ಇಸ್ರೇಲ್ ಪ್ರಧಾನಿ ನೆತನ್ಯಾಹು
ಇಸ್ರೇಲ್ ಪ್ರಧಾನಿ ನೆತನ್ಯಾಹು

ಅಲ್ಲಿಯವರೆಗೆ...ಗಾಜಾದಲ್ಲಿ ಯುದ್ಧ ಕೊನೆಗೊಳಿಸಲ್ಲ: ನೆತನ್ಯಾಹು

ಇಸ್ರೇಲ್- ಹಮಾಸ್ ಬಂಡುಕೋರರ ನಡುವಿನ ಯುದ್ಧ ಸದ್ಯಕ್ಕೆ ಕೊನೆಗೊಳ್ಳುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಇಸ್ರೇಲ್ ತನ್ನ ಎಲ್ಲಾ ಗುರಿಗಳನ್ನು ಸಾಧಿಸುವವರೆಗೆ, ನಿರ್ದಿಷ್ಟವಾಗಿ ಹಮಾಸ್‌ ನಾಶದವರೆಗೆ ಗಾಜಾದಲ್ಲಿನ ಯುದ್ಧವು ಕೊನೆಗೊಳ್ಳುವುದಿಲ್ಲ ಎಂದು ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.
Published on

ಗಾಜಾ: ಇಸ್ರೇಲ್- ಹಮಾಸ್ ಬಂಡುಕೋರರ ನಡುವಿನ ಯುದ್ಧ ಸದ್ಯಕ್ಕೆ ಕೊನೆಗೊಳ್ಳುವ ಯಾವ ಲಕ್ಷಣಗಳು ಗೋಚರಿಸುತ್ತಿಲ್ಲ. ಇಸ್ರೇಲ್ ತನ್ನ ಎಲ್ಲಾ ಗುರಿಗಳನ್ನು ಸಾಧಿಸುವವರೆಗೆ, ನಿರ್ದಿಷ್ಟವಾಗಿ ಹಮಾಸ್‌ ನಾಶದವರೆಗೆ ಗಾಜಾದಲ್ಲಿನ ಯುದ್ಧವು ಕೊನೆಗೊಳ್ಳುವುದಿಲ್ಲ ಎಂದು ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.

ಮೂರು ತಿಂಗಳ ಹಿಂದೆ ಹಮಾಸ್ ನಮ್ಮ ವಿರುದ್ಧ ಭೀಕರ ಹತ್ಯಾಕಾಂಡ ನಡೆಸಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಮಾಸ್ ನಾಶಗೊಳಿಸಿ, ಒತ್ತೆಯಾಳುಗಳನ್ನು ಮರಳಿ ಕರೆತರಲು ಹಾಗೂ ಗಾಜಾ ಎಂದಿಗೂ ಇಸ್ರೇಲ್‌ಗೆ ಬೆದರಿಕೆಯಾಗದಂತೆ ನೋಡಿಕೊಳ್ಳಲು  ಇಸ್ರೇಲ್ ರಕ್ಷಣಾ ಪಡೆಗೆ ಸರ್ಕಾರ ನಿರ್ದೇಶಿಸಿದೆ. ನಮ್ಮ ಗುರಿ ಸಾಧಿಸುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಹಮಾಸ್‌ಗೆ ಯಾವುದೇ ವಿನಾಯಿತಿ ನೀಡುವುದಿಲ್ಲ. ದಕ್ಷಿಣ ಮತ್ತು ಉತ್ತರ ಎರಡರಲ್ಲೂ ಭದ್ರತೆಯನ್ನು ಪುನಃಸ್ಥಾಪಿಸುವವರೆಗೆ ಹೋರಾಡುತ್ತೇವೆ. ಅಲ್ಲಿಯವರೆಗೆ, ಎಲ್ಲವನ್ನೂ ಬದಿಗಿಡಬೇಕು ಮತ್ತು ಸಂಪೂರ್ಣ ವಿಜಯ ಸಾಧಿಸುವವರೆಗೂ ಸೇನೆಯೊಂದಿಗೆ ನಾವು ಮುಂದುವರೆಯಬೇಕು ಎಂದು ಅವರು  ತಿಳಿಸಿದ್ದಾರೆ. 

X
Open in App

Advertisement

X
Kannada Prabha
www.kannadaprabha.com