
ಮಾಸ್ಕೋ: ಗ್ರೋಝ್ನಿ ಪ್ರಾಂತ್ಯದ ಬಳಿ ಅಜರ್ ಬಜಾನ್ ಏರ್ ಲೈನ್ಸ್ ಸೇರಿದ ವಿಮಾನ ಅಪಘಾತಕ್ಕೂ ಮುನ್ನಾ ಲ್ಯಾಂಡಿಂಗ್ ಆಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ರಷ್ಯಾದ ವಾಯುಸೇನೆಯು ಕಾರ್ಯಾಚರಣೆ ನಡೆಸುತಿತ್ತು ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಜರ್ ಬೈಜಾನ್ ನ ಅಧ್ಯಕ್ಷ ಇಲ್ ಹ್ಯಾಮ್ ಅಲಿಯೆವ್ ಅವರಿಗೆ ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ 38 ಜನರು ಸಾವನ್ನಪ್ಪಿದ್ದ ವಿಮಾನ ದುರಂತಕ್ಕೆ ರಷ್ಯಾ ವಾಯುಪಡೆ ಕಾರಣ ಎಂಬಂತಹ ವರದಿಗಳು ಹಬ್ಬಿತ್ತು. ಈ ವದಂತಿಗಳ ಬೆನ್ನಲ್ಲೇ ಅಜರ್ ಬೈಜಾನ್ ಅಧ್ಯಕ್ಷರಿಗೆ ಕರೆ ಮಾಡಿರುವ ಪುಟಿನ್, ವಿಮಾನ ಗ್ರೋಝ್ನಿ ಪ್ರಾಂತ್ಯದ ಬಳಿ ಲ್ಯಾಂಡಿಂಗ್ ಆಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಉಕ್ರೇನ್ ಡ್ರೋನ್ ಗಳು ಹಾಗೂ ರಷ್ಯಾದ ವಾಯು ಸೇನೆ ನಡುವೆ ಯುದ್ಧ ನಡೆಯುತಿತ್ತು ಎಂದು ಪುಟಿನ್ ತಿಳಿಸಿರುವುದಾಗಿ ರಷ್ಯಾ ಹೇಳಿದೆ.
ಅಪಘಾತದ ಹೊಣೆ ಹೊತ್ತುಕೊಳ್ಳದ ಪುಟಿನ್, ರಷ್ಯಾದ ವಾಯು ಪ್ರದೇಶದಲ್ಲಿ ಅಪಘಾತ ಸಂಭವಿಸಿರುವುದಕ್ಕೆ ಅಜರ್ ಬೈಜಾನ್ ಅಧ್ಯಕ್ಷರ ಕ್ಷಮೆಯಾಚಿಸಿದ್ದಾರೆ. ದುರಂತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರ ಚೇತರಿಕೆಗಾಗಿ ಹಾರೈಸಿದ್ದಾರೆ ಎಂದು ಹೇಳಿಕೆಯಲ್ಲಿ ರಷ್ಯಾ ತಿಳಿಸಿದೆ.
ಅಪಘಾತ ಕುರಿತು ಉಭಯ ನಾಯಕರು ಸವಿಸ್ತಾರವಾಗಿ ಚರ್ಚಿಸಿದ್ದಾರೆ. ಅಪಘಾತ ಕುರಿತು ಅಜರ್ ಬೈಜಾನ್ ಮತ್ತು ಕಜಕಿಸ್ತಾನ ಜೊತೆಗೆ ನಿಕಟವಾಗಿ ಸಹಕಿರುಸುವುದಾಗಿ ರಷ್ಯಾ ಹೇಳಿದೆ. ವಿಮಾನ ಹಾರಾಟ ಮಧ್ಯದಲ್ಲಿ ವಿಮಾನ ಅಪಘಾತವಾಗಿದೆ ಎಂದು ಅಜರ್ ಬೈಜಾನ್ ಹೇಳಿತ್ತು. ಆದರೆ, ರಷ್ಯಾ ವಾಯುಪಡೆ ಅಪಘಾತದ ಕಾರಣ ಹೊರಬೇಕಾಗಬಹುದು ಎಂದು ಆರಂಭಿಕ ಸೂಚನೆಗಳಿವೆ ಎಂದು ಅಮೆರಿಕ ಹೇಳಿತ್ತು.
Advertisement