Bangladesh: ನೊಬೆಲ್ ಪುರಸ್ಕೃತ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ: ಯಾರು ಈ ಯೂನಸ್?

ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ ನಂತರ ಬಾಂಗ್ಲಾದೇಶದ ಪ್ರತಿಭಟನೆಯ ಪ್ರಮುಖ ಸಂಘಟಕರು ಮಧ್ಯಂತರ ಸರ್ಕಾರವನ್ನು ಚುಕ್ಕಾಣಿ ಹಿಡಿಯುವಂತೆ 84 ವರ್ಷದ ಆರ್ಥಿಕ ತಜ್ಞರನ್ನು ಒತ್ತಾಯಿಸಿದ ನಂತರ ಈ ಬೆಳವಣಿಗೆಗಳು ನಡೆದಿವೆ.
Muhammad Yunus
ಮೊಹಮ್ಮದ್ ಯೂನಸ್online desk
Updated on

ಢಾಕಾ: ಮೈಕ್ರೀಫೈನಾನ್ಸ್ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಲಿದೆ.

ಬಾಂಗ್ಲಾದಲ್ಲಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆಗಳಾಗಿ, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶದಿಂದ ಪಲಾಯನ ಮಾಡಿದ್ದಾರೆ. ಸದ್ಯಕ್ಕೆ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.

"ದೇಶದ ಮಧ್ಯಂತರ ಸರ್ಕಾರ ಮುನ್ನಡೆಸುವಂತೆ ಪ್ರತಿಭಟನಾ ನಿರತರು ಒತ್ತಾಯಿಸಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ವಿಶ್ವಾಸ ನನಗೆ ಒಂದು ರೀತಿಯ ಗೌರವವಾಗಿದೆ" ಎಂದು ಮೊಹಮ್ಮದ್ ಯೂನಸ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

"ಬಾಂಗ್ಲಾದೇಶದಲ್ಲಿ, ನನ್ನ ದೇಶಕ್ಕಾಗಿ ಮತ್ತು ನನ್ನ ಜನರಿಗಾಗಿ, ನಾನು ಈ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ" ಎಂದು ಅವರು ಹೇಳಿದರು, "ಮುಕ್ತ ಚುನಾವಣೆ" ನಡೆಸಲು ಸಹ ಇದೇ ವೇಳೆ ಅವರು ಕರೆ ನೀಡಿದ್ದಾರೆ.

ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಮಂಗಳವಾರ ಸಂಸತ್ತನ್ನು ವಿಸರ್ಜಿಸಿದ ನಂತರ ಬಾಂಗ್ಲಾದೇಶದ ಪ್ರತಿಭಟನೆಯ ಪ್ರಮುಖ ಸಂಘಟಕರು ಮಧ್ಯಂತರ ಸರ್ಕಾರದ ಚುಕ್ಕಾಣಿ ಹಿಡಿಯುವಂತೆ 84 ವರ್ಷದ ಆರ್ಥಿಕ ತಜ್ಞರನ್ನು ಕೇಳಿಕೊಂಡ ನಂತರ ಈ ಬೆಳವಣಿಗೆಗಳು ನಡೆದಿವೆ.

"ನಾವು ಮಧ್ಯಂತರ ಸರ್ಕಾರವನ್ನು ರಚಿಸಲು ನಿರ್ಧರಿಸಿದ್ದೇವೆ. ಇದರಲ್ಲಿ ಅಂತರಾಷ್ಟ್ರೀಯವಾಗಿ ಹೆಸರಾಂತ ನೊಬೆಲ್ ಪ್ರಶಸ್ತಿ ವಿಜೇತ ಡಾ ಮುಹಮ್ಮದ್ ಯೂನಸ್ ಮುಖ್ಯ ಸಲಹೆಗಾರರಾಗಿದ್ದಾರೆ" ಎಂದು ಎಸ್‌ಎಡಿ ಮುಖ್ಯ ನಾಯಕ ನಹಿದ್ ಇಸ್ಲಾಂ ಹೇಳಿದರು.

ಯೂನಸ್ ಅವರು ಗೌರವಾನ್ವಿತ ಅರ್ಥಶಾಸ್ತ್ರಜ್ಞರಾಗಿದ್ದಾರೆ ಮತ್ತು ಅವರು ಕಿರುಬಂಡವಾಳ ಬ್ಯಾಂಕ್‌ನೊಂದಿಗೆ ಲಕ್ಷಾಂತರ ಜನರನ್ನು ಬಡತನದಿಂದ ಹೊರತಂದ ಕೀರ್ತಿಗೆ ಪಾತ್ರರಾಗಿದ್ದಾರೆ, ಆದರೂ ಹಸೀನಾ ಅವರು ಯೂನಸ್ ಅವರನ್ನು ದ್ವೇಷಿಸಿದರು. ಯೂನಸ್ ಬಡವರಿಂದ "ರಕ್ತ ಹೀರುತ್ತಿದ್ದಾರೆ" ಎಂದು ಹಸೀನಾ ಆರೋಪಿಸಿದ್ದಾಗಿ ನಹಿದ್ ಇಸ್ಲಾಂ ತಿಳಿಸಿದ್ದಾರೆ.

"ಬಡವರ ಬ್ಯಾಂಕರ್" ಎಂದು ಕರೆಯಲ್ಪಡುವ ಯೂನಸ್ ಅವರಿಗೆ 2006 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು, ಅವರು ಗ್ರಾಮೀಣ ಮಹಿಳೆಯರಿಗೆ ಸಣ್ಣ ನಗದು ಮೊತ್ತವನ್ನು ಸಾಲ ನೀಡುವ ಮೂಲಕ ಕೃಷಿ ಉಪಕರಣಗಳು ಅಥವಾ ವ್ಯಾಪಾರಗಳಲ್ಲಿ ಹೂಡಿಕೆ ಮಾಡಲು ಮತ್ತು ಅವರ ಗಳಿಕೆಯನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟರು.

Muhammad Yunus
ಬಾಂಗ್ಲಾ ಬಿಕ್ಕಟ್ಟು: ನೊಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನಸ್ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ

ಮೊಹಮ್ಮದ್ ಯೂನಸ್ ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್ ಪರಿಕಲ್ಪನೆ, ಬಾಂಗ್ಲಾದೇಶದಲ್ಲಿ ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡಿದ್ದಕ್ಕಾಗಿ ಶ್ಲಾಘಿಸಲ್ಪಟ್ಟಿತು ಮತ್ತು ಅದನ್ನು ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳು ತಾವೂ ಜಾರಿಗೆ ತಂದಿವೆ. ಯೂನಸ್‌ ವಿರುದ್ಧ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಮತ್ತು ಇಸ್ಲಾಮಿಕ್ ಏಜೆನ್ಸಿಯು ಆರಂಭಿಸಿದ ಸ್ಮೀಯರ್ ಅಭಿಯಾನ ಮೊಹಮ್ಮದ್ ಯೂನಸ್ ಸಲಿಂಗಕಾಮವನ್ನು ಉತ್ತೇಜಿಸುತ್ತಾರೆ ಎಂಬ ಆರೋಪ ಮಾಡಿದೆ.

ಸರ್ಕಾರ ಅವರನ್ನು 2011 ರಲ್ಲಿ ಗ್ರಾಮೀಣ ಬ್ಯಾಂಕ್‌ನಿಂದ ಹೊರಹಾಕಿತು. ಈ ನಿರ್ಧಾರದ ವಿರುದ್ಧ ಯೂನಸ್ ಹೋರಾಡಿದರು ಆದರೆ ಬಾಂಗ್ಲಾದೇಶದ ಉನ್ನತ ನ್ಯಾಯಾಲಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com