗೆ ಸೇರಿದೆ ಎಂದು ಹೇಳಲಾಗಿದೆ. ಬಾಂಗ್ಲಾದೇಶದ ಯುವಕರಲ್ಲಿ ಮುರ್ತಾಜಾ ಏಕೆ ತಮ್ಮೊಂದಿಗೆ ನಿಲ್ಲುತ್ತಿಲ್ಲ ಎಂಬ ಅಸಮಾಧಾನವಿತ್ತು. ಹೀಗಾಗಿ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಅದೇ ಸಮಯದಲ್ಲಿ, ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಸರ್ಕಾರ ಪತನದ ನಂತರ, ಪ್ರತಿಭಟನಾಕಾರರು ಜೆಸ್ಸೋರ್‌ನಲ್ಲಿ ಹೋಟೆಲ್‌ಗೆ ಬೆಂಕಿ ಹಚ್ಚಿದರು. ಅದರಲ್ಲಿ ಕನಿಷ್ಠ 8 ಮಂದಿ ಸುಟ್ಟು ಕರಕಲಾಗಿದ್ದು 84 ಜನರು ಗಾಯಗೊಂಡಿದ್ದಾರೆ ಎಂಬ ಸುದ್ದಿಯೂ ಬಂದಿತು. ಜೆಸ್ಸೋರ್ ಜಿಲ್ಲೆಯ ಅವಾಮಿ ಲೀಗ್‌ನ ಪ್ರಧಾನ ಕಾರ್ಯದರ್ಶಿ ಶಾಹೀನ್ ಚಕ್ಲದಾರ್ ಹೋಟೆಲ್ ಮಾಲೀಕರಾಗಿದ್ದರು.

ಬಾಂಗ್ಲಾ ಹಿಂಸಾಚಾರ: ಹಿಂದೂ ಕ್ರಿಕೆಟಿಗ ಲಿಟನ್ ದಾಸ್ ಮನೆಯೆಂದು ಸುಟ್ಟ ಇಸ್ಲಾಮಿಸ್ಟ್‌ಗಳು ಕಕ್ಕಾಬಿಕ್ಕಿ, ವಿಡಿಯೋ ವೈರಲ್!
Bangladesh Crisis: ಅವಾಮಿ ಲೀಗ್ ನಾಯಕರ ಮನೆ, ಕಚೇರಿಗೆ ಬೆಂಕಿ; ಶೇಖ್ ಹಸೀನಾ ಕರೆತಂದಿದ್ದ ಸೇನಾ ವಿಮಾನ ವಾಪಸ್!

ಸ್ಥಳೀಯ ಮಾಧ್ಯಮಗಳೂ ಈ ಸುದ್ದಿಯನ್ನು ಅಲ್ಲಗಳೆದಿವೆ. ಬಾಂಗ್ಲಾದೇಶದ ಡೈಲಿ ನ್ಯೂಸ್‌ಪೇಪರ್ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಲಿಟನ್ ದಾಸ್‌ಗೆ ಸಂಬಂಧಿಸಿದ ಸುದ್ದಿಗಳನ್ನು ವದಂತಿ ಎಂದು ಬಣ್ಣಿಸಿದೆ. ಶೇಖ್ ಹಸೀನಾ ಅವರು ದೇಶವನ್ನು ತೊರೆದ ನಂತರ, ಸೇನಾ ಮುಖ್ಯಸ್ಥ ಜನರಲ್ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ ಮತ್ತು ಶೀಘ್ರದಲ್ಲೇ ಮಧ್ಯಂತರ ಸರ್ಕಾರವನ್ನು ರಚಿಸಲಾಗುವುದು ಎಂದು ಅವರು ಹೇಳಿದರು. ಶಾಂತಿ ಕಾಪಾಡುವಂತೆ ಜನತೆಗೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com