ಡೊನಾಲ್ಡ್ ಟ್ರಂಪ್- ಎಲೊನ್ ಮಸ್ಕ್ ಲೈವ್ ಚಾಟ್ ವೇಳೆ ತಾಂತ್ರಿಕ ದೋಷ: ಹತ್ಯೆ ಯತ್ನ, ಗಡೀಪಾರು ಬಗ್ಗೆ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ

ಎಲೊನ್ ಮಸ್ಕ್ ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಕಟು ಟೀಕಾಕಾರರಾಗಿದ್ದರು. ತಮ್ಮ ಮೇಲೆ ನಡೆದ ಹತ್ಯೆ ಯತ್ನ ರಾಷ್ಟ್ರದ ಭದ್ರತೆಯ ವಿಚಾರದಲ್ಲಿ ಪ್ರಶ್ನೆ ಮಾಡುವಂತೆ ಮಾಡಿದೆ ಎಂದು ಹೇಳಿದರು.
ಡೊನಾಲ್ಡ್ ಟ್ರಂಪ್- ಎಲೊನ್ ಮಸ್ಕ್ ಲೈವ್ ಚಾಟ್ ವೇಳೆ ತಾಂತ್ರಿಕ ದೋಷ: ಹತ್ಯೆ ಯತ್ನ, ಗಡೀಪಾರು ಬಗ್ಗೆ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ
Updated on

ವಾಷಿಂಗ್ಟನ್: ಇತ್ತೀಚೆಗೆ ಪ್ರಚಾರ ವೇಳೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆ ಯತ್ನ ನಡೆದಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದನ್ನು ಎಕ್ಸ್ ಖಾತೆಯ ಮಾಲೀಕರಾಗಿರುವ ಎಲೊನ್ ಮಸ್ಕ್ ಜೊತೆ ಸಂದರ್ಶನ ವೇಳೆ ಟ್ರಂಪ್ ಅವರು ಪ್ರಸ್ತಾಪಿಸಿದ್ದಾರೆ.

ಆದರೆ ಇವರಿಬ್ಬರ ಸಂಭಾಷಣೆಯ ನೇರ ಪ್ರಸಾರದ ವೇಳೆ ತಾಂತ್ರಿಕ ದೋಷ ಕಂಡುಬಂದ ಪ್ರಸಂಗ ನಡೆಯಿತು. ಅಂದು ನಾನು ನನ್ನ ತಲೆಯನ್ನು ತಿರುಗಿಸದಿದ್ದಿದ್ದರೆ ಇಂದು ನಿಮ್ಮ ಮುಂದೆ ಕುಳಿತು ಮಾತನಾಡಲು ನಾನು ಇರುತ್ತಿರಲಿಲ್ಲ ಎಂದು ಡೊನಾಲ್ಡ್ ಟ್ರಂಪ್ ಎಲೊನ್ ಮಸ್ಕ್ ಗೆ ಹೇಳಿದ್ದಾರೆ.

ಎಲೊನ್ ಮಸ್ಕ್ ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಕಟು ಟೀಕಾಕಾರರಾಗಿದ್ದರು. ತಮ್ಮ ಮೇಲೆ ನಡೆದ ಹತ್ಯೆ ಯತ್ನ ರಾಷ್ಟ್ರದ ಭದ್ರತೆಯ ವಿಚಾರದಲ್ಲಿ ಪ್ರಶ್ನೆ ಮಾಡುವಂತೆ ಮಾಡಿದೆ ಎಂದು ಹೇಳಿದರು.

ರಾಷ್ಟ್ರದ ಭದ್ರತೆ ವಿಚಾರ ಬಂದಾಗ ಇಲ್ಲಿ ಕೆಲವರು ನಿಜವಾಗಿಯೂ ದೇಶದ್ರೋಹಿಗಳಿದ್ದಾರೆ. ಅಧ್ಯಕ್ಷರು ಕಠಿಣ ನಿಲುವು ತಾಳದಿದ್ದರೆ ಅವರಿಗೆ ಇಷ್ಟಬಂದಿದ್ದನ್ನು ಮಾಡುತ್ತಾರೆ ಎಂದರು.

ಟ್ರಂಪ್ ಮತ್ತು ಮಸ್ಕ್ ನಡುವಿನ ಈ ಅಪರೂಪದ ಸಂವಾದವು ಸ್ನೇಹಪರವಾಗಿತ್ತು. ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಲು ಅವರು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಸಾರಿ ಹೇಳುತ್ತಿತ್ತು. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತಿನಲ್ಲಿ ಬಹುತೇಕ ಇತ್ತೀಚೆಗೆ ತಮ್ಮ ಮೇಲೆ ನಡೆದ ಹತ್ಯೆ ಯತ್ನ ಮತ್ತು ಅಕ್ರಮ ವಲಸೆಯ ಕುರಿತು ಆಗಿತ್ತು.

ಡೊನಾಲ್ಡ್ ಟ್ರಂಪ್- ಎಲೊನ್ ಮಸ್ಕ್ ಲೈವ್ ಚಾಟ್ ವೇಳೆ ತಾಂತ್ರಿಕ ದೋಷ: ಹತ್ಯೆ ಯತ್ನ, ಗಡೀಪಾರು ಬಗ್ಗೆ ಪ್ರಸ್ತಾಪಿಸಿದ ಮಾಜಿ ಅಧ್ಯಕ್ಷ
ಗುಂಡೇಟಿನಿಂದ ಮೇಲ್ಬಾಗದ ಕಿವಿ ಗಾಯಗೊಂಡಿದೆ, ನಮ್ಮ ದೇಶದಲ್ಲಿ ಇಂತಹ ಕೃತ್ಯ ನಡೆದಿದ್ದನ್ನು ನಂಬಲಾಗುತ್ತಿಲ್ಲ: ಡೊನಾಲ್ಡ್ ಟ್ರಂಪ್

ಜನವರಿ 6, 2021 ರಂದು ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಪ್ರಸಾರವಾದ ನಂತರ ತಮ್ಮನ್ನು ಸಾಮಾಜಿಕ ಮಾಧ್ಯಮಗಳಿಂದ ಬಹಿಷ್ಕಾರ ಹಾಕಿದ ನಂತರ ಕೇವಲ 4 ವರ್ಷಗಳಲ್ಲಿ ಅಮೆರಿಕದ ರಾಜಕೀಯದ ವಾತಾವರಣ ಸಾಕಷ್ಟು ಬದಲಾಯಿತು ಎಂದು ಹೇಳಿದರು. ಇಂತಹ ತಪ್ಪು ಮಾಹಿತಿಯು ಎಲೊನ್ ಮಸ್ಕ್ ಈ ಹಿಂದೆ ಟ್ವಿಟ್ಟರ್ ನ ಮುಖ್ಯಸ್ಥರಾಗಿದ್ದ ಸಂದರ್ಭದಲ್ಲಿಯೇ ಪ್ರವರ್ಧಮಾನಕ್ಕೆ ಬಂದಿತು.

ತಾಂತ್ರಿಕ ಅಡಚಣೆ: ಈ ಇಬ್ಬರು ನಾಯಕರ ಸಂವಾದ ಪೂರ್ವ ನಿಯೋಜಿತದಂತೆ ಆರಂಭವಾಗಲಿಲ್ಲ. ನಿಗದಿತ ಪ್ರಾರಂಭದ ಸಮಯಕ್ಕಿಂತ 40 ನಿಮಿಷಗಳ ನಂತರ 8,78,000 ಕ್ಕೂ ಹೆಚ್ಚು ಬಳಕೆದಾರರು ಸಂಭಾಷಣೆಗೆ ಸಂಪರ್ಕ ಹೊಂದಿದಾಗಲೂ ಸಂದರ್ಶನವು ಇನ್ನೂ ಪ್ರಾರಂಭವಾಗಿರಲಿಲ್ಲ. ಅನೇಕ ಬಳಕೆದಾರಿಗೆ "ವಿವರಗಳು ಲಭ್ಯವಿಲ್ಲ" ಎಂಬ ಸಂದೇಶ ಬಂತು.

ಇದು ಲೈವ್ ಆಡಿಯೋ ಟೆಲಿಕಾಸ್ಟ್​​ ಆರಂಭವಾಗಿತ್ತು. ಹಲವರು ಇದು DDOS ದಾಳಿ ಎಂದು ಟೀಕಿಸಿದರು. ಆಗ ಟ್ರಂಪ್ ಬೆಂಬಲಿಗರು ಬಹಿರಂಗವಾಗಿಯೇ ತಮ್ಮ ತಳಮಳವನ್ನು ಹೊರಹಾಕಿದರು. ಸಂಭಾಷಣೆ ಪ್ರಾರಂಭವಾದ ನಂತರ, ಮಸ್ಕ್ ತಡವಾಗಿ ಆರಂಭವಾಗಿದ್ದಕ್ಕೆ ಕ್ಷಮೆಯಾಚಿಸಿದರು. ಕಂಪನಿಯ ವ್ಯವಸ್ಥೆಯನ್ನು ಮುಳುಗಿಸಿದ "ಬೃಹತ್ ದಾಳಿ" ಇದು ಆರೋಪಿಸಿದರು.

ಇದೇ ವರ್ಷ ನವೆಂಬರ್ 5 ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಡೆಮಾಕ್ರೆಟಿಕ್ ಪಕ್ಷದಿಂದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಟ್ರಂಪ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಅಮೆರಿಕದ ಕಾಂಗ್ರೆಸ್​ ಮೇಲೆ 2021ರ ಜನವರಿ 6ರಂದು ನಡೆದ ದಾಳಿಯ ನಂತರ ಹಿಂದಿನ ಟ್ವಿಟ್ಟರ್ ಮಾಲೀಕ ಎಲೊನ್ ಮಸ್ಕ್ ಟ್ರಂಪ್ ಖಾತೆಯನ್ನು ಅಮಾನತಿನಲ್ಲಿರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com