ಬಿಕಿನಿ ಹಾಕಿದ್ದಕ್ಕೆ ಪಾಕ್ ಮಾಡೆಲ್ ಗೆ ಜೀವ ಬೆದರಿಕೆ: ನನ್ನ ದೇಶ ಇನ್ನೂ ಗತಕಾಲದಲ್ಲಿದೆ ಎಂದು ರೋಮಾ ಆಕ್ರೋಶ!

ಪಾಕಿಸ್ತಾನದ ಮಾಡೆಲ್ ರೋಮಾ ಮೈಕೆಲ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅಕ್ಟೋಬರ್‌ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಶನಲ್ 2024 ಸ್ಪರ್ಧೆಯಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು.
Roma Michael
ರೋಮಾ ಮೈಕೆಲ್
Updated on

ಪಾಕಿಸ್ತಾನದ ಮಾಡೆಲ್ ರೋಮಾ ಮೈಕೆಲ್ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅಕ್ಟೋಬರ್‌ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಶನಲ್ 2024 ಸ್ಪರ್ಧೆಯಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಇದು ಮಾಡೆಲ್ ಗೆ ಸಂಕಷ್ಟ ತಂದಿಟ್ಟಿದೆ. ಅಂತಹ ಬಟ್ಟೆಗಳನ್ನು ಧರಿಸುವುದನ್ನು ಪಾಕಿಸ್ತಾನದಲ್ಲಿ ಕಾನೂನುಬಾಹಿರವೆಂದು ಪರಿಗಣಿಸಲಾಗಿದ್ದು ಪಾಕ್ ನಿಂದ ನೇರ ಬೆದರಿಕೆಗಳು ಬರುತ್ತಿವೆ. ಆದರೆ ಅನುಕಂಪದ ಆಧಾರದ ಮೇಲೆ ಭಾರತವು ಆಫರ್ ಗಳ ಸುರಿಮಳೆಯಾಗಿದೆ.

ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ರೂಪದರ್ಶಿ ರೋಮಾ ಮೈಕೆಲ್ ಹೇಳಿದ್ದಾರೆ. ಇದನ್ನು ನಟಿ ಪಾಡ್‌ಕಾಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. ಜಗತ್ತು ತುಂಬಾ ಮುಂದುವರೆದಿದೆ, ಆದರೆ ನೀವು ಪಾಕಿಸ್ತಾನಿಗಳು ಬಹಳ ಹಿಂದೆಯೇ ಹೋಗಿದ್ದೀರಿ, ಪಾಕಿಸ್ತಾನದಲ್ಲಿ ಶಿಕ್ಷಣದ ಕೊರತೆಯಿದೆ, ಬಿಕಿನಿ ಧರಿಸಿದ ನಂತರ, ಈಗಿನ ಪಾಕಿಸ್ತಾನಕ್ಕೆ ಬರಬೇಡಿ, ನನ್ನ ಸ್ನೇಹಿತರು ನನಗೆ ಹೇಳಿದ್ದು. ನಿಮಗೆ ಏನಾದರೂ ಕೆಟ್ಟದಾಗಬಹುದು. ಆ ನಂತರ ನಾನು ತುಂಬಾ ಸಮಯ ಪಾಕಿಸ್ತಾನಕ್ಕೆ ಹೋಗಲಿಲ್ಲ ಎಂದು ಹೇಳಿದರು.

ಇನ್ನು ಮುಂದೆ ನನಗೆ ಪಾಕಿಸ್ತಾನದಲ್ಲಿ ಜೀವನ ಕಷ್ಟಕರವಾಗಬಹುದು. ಕೆಲಸವನ್ನು ಸ್ವತಃ ಮಾಡಲು ಕಷ್ಟವಾಗಬಹುದು. ಏಕೆಂದರೆ ಪಾಕಿಸ್ತಾನಿ ನಾಟಕದ (ಮಾಲಿಕಾ) ಆಡಿಷನ್‌ಗಳನ್ನು ವಿಭಿನ್ನವಾಗಿ ಮಾಡಲಾಗುತ್ತದೆ. ಪಾಕಿಸ್ತಾನದಲ್ಲಿ ನಟಿಯರು ಇಂತಹ ಬಟ್ಟೆ ಧರಿಸುವಂತಿಲ್ಲ. ಸೋಷಿಯಲ್ ಮೀಡಿಯಾದವರು ನನ್ನ ವಿರುದ್ಧ ಅಪಪ್ರಚಾರ ಆರಂಭಿಸಿದರು. ಇದಾದ ನಂತರ ಅಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮತ್ತು ಅಂತಹ ಬಟ್ಟೆಗಳನ್ನು ಧರಿಸುವ ಧೈರ್ಯವನ್ನು ಎಂದು ಪರಿಗಣಿಸಿದರು. ಆದರೆ ನಾನು ಅದನ್ನೆಲ್ಲ ಮೀರಿ ನಡೆದುಕೊಂಡೆ. ಹೀಗಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದು ನನ್ನ ಬೇಡಿಕೆಯಾಗಿದೆ ಎಂದು ರೋಮಾ ಮೈಕೆಲ್ ಹೇಳಿದ್ದಾರೆ.

Roma Michael
ಮಾಜಿ ಬಾಯ್‌ಫ್ರೆಂಡ್‌ ಕೊಲೆ ಕೇಸ್‌ನಲ್ಲಿ ಬಾಲಿವುಡ್‌ ನಟಿ ನರ್ಗೀಸ್ ಫಕ್ರಿ ಸಹೋದರಿ ಅಲಿಯಾ ಬಂಧನ!

ಅಲ್ಲದೆ, ಭಾರತಕ್ಕೆ ಬರಲು ಸಾಕಷ್ಟು ಆಫರ್‌ಗಳಿವೆ. ನನಗೆ ಭಾರತಕ್ಕೆ ಹೋಗಬೇಕೆಂಬ ಆಸೆಯಿದೆ. ಆದರೆ ಸದ್ಯಕ್ಕೆ ನಮ್ಮಿಬ್ಬರ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ. ಬಾಲಿವುಡ್‌ನಲ್ಲಿ ಕೆಲಸ ಮಾಡಲು, ಅಂತರಾಷ್ಟ್ರೀಯ ಕಾರ್ಯಕ್ರಮಗಳನ್ನು ಮಾಡಲು ನಾನು ಬಯಸುತ್ತೇನೆ ಎಂದು ಅವರು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com