ಹಿಂದೂ ಸಂಸ್ಕೃತಿ ಪಾಲಿಸಿದ್ದಕ್ಕೆ ಬಾಂಗ್ಲಾದಲ್ಲಿ ಥಳಿತ: ಕೋಲ್ಕತ್ತಾ ಯುವಕ ಬಿಚ್ಚಿಟ್ಟ ಕಥೆ ಇದು...

ತಾನು ಭಾರತದ ಹಿಂದೂ ಎಂದು ತಿಳಿದ ನಂತರ ಕೆಲವು ಅನಾಮಧೇಯ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಯುವಕ ಆರೋಪಿಸಿದ್ದಾನೆ.
Kolkata youth attacked in Bangladesh
ಬಾಂಗ್ಲಾದಲ್ಲಿ ಹಲ್ಲೆಗೊಳಗಾದ ಹಿಂದೂ ಯುವಕonline desk
Updated on

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳು ಸೇರಿದಂತೆ ಇನ್ನಿತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳ ನಡುವೆ, ಕೋಲ್ಕತ್ತಾ ಮೂಲದ ಯುವಕನೋರ್ವ ಢಾಕಾದಲ್ಲಿ ತಾನು ಎದುರಿಸಿದ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ.

ತಾನು ಭಾರತದ ಹಿಂದೂ ಎಂದು ತಿಳಿದ ನಂತರ ಕೆಲವು ಅನಾಮಧೇಯ ವ್ಯಕ್ತಿಗಳು ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಯುವಕ ಆರೋಪಿಸಿದ್ದಾನೆ.

ಪಶ್ಚಿಮ ಬಂಗಾಳದ ರಾಜಧಾನಿಯ ಉತ್ತರದ ಅಂಚಿನಲ್ಲಿರುವ ಬೆಲ್ಘಾರಿಯಾ ಪ್ರದೇಶದಿಂದ ಬಂದ ಇಪ್ಪತ್ತೆರಡರ ಹರೆಯದ ಸಯಾನ್ ಘೋಷ್ ನವೆಂಬರ್ 23 ರಂದು ಬಾಂಗ್ಲಾದೇಶಕ್ಕೆ ಹೋಗಿದ್ದರು ಮತ್ತು ಸ್ನೇಹಿತನ ಸ್ಥಳದಲ್ಲಿ ವಾಸಿಸುತ್ತಿದ್ದರು ಮತ್ತು ಕುಟುಂಬವು ಅವರನ್ನು ತಮ್ಮ ಸ್ವಂತ ಮಗನಂತೆ ನೋಡಿಕೊಂಡಿತು.

"ಆದಾಗ್ಯೂ, ನಾನು ಮತ್ತು ನನ್ನ ಸ್ನೇಹಿತ ನವೆಂಬರ್ 26 ರಂದು ಸಂಜೆ ತಡವಾಗಿ ಅಡ್ಡಾಡಲು ಹೊರಟಿದ್ದಾಗ, ನನ್ನ ಸ್ನೇಹಿತನ ನಿವಾಸದಿಂದ 70 ಮೀಟರ್ ದೂರದಲ್ಲಿ ನಾಲ್ಕೈದು ಯುವಕರ ಗುಂಪು ನನ್ನನ್ನು ಅಡ್ಡಗಟ್ಟಿದರು. ಅವರು ನನ್ನ ಗುರುತನ್ನು ಕೇಳಿದರು. ನಾನು ಅವರಿಗೆ ಭಾರತದಿಂದ ಬಂದವನು ಮತ್ತು ಹಿಂದೂ ಎಂದು ಹೇಳಿದಾಕ್ಷಣ ಅವರು ನನಗೆ ಒದೆಯಲು ಮತ್ತು ಗುದ್ದಲು ಪ್ರಾರಂಭಿಸಿದರು ಮತ್ತು ನನ್ನನ್ನು ಉಳಿಸಲು ಪ್ರಯತ್ನಿಸಿದ ನನ್ನ ಸ್ನೇಹಿತನ ಮೇಲೂ ದಾಳಿ ಮಾಡಿದರು ಎಂದು ”ಘೋಷ್ ಪಿಟಿಐಗೆ ತಿಳಿಸಿದ್ದಾರೆ.

Kolkata youth attacked in Bangladesh
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಸಂತನ ಬಂಧನ: ತೀವ್ರಗೊಂಡ ಪ್ರತಿಭಟನೆ

ಆದಾಗ್ಯೂ, ಎರಡು ಖಾಸಗಿ ವೈದ್ಯಕೀಯ ಸೌಲಭ್ಯಗಳಲ್ಲಿ ಚಿಕಿತ್ಸೆ ನಿರಾಕರಿಸಲಾಯಿತು ಮತ್ತು ಅಂತಿಮವಾಗಿ ಢಾಕಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೋದೆವು ಎಂದು ಘೋಷ್ ಹೇಳಿದ್ದಾರೆ.

"ಘಟನೆಯ ಮೂರು ಗಂಟೆಗಳ ನಂತರ ನಾನು ಅಲ್ಲಿ ಚಿಕಿತ್ಸೆ ಪಡೆದಿದ್ದೇನೆ. ನನ್ನ ಹಣೆ ಮತ್ತು ತಲೆಯ ಮೇಲೆ ಹಲವಾರು ಹೊಲಿಗೆಗಳನ್ನು ಹಾಕಲಾಗಿದೆ ಮತ್ತು ನನ್ನ ಬಾಯಿಗೆ ಗಾಯವಾಗಿತ್ತು" ಎಂದು ಘೋಷ್ ತಾವು ಎದುರಿಸಿದ ಭೀಕರ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com