ಬ್ರಿಟನ್ ರಾಜಕುಮಾರ 3ನೇ ಚಾರ್ಲ್ಸ್ ಗೆ ಕ್ಯಾನ್ಸರ್!

ಬ್ರಿಟನ್ ರಾಜ 3ನೇ ಚಾರ್ಲ್ಸ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಮಾಹಿತಿಯನ್ನು ಬಕಿಂಗ್ಹ್ಯಾಮ್ ಅರಮನೆ ಸ್ಪಷ್ಟಪಡಿಸಿದೆ.
ಕಿಂಗ್ ಚಾರ್ಲ್ಸ್ III
ಕಿಂಗ್ ಚಾರ್ಲ್ಸ್ III

ಲಂಡನ್: ಬ್ರಿಟನ್ ರಾಜ 3ನೇ ಚಾರ್ಲ್ಸ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಮಾಹಿತಿಯನ್ನು ಬಕಿಂಗ್ಹ್ಯಾಮ್ ಅರಮನೆ ಸ್ಪಷ್ಟಪಡಿಸಿದೆ.

ಕಿಂಗ್ ಚಾರ್ಲ್ಸ್ ಒಂದು ರೀತಿಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಬಕಿಂಗ್ ಹ್ಯಾಮ್ ಅರಮನೆ ಹೊರಡಿಸಿದ ಹೇಳಿಕೆ ತಿಳಿಸಿದೆ.

ದಿನನಿತ್ಯದ ಚಿಕಿತ್ಸೆಯಲ್ಲಿ ಕಿಂಗ್ ಚಾರ್ಲ್ಸ್‌ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಹೀಗಾಗಿ ಕಿಂಗ್ ಚಾರ್ಲ್ಸ್ ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮದಲ್ಲಿ ತೊಡಗುವುದಕ್ಕೆ ವೈದ್ಯರು ನಿರಾಕರಿಸಿದ್ದಾರೆ. ಆದಾಗ್ಯೂ, ಈ ಅವಧಿಯಲ್ಲಿ ಅವರು ಅಧಿಕೃತ ಕೆಲಸವನ್ನು ಮುಂದುವರಿಸುತ್ತಾರೆ.

ಕಿಂಗ್ ಚಾರ್ಲ್ಸ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಸುದ್ದಿ ತಿಳಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಅವರು ಶೀಘ್ರದಲ್ಲೇ ಪೂರ್ಣ ಶಕ್ತಿಯೊಂದಿಗೆ ಮರಳುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಕಿಂಗ್ ಚಾರ್ಲ್ಸ್ ಗೆ 75 ವರ್ಷ
ರಾಣಿ ಎಲಿಜಬೆತ್ II ರ ಮರಣದ ನಂತರ, ಕಿಂಗ್ ಚಾರ್ಲ್ಸ್ III ಬ್ರಿಟನ್ನ ರಾಜನಾದರು. ಕಳೆದ ವರ್ಷ ಮೇ ತಿಂಗಳಲ್ಲಿ ಅವರು ಪಟ್ಟಾಭಿಷಿಕ್ತರಾದರು. ಇದರ ನಂತರ ಅವರನ್ನು ಕಿಂಗ್ ಚಾರ್ಲ್ಸ್ III ಎಂದು ಸಂಬೋಧಿಸಲಾಗಿದೆ. ಚಾರ್ಲ್ಸ್ 14 ನವೆಂಬರ್ 1948ರಂದು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಜನಿಸಿದರು. ಅವರ ತಾಯಿ ರಾಣಿ ಎಲಿಜಬೆತ್ II ಪಟ್ಟ ಅಲಂಕರಿಸಿದಾಗ ಅವರು 4 ವರ್ಷ ವಯಸ್ಸಿನವರಾಗಿದ್ದರು. 1969 ರಲ್ಲಿ, 20 ನೇ ವಯಸ್ಸಿನಲ್ಲಿ, ಅವರನ್ನು ಕೇರ್‌ಫಾರ್ನಾನ್ ಕ್ಯಾಸಲ್‌ನಲ್ಲಿ ರಾಣಿ ವೇಲ್ಸ್ ರಾಜಕುಮಾರ ಎಂದು ನೇಮಿಸಿದರು.

ಚಾರ್ಲ್ಸ್ 29 ಜುಲೈ 1981ರಂದು ಡಯಾನಾ ಅವರನ್ನು ವಿವಾಹವಾದರು. ಆ ಮದುವೆಯಿಂದ ಅವರ ಇಬ್ಬರು ಪುತ್ರರಾದ ಪ್ರಿನ್ಸ್ ವಿಲಿಯಂ ಮತ್ತು ಪ್ರಿನ್ಸ್ ಹ್ಯಾರಿ ಜನಿಸಿದರು. ಮದುವೆಯು 28 ಆಗಸ್ಟ್ 1996ರಂದು ಮುರಿದುಬಿತ್ತು. ಏಪ್ರಿಲ್ 9, 2005ರಂದು, ಅವರು ಕ್ಯಾಮಿಲ್ಲಾ ಅವರನ್ನು ವಿವಾಹವಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com