FBI ಮುಖ್ಯಸ್ಥರಾಗಿ ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ನೇಮಕ: Donald Trump

ಈಗ ಅಮೆರಿಕಾದ ಜನರನ್ನು ರಕ್ಷಿಸುವುದು ನಮಗೆ ಮುಖ್ಯವಾಗಿದೆ ಎಂದು ಟ್ರಂಪ್ ಅವರ ಮಾಲೀಕತ್ವದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್‌ನಲ್ಲಿ ಘೋಷಿಸಿದ್ದಾರೆ.
Kash Patel
ಕಾಶ್ ಪಟೇಲ್
Updated on

ನ್ಯೂಯಾರ್ಕ್: ಅಮೆರಿಕಾದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಪ್ತ ಕಾಶ್ ಪಟೇಲ್ ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ನಿರ್ದೇಶಕರ ಪ್ರಬಲ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದಾರೆ.

ಕಶ್ಯಪ್ 'ಕಾಶ್' ಪಟೇಲ್ ಅವರು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ಮುಂದಿನ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ. ಕಾಶ್ ಒಬ್ಬ ಅದ್ಭುತ ವಕೀಲ, ತನಿಖಾಧಿಕಾರಿ ಮತ್ತು 'ಅಮೆರಿಕಾ ಫಸ್ಟ್' ಹೋರಾಟಗಾರ, ಭ್ರಷ್ಟಾಚಾರವನ್ನು ಬಹಿರಂಗಪಡಿಸಲು, ನ್ಯಾಯವನ್ನು ರಕ್ಷಿಸುವಲ್ಲಿ ಅವರು ವೃತ್ತಿಜೀವನ ಕಳೆದಿದ್ದಾರೆ.

ಈಗ ಅಮೆರಿಕಾದ ಜನರನ್ನು ರಕ್ಷಿಸುವುದು ನಮಗೆ ಮುಖ್ಯವಾಗಿದೆ ಎಂದು ಟ್ರಂಪ್ ಅವರ ಮಾಲೀಕತ್ವದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ರೂತ್ ಸೋಷಿಯಲ್‌ನಲ್ಲಿ ಘೋಷಿಸಿದ್ದಾರೆ.

ಸತ್ಯ, ಉತ್ತರದಾಯಿತ್ವ ಮತ್ತು ಸಂವಿಧಾನದ ಪ್ರತಿಪಾದಕರಾಗಿ ನಿಂತಿರುವ "ರಷ್ಯಾ ವಂಚನೆ" ಯನ್ನು ಬಯಲಿಗೆಳೆಯುವಲ್ಲಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. 44 ವರ್ಷದ ಪಟೇಲ್ ಅವರು 2017 ರಲ್ಲಿ ಟ್ರಂಪ್ ಆಡಳಿತದ ಕೊನೆಯ ಕೆಲವು ವಾರಗಳಲ್ಲಿ ಯುನೈಟೆಡ್ ಸ್ಟೇಟ್ಸ್ ರಕ್ಷಣಾ ಕಾರ್ಯದರ್ಶಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

ನ್ಯೂಯಾರ್ಕ್ ಮೂಲದ ಪಟೇಲ್ ಅವರು ಮೂಲತಃ ಭಾರತದ ಗುಜರಾತಿನವರು. ಅವರ ಪೋಷಕರು ಪೂರ್ವ ಆಫ್ರಿಕಾದ ತಾಯಿ ತಾಂಜಾನಿಯಾದಿಂದ ಮತ್ತು ತಂದೆ ಉಗಾಂಡಾದಿಂದ ಬಂದವರು. 1970 ರ ದಶಕದಲ್ಲಿ ಕೆನಡಾದಿಂದ ಅಮೆರಿಕಾಕ್ಕೆ ಬಂದರು. 70 ರ ದಶಕದ ಉತ್ತರಾರ್ಧದಲ್ಲಿ ಕುಟುಂಬವು ನ್ಯೂಯಾರ್ಕ್‌ನ ಬಂದು ನೆಲೆಸಿತು. ಕಾಶ್ ಪಟೇಲ್ ಜನಿಸಿದ್ದು ಅಲ್ಲಿಯೇ.

ಪಟೇಲ್ ಅವರ ಪೋಷಕರು ಈಗ ನಿವೃತ್ತರಾಗಿ ಯುಎಸ್ ಮತ್ತು ಗುಜರಾತ್ ಎರಡರಲ್ಲೂ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com