ಗಾಜಾದಲ್ಲಿ ಪತ್ರಕರ್ತರ ಸಾವಿನ ಸಂಖ್ಯೆ ಹೆಚ್ಚಳಕ್ಕೆ ವಿಶ್ವಸಂಸ್ಥೆ ಕಳವಳ!

ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಅಲ್ ಜಜೀರಾ ವರದಿಗಾರರು ಮೃತಪಟ್ಟಿದ್ದು ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಪತ್ರಕರ್ತರ ಸಾವು
ಪತ್ರಕರ್ತರ ಸಾವು
Updated on

ಜಿನೀವಾ: ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ಅಲ್ ಜಜೀರಾ ವರದಿಗಾರರು ಮೃತಪಟ್ಟಿದ್ದು ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ತನ್ನ ಇಬ್ಬರು ಪ್ಯಾಲೆಸ್ತೀನ್ ಪತ್ರಕರ್ತರನ್ನು ದಕ್ಷಿಣದ ನಗರ ರಫಾದಲ್ಲಿ ಹತ್ಯೆ ಮಾಡಲಾಗಿದೆ. ಇದು ಇಸ್ರೇಲಿ "ಉದ್ದೇಶಿತ ಹತ್ಯೆ" ಎಂದು ಅಲ್ ಜಜೀರಾ ಹೇಳಿಕೊಂಡಿದೆ.

ಗಾಜಾದಲ್ಲಿ ಮಾಧ್ಯಮ ವರದಿಗಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವ ಬಗ್ಗೆ ತುಂಬಾ ಕಳವಳವಿದೆ ಎಂದು ವಿಶ್ವಸಂಸ್ಥೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. 

ಕಾರಿನ ಮೇಲೆ ನಡೆದ IDF ದಾಳಿಯಲ್ಲಿ  ಹಮ್ಜಾ ವೇಲ್ ದಹದೌಹ್ ಮತ್ತು ಮುಸ್ತಫಾ ಅಬು ತುರಿಯಾ ಮೃತಪಟ್ಟಿದ್ದು ಇದೇ ರೀತಿ ಮೃತಪಟ್ಟಿರುವ ಪತ್ರಕರ್ತರ ಹತ್ಯೆಗಳನ್ನು ಸಂಪೂರ್ಣ ಸ್ವತಂತ್ರವಾಗಿ ತನಿಖೆ ಮಾಡಬೇಕು. ಅಂತರರಾಷ್ಟ್ರೀಯ ಕಾನೂನಿನ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಉಲ್ಲಂಘನೆಗಳನ್ನು ಕಾನೂನು ಕ್ರಮ ಜರುಗಿಸಬೇಕು ಎಂದು ಅದು ಹೇಳಿದೆ.

ಎಎಫ್‌ಪಿ ಮತ್ತು ಇತರ ಸುದ್ದಿ ಸಂಸ್ಥೆಗಳಿಗೆ ಸ್ವತಂತ್ರ ವೀಡಿಯೊ ಪತ್ರಕರ್ತರಾಗಿ ಕೆಲಸ ಮಾಡಿದ ದಹದೌ ಮತ್ತು ತುರಿಯಾ ಅವರು ಗಾಜಾ ಪಟ್ಟಿಯಲ್ಲಿರುವ ಅಲ್ ಜಜೀರಾಗಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಲು ಹೋಗುತ್ತಿದ್ದಾಗ ಹತ್ಯೆಯಾಗಿದ್ದಾರೆ. ಇನ್ನು ಮೂರನೇ ಫ್ರೀಲಾನ್ಸ್ ಪತ್ರಕರ್ತ ಹಝೆಮ್ ರಜಬ್ ಗಂಭೀರವಾಗಿ ಗಾಯಗೊಂಡಿದ್ದಾರೆ  ಎಂದು ನೆಟ್‌ವರ್ಕ್ ಹೇಳಿದೆ.

ಕಾರಿನ ಮೇಲೆ ರಾಕೆಟ್ ಮೂಲಕ ದಾಳಿ ನಡೆಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಎಎಫ್‌ಪಿಗೆ ತಿಳಿಸಿದ್ದಾರೆ. ಒಂದು ವಾಹನದ ಮುಂಭಾಗಕ್ಕೆ ಮತ್ತು ಇನ್ನೊಂದು ಚಾಲಕನ ಪಕ್ಕದಲ್ಲಿ ಕುಳಿತಿದ್ದ ದಹದೌಹ್‌ಗೆ ತಗುಲಿತ್ತು.

ಕಳೆದ ಅಕ್ಟೋಬರ್ 7ರ ಹಮಾಸ್ ನಡೆಸಿದ್ದ ದಾಳಿಯಲ್ಲಿ ಇಸ್ರೇಲ್‌ನಲ್ಲಿ ಸುಮಾರು 1,140 ಮಂದಿ ಮೃತಪಟ್ಟಿದ್ದರು. ನಂತರ ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com