ಪಾಕ್ ಪರ ಗೂಢಚಾರಿಕೆ: ಮಾಸ್ಕೋದಲ್ಲಿದ್ದ ಭಾರತೀಯ ವಿದೇಶಾಂಗ ಇಲಾಖೆ ನೌಕರ ಬಂಧನ

ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡುತ್ತಿದ್ದ ಮಾಸ್ಕೋದಲ್ಲಿದ್ದ ಭಾರತದ ವಿದೇಶಾಂಗ ಇಲಾಖೆ ಉದ್ಯೋಗಿಯನ್ನು ಬಂಧಿಸಲಾಗಿದೆ.
ಮಾಸ್ಕೋದಲ್ಲಿದ್ದ ಭಾರತೀಯ ವಿದೇಶಾಂಗ ಇಲಾಖೆ ನೌಕರ ಬಂಧನ
ಮಾಸ್ಕೋದಲ್ಲಿದ್ದ ಭಾರತೀಯ ವಿದೇಶಾಂಗ ಇಲಾಖೆ ನೌಕರ ಬಂಧನ

ಮಾಸ್ಕೋ: ಪಾಕಿಸ್ತಾನಕ್ಕೆ ಮಾಹಿತಿ ರವಾನೆ ಮಾಡುತ್ತಿದ್ದ ಮಾಸ್ಕೋದಲ್ಲಿದ್ದ ಭಾರತದ ವಿದೇಶಾಂಗ ಇಲಾಖೆ ಉದ್ಯೋಗಿಯನ್ನು ಬಂಧಿಸಲಾಗಿದೆ. ಈ ಉದ್ಯೋಗಿ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. 

ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ (ಎಟಿಎಸ್) ತಂಡ ಈ  ಭಾರತೀಯ ನೌಕರನನ್ನು ಮಾಸ್ಕೋದ ರಾಯಭಾರ ಕಚೇರಿಯಿಂದ ಬಂಧಿಸಿದೆ. ಶಹಮಹಿಯುದ್ದೀನ್‌ಪುರ ಗ್ರಾಮದ ನಿವಾಸಿ ಸತೇಂದ್ರ ಸಿವಾಲ್ ಅವರನ್ನು ಲಕ್ನೋದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಅದು ಹೇಳಿದೆ.

ಎಲೆಕ್ಟ್ರಾನಿಕ್ ಮತ್ತು ಭೌತಿಕ ಕಣ್ಗಾವಲು ಮೂಲಕ ಎಟಿಎಸ್ ತನ್ನ ತನಿಖೆಯಲ್ಲಿ 2021 ರಿಂದ ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ IBSA (ಭಾರತ ಆಧಾರಿತ ಭದ್ರತಾ ಸಹಾಯಕ) ಆಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬುದನ್ನು ಕಂಡುಹಿಡಿದಿದೆ. 

ಐಎಸ್‌ಐ ಹ್ಯಾಂಡ್ಲರ್‌ ಗಳಿಗೆ ಹಣ ಪಡೆದು ರಕ್ಷಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಭಾರತೀಯ ಮಿಲಿಟರಿ ಸಂಸ್ಥೆಗಳ ಕಾರ್ಯತಂತ್ರದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪ್ರಮುಖ ಗೌಪ್ಯ ಮಾಹಿತಿಯನ್ನು ಈತ ಒದಗಿಸುತ್ತಿದ್ದ ಎಂದು ಉತ್ತರ ಪ್ರದೇಶ ಎಟಿಎಸ್ ತಿಳಿಸಿದೆ. ಎಟಿಎಸ್ ಮೀರತ್ ಕ್ಷೇತ್ರ ಘಟಕದಿಂದ ಕರೆಸಿದ ಮತ್ತು ನಿಯಮಗಳ ಪ್ರಕಾರ ವಿಚಾರಣೆಗೆ ಒಳಗಾದ ಸಿವಾಲ್, ತೃಪ್ತಿಕರ ಉತ್ತರಗಳನ್ನು ನೀಡಲು ಸಾಧ್ಯವಾಗಲಿಲ್ಲ ಮತ್ತು ವಿಚಾರಣೆಯ ಸಮಯದಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಅದು ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121 ಎ (ದೇಶದ ವಿರುದ್ಧ ಯುದ್ಧ ಮಾಡುವುದು) ಮತ್ತು ಅಧಿಕೃತ ರಹಸ್ಯ ಕಾಯಿದೆ, 1923 ರ ಅಡಿಯಲ್ಲಿ ಲಕ್ನೋದ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಸಿವಾಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com