ಅಬ್ದುಲ್ ರೆಹಮಾನ್ ಮಕ್ಕಿ
ಅಬ್ದುಲ್ ರೆಹಮಾನ್ ಮಕ್ಕಿ

ಭಾರತಕ್ಕೆ ಬೇಕಿದ್ದ ಮೋಸ್ಟ್ ವಾಂಟೆಡ್ ಉಗ್ರ ಮುಂಬೈ ದಾಳಿಯ ಸಂಚುಕೋರ ಪಾಕ್‌ನಲ್ಲಿ ಫಿನೀಶ್!

ಮಕ್ಕಿ ಲಷ್ಕರ್‌ನ ವಾಂಟೆಡ್ ಭಯೋತ್ಪಾದಕನಾಗಿದ್ದನು. ಈತ ಲಷ್ಕರ್ ನಾಯಕ ಹಫೀಜ್ ಸಯೀದ್ ನ ಸೋದರ ಮಾವ ಕೂಡ ಆಗಿದ್ದ. ಮಾಧ್ಯಮ ವರದಿಗಳ ಪ್ರಕಾರ, ಮಕ್ಕಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದನು.
Published on

ಇಸ್ಲಾಮಾಬಾದ್: ಮುಂಬೈ ದಾಳಿಯ ಸಂಚುಕೋರರಲ್ಲಿ ಒಬ್ಬನಾಗಿದ್ದ ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿ ಸಾವನ್ನಪ್ಪಿದ್ದಾನೆ. ನಿಷೇಧಿತ ಜಮಾತ್-ಉದ್-ದವಾದದ ಉಪ ಮುಖ್ಯಸ್ಥನೂ ಆಗಿದ್ದ ಮಕ್ಕಿ ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಸಂಬಂಧಿಯಾಗಿದ್ದನು. ಹೃದಯಾಘಾತದಿಂದ ಮಕ್ಕಿ ಲಾಹೋರ್‌ನಲ್ಲಿ ಮೃತಪಟ್ಟಿದ್ದಾನೆ.

ಪಾಕಿಸ್ತಾನಿ ಟಿವಿ ಚಾನೆಲ್ ವರದಿ ಪ್ರಕಾರ, ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಮಕ್ಕಿ ಲಷ್ಕರ್‌ನ ವಾಂಟೆಡ್ ಭಯೋತ್ಪಾದಕನಾಗಿದ್ದನು. ಈತ ಲಷ್ಕರ್ ನಾಯಕ ಹಫೀಜ್ ಸಯೀದ್ ನ ಸೋದರ ಮಾವ ಕೂಡ ಆಗಿದ್ದ. ಮಾಧ್ಯಮ ವರದಿಗಳ ಪ್ರಕಾರ, ಮಕ್ಕಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದನು. ಲಾಹೋರ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

2019 ಮೇನಲ್ಲಿ ಮಕ್ಕಿಯನ್ನು ಪಾಕಿಸ್ತಾನದಲ್ಲಿ ಬಂಧಿಸಲಾಯಿತು. ಇದಾದ ನಂತರ ಆತನನ್ನು ಲಾಹೋರ್‌ನಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು. 2020ರಲ್ಲಿ ಪಾಕಿಸ್ತಾನಿ ನ್ಯಾಯಾಲಯವು ಭಯೋತ್ಪಾದಕ ಹಣಕಾಸುಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಆತನನ್ನು ದೋಷಿ ಎಂದು ಘೋಷಿಸಿತು ಮತ್ತು ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಜನವರಿ 2023ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು (UNSC) ಮಕ್ಕಿಯನ್ನು 'ಜಾಗತಿಕ ಭಯೋತ್ಪಾದಕ' ಎಂದು ಘೋಷಿಸಿತು. ಇದರ ಅಡಿಯಲ್ಲಿ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಲಾಯಿತು. ಪ್ರಯಾಣ ಮತ್ತು ಶಸ್ತ್ರಾಸ್ತ್ರ ನಿರ್ಬಂಧಗಳನ್ನು ವಿಧಿಸಲಾಯಿತು.

26/11ರ ಮುಂಬೈ ಭಯೋತ್ಪಾದಕ ದಾಳಿಗೆ ಭಯೋತ್ಪಾದಕರಿಗೆ ಮಕ್ಕಿ ಹಣ ಒದಗಿಸಿದ್ದ. ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು. ದಾಳಿಯ ವಿರುದ್ಧ ಸೇನಾ ಕಾರ್ಯಾಚರಣೆಯಲ್ಲಿ ಒಟ್ಟು ಒಂಬತ್ತು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಈ ವೇಳೆ ಭಯೋತ್ಪಾದಕ ಅಮೀರ್ ಅಜ್ಮಲ್ ಕಸಬ್ ಜೀವಂತವಾಗಿ ಸೆರೆ ಸಿಕ್ಕಿದ್ದನು.

ಅಬ್ದುಲ್ ರೆಹಮಾನ್ ಮಕ್ಕಿ
ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಐವರು ಪತ್ರಕರ್ತರು ಸಾವು

ಮುಂಬೈ ಭಯೋತ್ಪಾದನಾ ದಾಳಿಯ ಹೊರತಾಗಿ, ಮಕ್ಕಿ ಕೆಂಪು ಕೋಟೆ ದಾಳಿಯಲ್ಲಿ ಭಾಗಿಯಾಗಿದ್ದರಿಂದ ಭಾರತದ ಭದ್ರತಾ ಏಜೆನ್ಸಿಗಳ ರಾಡಾರ್‌ನಲ್ಲಿದ್ದನು. ಕೆಂಪು ಕೋಟೆಯ ಮೇಲಿನ ದಾಳಿಯನ್ನು 2000 ಡಿಸೆಂಬರ್ 22ರಂದು ನಡೆಸಲಾಯಿತು. ಈ ದಾಳಿಯಲ್ಲೂ ಮಕ್ಕಿಯ ಕೈವಾಡವಿತ್ತು. ದಾಳಿಯಲ್ಲಿ ಆರು ಲಷ್ಕರ್ ಭಯೋತ್ಪಾದಕರು ಕೆಂಪು ಕೋಟೆಗೆ ನುಗ್ಗಿ ಕೋಟೆಯನ್ನು ಕಾವಲು ಕಾಯುತ್ತಿದ್ದ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com