ದೋಹಾಗೆ ಬಂದಿಳಿದ ಪ್ರಧಾನಿ ಮೋದಿ: ಕತಾರ್ ಪ್ರಧಾನಿ ಜೊತೆ ಮಾತುಕತೆ

ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಉಭಯ ನಾಯಕರು ಚರ್ಚೆ
ಕತಾರ್ ದೇಶದ ಪ್ರಧಾನ ಮಂತ್ರಿಗಳ ಜೊತೆ ಮಾತುಕತೆ
ಕತಾರ್ ದೇಶದ ಪ್ರಧಾನ ಮಂತ್ರಿಗಳ ಜೊತೆ ಮಾತುಕತೆ
Updated on

ದೋಹ(ಕತಾರ್): ಬೇಹುಗಾರಿಕೆ ಆರೋಪದಲ್ಲಿ ಎಂಟು ಮಾಜಿ ನೌಕಾಪಡೆ ಸಿಬ್ಬಂದಿಯನ್ನು ಗಲ್ಫ್ ರಾಷ್ಟ್ರ ಕತಾರ್ ಬಿಡುಗಡೆ ಮಾಡಿದ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಬುಧವಾರ ತಡರಾತ್ರಿ ಕತಾರ್‌ ರಾಜಧಾನಿ ದೋಹಾಗೆ ಬಂದಿಳಿದರು.

ಕತಾರ್‌ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಸೋಲ್ತಾನ್ ಬಿನ್ ಸಾದ್ ಅಲ್-ಮುರೈಖಿ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡರು. ಎರಡು ದಿನಗಳ ಭೇಟಿಯಲ್ಲಿ ಪ್ರಧಾನಮಂತ್ರಿಯವರು ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಟ್ವೀಟ್‌ನಲ್ಲಿ, ಪ್ರಧಾನಿ ಮೋದಿ ಅವರು ಕತಾರ್‌ಗೆ "ಫಲಪ್ರದ" ಭೇಟಿಯನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಇದೀಗ ತಾನೇ ದೋಹಾದಲ್ಲಿ ಬಂದಿಳಿದೆ. ಫಲಪ್ರದವಾದ ಕತಾರ್ ಭೇಟಿಯನ್ನು ಎದುರುನೋಡುತ್ತಿದ್ದೇನೆ ಇದು ಭಾರತ-ಕತಾರ್ ಸ್ನೇಹವನ್ನು ಗಾಢವಾಗಿಸುತ್ತದೆ" ಎಂದು ಬರೆದುಕೊಂಡಿದ್ದಾರೆ.

ದೋಹಾದಲ್ಲಿ ಬಂದಿಳಿದ ನಂತರ, ಪ್ರಧಾನಿ ಮೋದಿ ಅವರು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ ಅವರನ್ನು ಭೇಟಿ ಮಾಡಿದರು. ವ್ಯಾಪಾರ ಮತ್ತು ಹೂಡಿಕೆ, ಇಂಧನ, ಹಣಕಾಸು ಮುಂತಾದ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಕುರಿತು "ಫಲಪ್ರದ" ಚರ್ಚೆ ನಡೆಸಿದರು ಎಂದು ಜೈಸ್ವಾಲ್ ಹೇಳಿದರು.

ಯುಎಇಗೆ ತಮ್ಮ ಯಶಸ್ವಿ ಭೇಟಿಯ ನಂತರ ಪ್ರಧಾನಿ ಮೋದಿ ಕತಾರ್‌ಗೆ ಆಗಮಿಸಿದರು, ಅಬಿಧಾಬಿಯಲ್ಲಿ ಅವರು ದೇಶದ ಮೊದಲ ಹಿಂದೂ ದೇವಾಲಯವಾದ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ಉದ್ಘಾಟಿಸಿದರು ಮತ್ತು ಮೆಗಾ 'ಅಹ್ಲಾನ್ ಮೋದಿ ಕಾರ್ಯಕ್ರಮ'ವನ್ನು ಉದ್ದೇಶಿಸಿ ಮಾತನಾಡಿದರು.

ಕತಾರ್ ದೇಶದ ಪ್ರಧಾನ ಮಂತ್ರಿಗಳ ಜೊತೆ ಮಾತುಕತೆ
ಅಬುಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ಲೋಕಾರ್ಪಣೆ: ಏಕತೆ, ಸೌಹಾರ್ದತೆಯ ಸಂಕೇತ- ಪ್ರಧಾನಿ ಮೋದಿ

2016ರಲ್ಲಿ ಕತಾರ್‌ಗೆ ಕೊನೆಯ ಬಾರಿಗೆ ಪ್ರಧಾನಿ ಭೇಟಿ ನೀಡಿದ್ದರು. ಕತಾರ್‌ನ ಎಮಿರ್ 2015ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. 2023 ರಲ್ಲಿ, ಭಾರತ ಮತ್ತು ಕತಾರ್ ಎರಡೂ ದೇಶಗಳ ನಡುವೆ ಪೂರ್ಣ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50 ವರ್ಷಗಳನ್ನು ಗುರುತಿಸಿತು.

ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ವಿಜಯದಲ್ಲಿ ಮಧ್ಯಪ್ರಾಚ್ಯ ದೇಶವು ಸುಮಾರು 18 ತಿಂಗಳುಗಳ ಕಾಲ ಬಂಧಿಸಲ್ಪಟ್ಟಿದ್ದ ಎಂಟು ನೌಕಾಪಡೆಯ ಯೋಧರನ್ನು ಬಿಡುಗಡೆ ಮಾಡಿರುವುದರಿಂದ ಪ್ರಧಾನಿ ಮೋದಿಯವರ ಕತಾರ್ ಭೇಟಿಯು ಮಹತ್ತರವಾದ ಮಹತ್ವವನ್ನು ಪಡೆದುಕೊಂಡಿದೆ.

ಕತಾರ್ ದೇಶದ ಪ್ರಧಾನ ಮಂತ್ರಿಗಳ ಜೊತೆ ಮಾತುಕತೆ
ಯುಎಇಯ ಅಬುಧಾಬಿಯಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದೂ ದೇವಸ್ಥಾನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com