Nepal bus tragedy: ಭಾರತ ಮೂಲದ ಬಸ್ ನೇಪಾಳ ನದಿಗೆ ಬಿದ್ದು 14 ಮಂದಿ ಸಾವು
ಕಠ್ಮಂಡು: ಮಧ್ಯ ನೇಪಾಳದ ಮರ್ಸ್ಯಾಂಗ್ಡಿ ನದಿಗೆ ಶುಕ್ರವಾರ ಭಾರತೀಯ-ನೋಂದಾಯಿತ ಪ್ರಯಾಣಿಕ ಬಸ್ ಉರುಳಿ ಬಿದ್ದಿದೆ. ಈ ದುರ್ಘಟನೆಯಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ತನಾಹುನ್ ಜಿಲ್ಲೆಯ ಐನಾ ಪಹಾರಾದಲ್ಲಿ ಹೆದ್ದಾರಿ ಮೂಲಕ ರೆಸಾರ್ಟ್ ಪಟ್ಟಣವಾದ ಪೊಖರಾದಿಂದ ರಾಜಧಾನಿ ಕಠ್ಮಂಡು ಕಡೆಗೆ ಹೋಗುತ್ತಿತ್ತು.
UP 53 FT 7623 ನಂಬರ್ ಪ್ಲೇಟ್ ಹೊಂದಿರುವ ಬಸ್‌ನಿಂದ ಕನಿಷ್ಠ 29 ಪ್ರಯಾಣಿಕರನ್ನು ರಕ್ಷಿಸಲಾಗಿದೆ.
ಬಸ್ ಪೋಖರಾದಿಂದ ಕಠ್ಮಂಡು ಮೂಲಕ ಗೋರಖ್‌ಪುರಕ್ಕೆ ತೆರಳುತ್ತಿತ್ತು. ಅಪಘಾತದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಇದುವರೆಗೆ 29 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಕಛೇರಿ ತನಾಹುವಿನ ಮಾಹಿತಿ ಅಧಿಕಾರಿ ಮೋಹನ್ ಬಹದ್ದೂರ್ ಖಾನ್ ತಿಳಿಸಿದ್ದಾರೆ.
ಸಶಸ್ತ್ರ ಪೊಲೀಸ್ ಪಡೆ ನೇಪಾಳದ ವಿಪತ್ತು ನಿರ್ವಹಣಾ ತರಬೇತಿ ಶಾಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಮಾಧವ್ ಪೌಡೆಲ್ ನೇತೃತ್ವದ 45 ಸಶಸ್ತ್ರ ಪೊಲೀಸ್ ಪಡೆಗಳ ತಂಡವು ಈಗಾಗಲೇ ಅಪಘಾತ ಸ್ಥಳಕ್ಕೆ ತಲುಪಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಭಾನು, ತನಾಹುನ್, ನಂ 23 ಬೆಟಾಲಿಯನ್‌ನ ಸುಮಾರು 35 ಎಪಿಎಫ್ ಸಿಬ್ಬಂದಿ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಡಿಎಸ್ಪಿ ದೀಪಕ್ ಕುಮಾರ್ ರಾಯಾ, ತನಾಹುನ್ ಜಿಲ್ಲಾ ಪೊಲೀಸ್ ಕಛೇರಿ, ಅವರ ಪ್ರಕಾರ, ಶುಕ್ರವಾರ ಬೆಳಿಗ್ಗೆ 11.30 ರ ಸುಮಾರಿಗೆ ಈ ದುರಂತ ಸಂಭವಿಸಿದೆ.
ಕಳೆದ ತಿಂಗಳು 65 ಮಂದಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಬಸ್ ನೇಪಾಳದ ತ್ರಿಶುಲಿಯಲ್ಲಿ ನದಿಯಲ್ಲಿ ಕೊಚ್ಚಿ ಹೋಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ