
ಚಿಕಾಗೋ: ಅಮೆರಿಕದ ರಾಜ್ಯ ಚಿಕಾಗೋದಲ್ಲಿ ಸ್ಥಳೀಯ ಕಾಲಮಾನ ಪ್ರಕಾರ ನಿನ್ನೆ ಬುಧವಾರ ಡೆಮಾಕ್ರಟಿಕ್ ನ್ಯಾಶನಲ್ ಕನ್ವೆನ್ಶನ್‌ನ ಮೂರನೇ ದಿನ, ಸಮಾವೇಶದಲ್ಲಿ ಹಿಂದೂ ಪ್ರಾರ್ಥನೆಗಳು ಓಂ ಶಾಂತಿ ಓಂ ಮೊಳಗಿದ್ದು ವಿಶೇಷವಾಗಿತ್ತು.
ಡೆಮಾಕ್ರಟಿಕ್ ನ್ಯಾಷನಲ್ ಕನ್ವೆನ್ಷನ್ (DNC) ಮೊನ್ನೆ ಸೋಮವಾರ ಚಿಕಾಗೋದಲ್ಲಿ ಪ್ರಾರಂಭವಾಯಿತು, ರಿಪಬ್ಲಿಕನ್ನರು ಮಿಲ್ವಾಕೀಯಲ್ಲಿ ತಮ್ಮ ಸಮಾವೇಶವನ್ನು ನಡೆಸಿದ ಒಂದು ತಿಂಗಳ ನಂತರ ಇದು ನಡೆಯುತ್ತಿದ್ದು ಇದರ ಧ್ಯೇಯವಾಕ್ಯ "ಜನರಿಗಾಗಿ, ನಮ್ಮ ಭವಿಷ್ಯಕ್ಕಾಗಿ" ಎಂಬುದಾಗಿದೆ.
ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಮಾಜಿ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ, ಅಮೇರಿಕನ್ ಹೋಸ್ಟ್ ಮತ್ತು ಟೆಲಿವಿಷನ್ ನಿರ್ಮಾಪಕ ಓಪ್ರಾ ವಿನ್ಫ್ರೇ ಮತ್ತು ಕಮಲಾ ಹ್ಯಾರಿಸ್ ಅವರ ಸಹವರ್ತಿ ಟಿಮ್ ವಾಲ್ಜ್ ಚಿಕಾಗೋದಲ್ಲಿ ನಡೆದ ಡೆಮಾಕ್ರಟಿಕ್ ಕನ್ವೆನ್ಷನ್‌ನ ಮೂರನೇ ದಿನದ ಪ್ರಮುಖ ಭಾಷಣಕಾರರಾಗಿದ್ದರು. ಯುಎಸ್ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮುಂಬರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ ಅವರಿಗೆ ಮತ ಚಲಾಯಿಸುವಂತೆ ಅಮೆರಿಕನ್ನರನ್ನು ಒತ್ತಾಯಿಸಿದರು.
ಅಮೆರಿಕಾದ 42 ನೇ ಅಧ್ಯಕ್ಷರಾಗಿದ್ದ ಕ್ಲಿಂಟನ್ ಅವರು ಈಗ ಅಮೆರಿಕವನ್ನು "ಹೆಚ್ಚು ಅಂತರ್ಗತ, ಹೆಚ್ಚು ಭವಿಷ್ಯ ಕೇಂದ್ರಿತ ಎಂದು ಬಣ್ಣಿಸಿದ್ದಾರೆ.
ನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ರಾಷ್ಟ್ರದ ವಿಷಯಕ್ಕೆ ಬಂದಾಗ, ನಾವು ಒಗ್ಗಟ್ಟಾಗಿರಬೇಕು ಮತ್ತು ಅದು ಎಲ್ಲರಿಗೂ ನ್ಯಾಯದ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂದು ಭಾರತೀಯ-ಅಮೆರಿಕನ್ ಅರ್ಚಕ ರಾಕೇಶ್ ಭಟ್ ಅವರು ಹೇಳಿದರು.
ನಾವು ಒಗ್ಗಟ್ಟಿನಿಂದ ಇರಬೇಕು. ನಮ್ಮ ಮನಸ್ಸು ಒಟ್ಟಾಗಿ ಹೋಗಬೇಕು. ನಮ್ಮ ಹೃದಯಗಳು ಸಮಾಜದ ಒಳಿತಿಗೆ ಒಂದಾಗಿ ಮಿಡಿಯಲಿ. ಇದು ನಮ್ಮನ್ನು ಇನ್ನಷ್ಟು ಶಕ್ತಿಯುತರನ್ನಾಗಿ ಮಾಡುತ್ತದೆ ಎಂದರು.
ಮೇರಿಲ್ಯಾಂಡ್‌ನ ಶ್ರೀ ಶಿವವಿಷ್ಣು ದೇವಸ್ಥಾನದ ಅರ್ಚಕ ರಾಕೇಶ್ ಭಟ್ ಬೆಂಗಳೂರಿನವರು. ಅವರು ಮಾಧ್ವ ಪುರೋಹಿತರಾಗಿದ್ದು, ಋಗ್ವೇದ ಮತ್ತು ತಂತ್ರಸಾರ (ಮಾಧ್ವ) ಆಗಮದಲ್ಲಿ ತಮ್ಮ ಗುರುಗಳಾದ ಉಡುಪಿ ಅಷ್ಟಮಠದ ಪೇಜಾವರ ಸ್ವಾಮೀಜಿಯವರಲ್ಲಿ ತರಬೇತಿ ಪಡೆದಿದ್ದಾರೆ.
Advertisement