ವಾಷಿಂಗ್ಟನ್: ಯೂಟ್ಯೂಬ್‌ನ ಮಾಜಿ ಸಿಇಒ ಸುಸಾನ್ ವೊಜ್ಸಿಕಿ ಶ್ವಾಸಕೋಶದ ಕ್ಯಾನ್ಸರ್ ನಿಂದ ನಿಧನಾಗಿರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಕಳೆದ 2 ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದರು.
ಇನ್ನೂ ಸುಸಾನ್ ವೊಜ್ಸಿಕಿ ನಿಧನಕ್ಕೆ ಗೂಗಲ್ ಸಿಇಒ ಸುಂದರ್ ಪಿಚೈ ಸಂತಾಪ ಸೂಚಿಸಿದ್ದಾರೆ. ಆಕೆಯಸಾವಿನಿಂದ ನಾನು ದುಃಖಿತನಾಗಿದ್ದೇನೆ. ವೊಜ್ಸಿಕಿ ಗೂಗಲ್ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು ಮತ್ತು ಇಂಟರ್ನೆಟ್ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಅವರು 2014 ರಿಂದ 2023 ರವರೆಗೆ ಯೂಟ್ಯೂಬ್ CEO ಆಗಿದ್ದರು. ವೊಜ್ಸಿಕಿಯು ಎಲ್ಲರಂತೆ ಗೂಗಲ್‌ನ ಇತಿಹಾಸಕ್ಕೆ ಮುಖ್ಯ ಆದರೆ ಆಕೆಯಿಲ್ಲದೆ ಜಗತ್ತನ್ನು ಕಲ್ಪಿಸಿಕೊಳ್ಳುವುದು ಕಷ್ಟ, ಆಕೆ ನನ್ನ ಆತ್ಮೀಯ ಸ್ನೇಹಿತೆ, ಇಡೀ ಪ್ರಪಂಚ ಹಾಗೂ ನನ್ನ ಮೇಲೆ ಪ್ರಭಾವ ಬೀರಿದ ಸ್ನೇಹಿತೆ ಎಂದು ಎಂದು ಪಿಚ್ಚೈ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಸುಸಾನ್ ವೊಜ್ಸಿಕಿ ನಿಧನದ ಸುದ್ದಿಯನ್ನು ನಾನು ಹಂಚಿಕೊಳ್ಳಲು ನನಗೆ ದುಃಖವಾಗುತ್ತಿದೆ. 26 ವರ್ಷಗಳ ನನ್ನ ಪ್ರೀತಿಯ ಹೆಂಡತಿ ಮತ್ತು ನಮ್ಮ ಐದು ಮಕ್ಕಳ ತಾಯಿಯು ಎರಡು ವರ್ಷಗಳ ಕಾಲ ಶ್ವಾಸಕೋಶದ ಕ್ಯಾನ್ಸರ ನೊಂದಿಗೆ ಬದುಕಿದ ನಂತರ ಇಂದು ನಮ್ಮನ್ನು ಅಗಲಿದ್ದಾರೆ. ಸುಸಾನ್ ಕೇವಲ ನನ್ನ ಅತ್ಯುತ್ತಮ ಪತ್ನಿಯಾಗಿರಲಿಲ್ಲ, ನನ್ನ ಜೀವನದಲ್ಲಿ ಸ್ನೇಹಿತೆ, ಪಾರ್ಟನರ್ ಆಗಿದ್ದರು, ಆಕೆಯದ್ದು ಅದ್ಭುತ ಮನಸ್ಸು, ಪ್ರೀತಿಯ ತಾಯಿ ಮತ್ತು ಅನೇಕರಿಗೆ ಆತ್ಮೀಯ ಸ್ನೇಹಿತೆ. ನಾವು ಅವರೊದಿಗೆ ಕಳೆದ ಸಮಯಕ್ಕಾಗಿ ಕೃತಜ್ಞರಾಗಿರುತ್ತೇವೆ ಎಂದು ಸುಸಾನ್ ವೊಜ್ಸಿಕಿ ಪತಿ ಡೆನ್ನಿಸ್ ಟ್ರೋಪರ್ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
Advertisement