ನಿರ್ಗಮನಕ್ಕೂ ಮುನ್ನ ಇದೆಂಥಾ ಅವಮಾನ! ಅಕ್ರಮ ಎಸಗಿದ ಪುತ್ರನಿಗೆ Biden ಕ್ಷಮಾದಾನ!; ಅಮೇರಿಕನ್ನರಲ್ಲಿ ಭುಗಿಲೆದ್ದ ಅಸಮಾಧಾನ

ಬೈಡನ್ ಪುತ್ರ Hunter Biden ವಿರುದ್ಧ ಕ್ರಮವಾಗಿ ಬಂದೂಕು ಖರೀದಿ ಮಾಡಿದ್ದ ಆರೋಪ ಇತ್ತು. ಬಂದೂಕು ಅಪರಾಧ ಮತ್ತು ತೆರಿಗೆ ಸಂಬಂಧಿತ ಪ್ರಕರಣದಲ್ಲಿ ಇತ್ತೀಚೆಗೆ ಹಂಟರ್ ಗೆ ಶಿಕ್ಷೆ ಘೋಷಣೆಯಾಗುವುದರಲ್ಲಿತ್ತು. ಆದರೆ ಇದಕ್ಕೂ ಮೊದಲು ಬೈಡೆನ್ ತಮ್ಮ ಅಧಿಕಾರ ಬಳಸಿ ಪುತ್ರನಿಗೆ ರಕ್ಷಣೆ ನೀಡಿದ್ದಾರೆ.
US president Joe Biden- Hunter Biden
ಅಮೇರಿಕಾ ಅಧ್ಯಕ್ಷ ಜೋ ಬೈಡನ್- ಬೈಡನ್ ಪುತ್ರ ಹಂಟರ್ ಬೈಡನ್online desk
Updated on

ವಾಷಿಂಗ್ ಟನ್: ಶ್ವೇತಭವನದಿಂದ ನಿರ್ಗಮನಕ್ಕೂ ಮುನ್ನ ಅಧ್ಯಕ್ಷ ಜೋ ಬೈಡನ್ ಪುತ್ರ ಹಂಟರ್ ಬೈಡನ್​ಗೆ ಅಕ್ರಮ ಪ್ರಕರಣವೊಂದರಲ್ಲಿ ಕಾನೂನಾತ್ಮಕವಾಗಿ ಕ್ಷಮಾದಾನ ನೀಡಿದ್ದಾರೆ.

ಇದು ಅಮೇರಿಕಾದ ರಾಜಕೀಯ ವಲಯದಲ್ಲಿ ಅಷ್ಟೇ ಅಲ್ಲದೇ ಜನಸಾಮಾನ್ಯರ ವಲಯದಲ್ಲಿಯೂ ಚರ್ಚೆಯ ವಿಷಯವಾಗಿದೆ. ಬೈಡನ್ ಪುತ್ರ Hunter Biden ವಿರುದ್ಧ ಕ್ರಮವಾಗಿ ಬಂದೂಕು ಖರೀದಿ ಮಾಡಿದ್ದ ಆರೋಪ ಇತ್ತು. ಬಂದೂಕು ಅಪರಾಧ ಮತ್ತು ತೆರಿಗೆ ಸಂಬಂಧಿತ ಪ್ರಕರಣದಲ್ಲಿ ಇತ್ತೀಚೆಗೆ ಹಂಟರ್ ಗೆ ಶಿಕ್ಷೆ ಘೋಷಣೆಯಾಗುವುದರಲ್ಲಿತ್ತು. ಆದರೆ ಇದಕ್ಕೂ ಮೊದಲು ಬೈಡೆನ್ ತಮ್ಮ ಅಧಿಕಾರ ಬಳಸಿ ಪುತ್ರನಿಗೆ ರಕ್ಷಣೆ ನೀಡಿದ್ದಾರೆ.

ಹಂಟರ್‌ ಕ್ಷಮಾದಾನಕ್ಕೆ ನಾನು ಸಹಿ ಹಾಕಿದ್ದೇನೆ. ಅಧಿಕಾರ ವಹಿಸಿಕೊಂಡಾಗಿನಿಂದ ನ್ಯಾಯಾಂಗದ ನಿರ್ಧಾರದಲ್ಲಿ ಮಧ್ಯಪ್ರವೇಶಿಸಿರಲಿಲ್ಲ. ಇಲ್ಲಿಯವರೆಗೂ ಆದೇ ರೀತಿ ನಡೆದಿದ್ದೇನೆ. ಪುತ್ರನ ವಿರುದ್ಧ ಅನ್ಯಾಯವಾಗಿ ವಿಚಾರಣೆ ನಡೆದಾಗಲೂ ನಾನು ಮೌನವಾಗಿದ್ದೆ ಎಂದು ಜೋ ಬೈಡನ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಕ್ರಮವಾಗಿ ಬಂದೂಕು ಖರೀದಿಸಿದ್ದ ಪ್ರಕರಣದಲ್ಲಿ ಅಧ್ಯಕ್ಷ ಜೋ ಬೈಡನ್‌ ಪುತ್ರ ಹಂಟರ್ ಬೈಡನ್‌ ವಿರುದ್ಧ ಸೆಪ್ಟೆಂಬರ್ 15,2023ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಇದು ಒಂದು ಪ್ರಕರಣವಾಗಿದ್ದರೆ, ತಾನು ಡ್ರಗ್ಸ್ ಬಳಸುತ್ತಿರಲಿಲ್ಲ ಎಂದು ಹಂಟರ್‌ ಸುಳ್ಳು ಹೇಳಿಕೆ ನೀಡಿದ್ದರು ಎಂಬುದು ಎರಡನೇ ಪ್ರಕರಣವಾಗಿದೆ. ಎರಡು ಪ್ರಕರಣಗಳಲ್ಲಿ ಹಂಟರ್ ದೋಷಿ ಎಂಬುದು ಸಾಬೀತಾಗಿತ್ತು. ಹಂಟರ್ ಬೈಡನ್ ಕ್ಷಮಾದಾನದ ಕುರಿತು ನ್ಯಾಯಮೂರ್ತಿಗಳಿಗೆ ಮಾಹಿತಿ ನೀಡಿದ್ದರು.

ಹಂಟರ್ ಓರ್ವ ಮಾದಕ ವ್ಯಸನಿಯಾಗಿದ್ದು. ಆತನಿಗೆ ತಾವು ಕ್ಷಮಾದಾನ ನೀಡುವುದಾಗಲೀ ಶಿಕ್ಷೆಯನ್ನು ಕಡಿಮೆ ಮಾಡುವುದಾಗಲಿ ಮಾಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದರು.

ಅಧಿಕಾರದ ಕೊನೆಯ ದಿನಗಳಲ್ಲಿರುವ ಜೋ ಬೈಡನ್ ಅವರ ಈ ನಡೆಯ ಕುರಿತು ಅಮೇರಿಕಾ ರಾಜಕಾರಣದಲ್ಲಿ ಚರ್ಚೆ ನಡೆದಿದೆ. ಅಮೇರಿಕಾದ ರಾಜಕಾರಣಿ, ಸೆನೆಟರ್ ಸ್ಯಾಂಡರ್ಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜೋ ಬೈಡನ್ ತಮ್ಮ ಪುತ್ರ ಹಂಟರ್ ಗೆ ಕ್ಷಮಾದಾನ ನೀಡಿರುವುದರ ಹಿಂದಿನ ಭಾವನೆ ನಮಗೆ ಅರ್ಥವಾಗುತ್ತದೆ. ಆದರೆ ಇದೇ ಮುಂದಿನ ದಿನಗಳಲ್ಲಿ ಬರುವ ಅಧ್ಯಕ್ಷರಿಗೆ ಮಾದರಿಯಾಗಬಹುದೆಂಬ ಆತಂಕ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

US president Joe Biden- Hunter Biden
ಭಾರತದಲ್ಲಿ ಅಸ್ಥಿರತೆಗೆ ಯತ್ನ ಆರೋಪ 'ಬೇಸರ ತರಿಸುವಂತಿವೆ': BJP ವಿರುದ್ಧ ಅಮೆರಿಕ ಅಸಮಾಧಾನ

ಇನ್ನು AP-NORC ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್ ರಿಸರ್ಚ್ ಜೋ ಬೈಡನ್ ನಡೆ ಬಗ್ಗೆ ಸಮೀಕ್ಷೆ ನಡೆಸಿದ್ದು 51% ಅಮೆರಿಕನ್ನರು ಹಂಟರ್ ಬೈಡನ್ ಅವರಿಕೆ ಬೈಡನ್ ಕ್ಷಮಾದಾನ ನೀಡಿರುವುದನ್ನು ಬಲವಾಗಿ ನಿರಾಕರಿಸಿದ್ದಾರೆ. 27% ಡೆಮೋಕ್ರಾಟ್‌ಗಳು, ತಟಸ್ಥವಾಗಿರುವ 51% ಮಂದಿ ಮತ್ತು 80% ರಿಪಬ್ಲಿಕನ್‌ಗಳು ಬೈಡನ್ ನಿಲುವನ್ನು ತೀವ್ರವಾಗಿ ವಿರೋಧಿಸಿದ್ದಾರೆ. 58% ರಷ್ಟು ಅಮೆರಿಕನ್ನರು ಜೋ ಬೈಡನ್ ನಿರ್ಧಾರವನ್ನು ಖಂಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com