ಗಾಜಾ ಪಟ್ಟಿ: ಗಾಜಾದ ಸಿವಿಲ್ ಡಿಫೆನ್ಸ್ ಏಜೆನ್ಸಿ ಶನಿವಾರದಂದು ಗಾಜಾ ನಗರದ ಶಾಲೆಯೊಂದರ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಸಾವಿನ ಸಂಖ್ಯೆ 90 ರಿಂದ 100 ಕ್ಕೆ ಏರಿಕೆಯಾಗಿದೆ.
ಸಾವಿನ ಸಂಖ್ಯೆ ಈಗ 90 ರಿಂದ 100 ರ ನಡುವೆ ಇದೆ ಮತ್ತು ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಮೂರು ಇಸ್ರೇಲಿ ರಾಕೆಟ್‌ಗಳು ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯಾದವರಿಗೆ ವಸತಿ ಹೊಂದಿದ್ದ ಶಾಲೆಗೆ ಅಪ್ಪಳಿಸಿದವು ಎಂದು ಏಜೆನ್ಸಿ ವಕ್ತಾರ ಮಹ್ಮದ್ ಬಾಸ್ಸಲ್ ಎಎಫ್ ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ದಾಳಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಹುತಾತ್ಮರಾಗಿದ್ದಾರೆ ಎಂದು ಗಾಜಾದ ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.
ದರಾಜ್ ನೆರೆಹೊರೆಯ ಅಲ್-ತಬಿನ್ ಶಾಲೆಯಲ್ಲಿ ಹಮಾಸ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ನ್ನು ಹೊಡೆದಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ನಿಖರ ಯುದ್ಧಸಾಮಗ್ರಿಗಳ ಬಳಕೆ, ವೈಮಾನಿಕ ಕಣ್ಗಾವಲು ಮತ್ತು ಗುಪ್ತಚರ ಮಾಹಿತಿ ಸೇರಿದಂತೆ ನಾಗರಿಕರಿಗೆ ಹಾನಿಯಾಗುವ ಅಪಾಯವನ್ನು ತಗ್ಗಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿಕೆಯೊಂದು ತಿಳಿಸಿದೆ.
ಇಸ್ಲಾಮಿಕ್ ಜಿಹಾದ್ ಪ್ಯಾಲೇಸ್ಟಿನಿಯನ್ ಮಿಲಿಟರಿ ಗುಂಪು ಮುಂಜಾನೆ ಪ್ರಾರ್ಥನೆಯ ಸಮಯದಲ್ಲಿ ದಾಳಿ ನಡೆದಿದೆ ಎಂದು ಹೇಳಿದೆ.
ಶಾಲೆಯಲ್ಲಿ ಸುಮಾರು 250 ಮಹಿಳೆಯರು ಮತ್ತು ಮಕ್ಕಳನ್ನು ಇದ್ದು, ಅವರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳು ಮೃತಪಟ್ಟಿದ್ದಾರೆ ಎಂದು ಗಾಜಾ ಸರ್ಕಾರಿ ಮಾಧ್ಯಮ ಮೂಲಗಳು ತಿಳಿಸಿವೆ.
Advertisement